Health Tips: ದಿನವಿಡೀ ಕಚೇರಿ ಅಥವಾ ಕೆಲಸದ ಆಯಾಸದ ನಂತರ, ಜನರು ರಾತ್ರಿ ಊಟದ ನಂತರ ನೇರವಾಗಿ ಮಲಗಲು ಹೋಗುತ್ತಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಆರೋಗ್ಯವಾಗಿರಲು ಎಷ್ಟು ಆಹಾರ ಅಗತ್ಯವೋ ಅಷ್ಟು ಸರಿಯಾಗಿ ಜೀರ್ಣವಾಗಬೇಕು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅನೇಕ ಅಪಾಯಕಾರಿ ಕಾಯಿಲೆಗಳು ಬರಬಹುದು. ಆದ್ದರಿಂದ, ರಾತ್ರಿಯ ಊಟದ ನಂತರ, ಕನಿಷ್ಟ 10 ನಿಮಿಷಗಳ ಕಾಲವಾದರೂ ನಡೆಯಬೇಕು. ನೀವು ಪ್ರತಿದಿನ ವ್ಯಾಯಾಮ ಮಾಡದಿದ್ದರೂ, 10 ನಿಮಿಷಗಳ ನಡಿಗೆ ಕೂಡ ನಿಮ್ಮನ್ನು ಆರೋಗ್ಯವಾಗಿಡಬಹುದು. ರಾತ್ರಿ ಊಟದ ನಂತರ ವಾಕ್ ಮಾಡುವುದರಿಂದ ಫಿಟ್ ಆಗಿರುವುದರ ಜೊತೆಗೆ ಇತರ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೊಣಕೈ ಮೇಲಿನ ಕಪ್ಪು ಕಲೆಯನ್ನು ಸುಲಭವಾಗಿ ಹೋಗಲಾಡಿಸುತ್ತೆ ಈ ಮನೆಮದ್ದು


ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ : 


ದೈನಂದಿನ ನಡಿಗೆ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿ ಊಟದ ನಂತರ ವಾಕ್ ಮಾಡುವುದರಿಂದ ನಿಮ್ಮ ದೇಹವು ಹೆಚ್ಚು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿನಿತ್ಯ ರಾತ್ರಿ ಊಟ ಮಾಡುವುದರಿಂದ ಮಲಬದ್ಧತೆಯಂತಹ ಕಾಯಿಲೆಗಳು ದೂರವಾಗುತ್ತವೆ.


ಚಯಾಪಚಯವನ್ನು ಹೆಚ್ಚಿಸುತ್ತದೆ :


ರಾತ್ರಿ ಊಟದ ನಂತರ ವಾಕಿಂಗ್ ಮಾಡುವುದರಿಂದ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ದಹಿಸುತ್ತದೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನೀವು ಫಿಟ್ ಆಗಿರುತ್ತೀರಿ. ಇದು ಚಯಾಪಚಯವನ್ನು ಉತ್ತೇಜಿಸುತ್ತದೆ. ಇದಲ್ಲದೇ ರಾತ್ರಿ ವಾಕಿಂಗ್‌ ಮಾಡಿದರೆ ಒಳ್ಳೆಯ ನಿದ್ದೆ ಸಹ ಬರುತ್ತದೆ.


ಒತ್ತಡ ದೂರವಾಗುತ್ತದೆ : 


ರಾತ್ರಿ ಊಟದ ನಂತರ ವಾಕ್ ಮಾಡುವುದರಿಂದ ದೈಹಿಕ ಸಮಸ್ಯೆಗಳು ದೂರವಾಗುವುದಲ್ಲದೆ, ಮಾನಸಿಕ ಒತ್ತಡವೂ ದೂರವಾಗುತ್ತದೆ. ವಾಕಿಂಗ್ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ಸ್ವಲ್ಪ ವಾಕಿಂಗ್‌ ಮಾಡಿದರೆ ಫ್ರೆಶ್‌ ಫೀಲ್‌ ಆಗುತ್ತದೆ.


ಇದನ್ನೂ ಓದಿ: Jaggery Benefits: ಅಸ್ತಮಾ ರೋಗಿಗಳಿಗೆ ಮನೆಮದ್ದು ಬೆಲ್ಲ! ಸೇವಿಸುವ ವಿಧಾನ ಇಲ್ಲಿದೆ


ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ : 


ರಾತ್ರಿ ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಈ ಕಾರಣದಿಂದಾಗಿ, ದೇಹದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಪ್ರತಿಕಾಯಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ ಮತ್ತು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಅಂದರೆ, ಪ್ರತಿದಿನ ರಾತ್ರಿ ಊಟದ ನಂತರ ವಾಕಿಂಗ್ ಮಾಡುವುದರಿಂದ ಕೋವಿಡ್-19 ನಂತಹ ಸಾಂಕ್ರಾಮಿಕ ರೋಗಗಳನ್ನು ತಪ್ಪಿಸಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.