Alert! ಸೌಂದರ್ಯವರ್ಧಕಗಳಲ್ಲಿನ ಈ ರಾಸಾಯನಿಕ Cancerಗೂ ಕಾರಣ ಎಚ್ಚರ!
Poisonous Chemical In Beauty Products - ಸುಂದರವಾಗಿ ಕಾಣಲು ನೀವು ನಿತ್ಯ ಬಳಸುವ ಸೌಂದರ್ಯವರ್ಧಕ ಉತ್ಪನ್ನಗಳಿಂದ ನಿಮಗೆ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಅಧ್ಯಯನವೊಂದು ಈ ಅಂಶವನ್ನು ಬಹಿರಂಗಪಡಿಸಿದೆ.
ನವದೆಹಲಿ: Poisonous Chemical In Beauty Products - ಕೊರೊನಾ ಕಾಲದಲ್ಲಿ ಇಂದು ನಾವು ನಿಮಗೆ ಹೇಳಲು ಹೊರಟಿರುವ ಒಂದು ಸಂಗತಿಯಿಂದ ನೀವು ಸ್ವಲ್ಪ ಎಚ್ಚರಿಕೆಯನ್ನು ವಹಿಸಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ಪಾರಾಗಬಹುದು.
ಶರೀರವನ್ನು ಸುಂದರಗೊಳಿಸುವ ಕಾಸ್ಮೆಟಿಕ್ ನಲ್ಲಿ ವಿಷ
ಸುಂದರವಾಗಿ ಕಾಣಲು ನೀವು ಬಳಸುವ ಲಿಪ್ ಸ್ಟಿಕ್, ಐ ಶೇಡ್ ಅದರಲ್ಲೂ ಪ್ರಮುಖವಾಗಿ ಕಣ್ಣುರೆಪ್ಪೆಗಳನ್ನು ಗಾಢವಾಗಿಸಲು ಬಳಸುವ ಸೌಂದರ್ಯ ವರ್ಧಕಗಳಲ್ಲಿ ವಿಷಕಾರಿ ಪದಾರ್ಥ ಬಳಸಿರುತ್ತಾರೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಇತ್ತೀಚೆಗಷ್ಟೇ ನಡೆಸಲಾಗಿರುವ ರಿಯಾಲಿಟಿ ಚೆಕ್ ನಲ್ಲಿ ಹಲವು ಸೌಂದರ್ಯ ವರ್ಧಕ ಗಳಲ್ಲಿ ಫ್ಲೋರಿನ್ (Fluorine) ಇರುವುದು ಪತ್ತೆಯಾಗಿದೆ. ಹೀಗಿರುವಾಗ ನಾವೂ ಕೂಡ ಅಪಾಯದಲ್ಲಿ ಬೀಳದೆ, ಲಿಪ್ಸ್ಟಿಕ್ ಹಾಗೂ ನಿಮ್ಮ ಇತರೆ ಮೇಕಪ್ ಸಾಧನಗಳನ್ನೂ ಹೇಗೆ ಆಯ್ಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರಸ್ತುತ ಕೊರೊನಾದಿಂದ (Coronavirus) ರಕ್ಷಣೆ ಪಡೆಯಲು ಜನರು ಮಾಸ್ಕ್ ಧರಿಸುತ್ತಿದ್ದಾರೆ. ಆದರೆ, ಮಾಸ್ಕ್ ಕೆಳಗಡೆಯೂ ಕೂಡ ಅಪಾಯ ಇದ್ದು, ಈ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಈ ಅಪಾಯ ವೈರಸ್ ಅಪಾಯವಾಗಿರದೆ, ವಿಷಕಾರಿ ಕೆಮಿಕಲ್ ಅಪಾಯ ಇದಾಗಿದೆ. ಈ ಕೆಮಿಕಲ್ (Chemical) ನೀವು ಬಳಸುವ ಸೌಂದರ್ಯವರ್ಧಕಗಳಲ್ಲಿ ಪತ್ತೆಯಾಗಿದೆ. ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ. ಲಿಪ್ ಸ್ಟಿಕ್, ಮಸ್ಕರಾ, ಐಶೇಡ್ ಹಾಗೂ ಫೌಂಡೇಶನ್ ಗಳಿಂದ ನಿಮಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.
ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ ಈ ಸಂಗತಿ
ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ (Environmental Science and Technology Report) ಇತ್ತೀಚೆಗಷ್ಟೇ ಪ್ರಕಟಿಸಿದ ಒಂದು ಅಧ್ಯಯನ ವರದಿಯಲ್ಲಿ ಮೊದಲ ಬಾರಿಗೆ ಮೇಕಪ್ ಉತ್ಪನ್ನಗಳಲ್ಲಿ ವಿಷಕಾರಿ ಫ್ಲೋರಿನ್ ರಾಸಾಯನಿಕ ಕಂಡುಬಂದಿದೆ ಎಂದು ಹೇಳಿದೆ. ಈ ರಾಸಾಯನಿಕವು ಲಿಪ್ಸ್ಟಿಕ್, ಮಸ್ಕರಾ ಮತ್ತು ಫೌಂಡೇಶನ್ ಗಳಲ್ಲಿ ಕಂಡುಬರುತ್ತದೆ. ಈ ಅಧ್ಯಯನವನ್ನು ಕ್ಯಾಲಿಫೋರ್ನಿಯಾದ ಗ್ರೀನ್ ಸೈನ್ಸ್ ಪಾಲಿಸಿ ಇನ್ಸ್ಟಿಟ್ಯೂಟ್ ನಡೆಸಿದೆ.
ಈ ಸಂಸ್ಥೆ ಅಮೆರಿಕ ಮತ್ತು ಕೆನಡಾದ ದೊಡ್ಡ ಪ್ರಸಿದ್ಧ ಬ್ರಾಂಡ್‌ಗಳ ಮೇಲೆ ಈ ಅಧ್ಯಯನವನ್ನು ಮಾಡಿದೆ. ಅಧ್ಯಯನದ ಸಮಯದಲ್ಲಿ, ಲಿಪ್ಸ್ಟಿಕ್, ಐಲೈನರ್, ಲಿಪ್ ಬಾಮ್, ಬ್ಲಶ್, ನೇಲ್ ಪಾಲಿಶ್, ಮಸ್ಕರಾ ಮತ್ತು ಫೌಂಡೇಶನ್‌ನಂತಹ 231 ಉತ್ಪನ್ನಗಳ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿನ ಅರ್ಧದಷ್ಟು ಮಾದರಿಗಳಲ್ಲಿ ವಿಷಕಾರಿ ರಾಸಾಯನಿಕಗಳು ಕಂಡುಬಂದಿವೆ. ಅದೇ ಸಮಯದಲ್ಲಿ, ಶೇ.52 ರಷ್ಟು ಉತ್ಪನ್ನಗಳಲ್ಲಿ ಕಲಬೆರಕೆ ಕೂಡ ಕಂಡುಬಂದಿದೆ ಎಂದು ವರದಿ ಹೇಳಿದೆ.
82% ಜಲನಿರೋಧಕ ಮಸ್ಕರಾ ಬ್ರಾಂಡ್‌ಗಳು, 63% ಫೌಂಡೇಶನ್ ಮತ್ತು 62% ಲಿಕ್ವಿಡ್ ಲಿಪ್‌ಸ್ಟಿಕ್ ಬ್ರಾಂಡ್‌ಗಳಲ್ಲಿ ಫ್ಲೋರಿನ್ ಇದೆ ಎಂಬುದನ್ನು ಅಧ್ಯಯನ ಹೇಳಿದೆ.
ಹಾಗಾದರೆ ಈ ಫ್ಲೋರಿನ ಅಂದರೆ ಏನು ತಿಳಿದುಕೊಳ್ಳೋಣ ಬನ್ನಿ? ಫ್ಲೋರಿನ್ ಅನ್ನು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಆದರೆ ಸೀಮಿತ ಪ್ರಮಾಣದಲ್ಲಿ ಮಾತ್ರ. ಫ್ಲೋರೀನ್ ಅನ್ನು ಪರಮಾಣು ವಸ್ತುಗಳನ್ನು ತಯಾರಿಸಲು ಮತ್ತು ಪ್ಲಾಸ್ಟಿಕ್ ತಯಾರಿಸಲು ಸಹ ಬಳಸಲಾಗುತ್ತದೆ. ಆದರೆ, ಇದನ್ನು ಅನಿಲ ರೂಪದಲ್ಲಿ ಅಥವಾ ಅತ್ಯಧಿಕ ಪ್ರಮಾಣದಲ್ಲಿ ಬಳಸಿದರೆ, ಅದು ಅತ್ಯಂತ ಅಪಾಯಕಾರಿ. ಇದು ರಾಸಾಯನಿಕ ಕ್ಯಾನ್ಸರ್ (Cancer), ಪಿತ್ತಜನಕಾಂಗದ ಕಾಯಿಲೆ, ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.
ಜನರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ
ಇದರಲ್ಲಿ ಇನ್ನೊಂದು ಬೆಚ್ಚಿಬೀಳಿಸುವ ಮಾಹಿತಿ ಎಂದರೆ, ಸೌಂದರ್ಯವರ್ಧಕ ವಸ್ತುಗಳ ಲೇಬಲ್‌ನಲ್ಲಿ ಫ್ಲೋರಿನ್ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗುವುದಿಲ್ಲ. ಶೇ. 88 ರಷ್ಟು ಉತ್ಪನ್ನಗಳು ಸರಿಯಾದ ಮಾಹಿತಿಯನ್ನು ಸಹ ನೀಡುವುದಿಲ್ಲ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಸೌಂದರ್ಯವರ್ಧಕಗಳಲ್ಲಿ ಕಲಬೆರಕೆ ಕಂಡು ಬಂದಿರುವುದು ಇದೇ ಮೊದಲಲ್ಲ. ಹೀಗಾಗಿ ನೀವು ಜಾಗರೂಕರಾಗಿರಬೇಕು. ಈ ಅಧ್ಯಯನವನ್ನು ವಿದೇಶದಲ್ಲಿ ಮಾಡಲಾಗಿದೆ ಆದರೆ ಭಾರತದಲ್ಲಿ ನಿಮಗೆ ಸುರಕ್ಷಿತ ಮೇಕಪ್ ಸಾಧನಗಳು ಸಿಗುವ ಸಾಧ್ಯತೆ ಕೂಡ ಇದೆ. ಆದರೆ ಭಾರತದಲ್ಲಿ ದೊರೆಯುವ ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳು ವಿದೇಶಗಳಿಂದ ಸ್ಫೂರ್ತಿ ಪಡೆದಿರುವುದರಿಂದ ಇದನ್ನು ಖಚಿತಪಡಿಸಲಾಗುವುದಿಲ್ಲ.
Global Journals ನೀಡಿದ ಒಂದು ವರದಿಯ ಪ್ರಕಾರ, ಪ್ರಪಂಚದಲ್ಲಿ ಹೆಚ್ಚುತ್ತಿರುವ ಸೌಂದರ್ಯವರ್ಧಕಗಳ ಬಳಕೆಯೊಂದಿಗೆ, ಅವುಗಳ ಉತ್ಪಾದನೆಯಲ್ಲಿ ಬಳಸಲಾಗುವ ರಾಸಾಯನಿಕಗಳ ಪ್ರಮಾಣವೂ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಜನರು ಅನೇಕ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಅಡ್ಡಪರಿಣಾಮಗಳಲ್ಲಿ ಸಾಮಾನ್ಯವೆಂದರೆ ಎಸ್ಜಿಮಾದಂತಹ ಚರ್ಮ ರೋಗಗಳು. ಇದಲ್ಲದೆ, ಕಣ್ಣುಗಳಲ್ಲಿ ಕಿರಿಕಿರಿ, ಕೂದಲು ಉದುರುವುದು ಮತ್ತು ಕ್ಯಾನ್ಸರ್ ಮುಂತಾದ ಮಾರಣಾಂತಿಕ ಕಾಯಿಲೆಗಳು ಸಹ ಸಂಭವಿಸುತ್ತವೆ.
1. Diazolidinyl Urea
ಬೇಬಿ ಪೌಡರ್, ಕಣ್ಣಿನ ಶ್ಯಾಡೋಗಳು, ಬೇಬಿ ಲೋಷನ್ಗಳು, ಫೇಸ್ ಕ್ರೀಮ್‌ಗಳಂತಹ ವೈಯಕ್ತಿಕ ಆರೈಕೆ ಉತ್ಪನ್ನಗಳಿಗೆ ಸೇರಿಸಲಾದ ಈ ಅಪಾಯಕಾರಿ ರಾಸಾಯನಿಕಗಳು ನಿಮ್ಮನ್ನು ಕ್ಯಾನ್ಸರ್ ಮತ್ತು ಚರ್ಮದ ಕಾಯಿಲೆಗಳ ರೋಗಿಯನ್ನಾಗಿ ಮಾಡಬಹುದು ಎಂದು ವರದಿ ಹೇಳಿದೆ.
2. Formaldehyde
Preservatives ಆಗಿ ಬಳಸಲ್ಪಡುವ ಈ ರಾಸಾಯನಿಕವು ನಿಮ್ಮನ್ನು ಕ್ಯಾನ್ಸರ್ಗೆ ಗುರಿಯಾಗಿಸುತ್ತದೆ.
3. Heavy Metals
ಜಡ ಲೋಹಗಳ ಕುರಿತು ಹೇಳುವುದಾದರೆ, ಲಿಪ್ ಸ್ಟಿಕ್, ಐಶ್ಯಾಡೋ ಹಾಗೂ ಫೇಸ್ ಪೌಡರ್ ಗಳಲ್ಲಿ ಕಂಡುಬರುವ Antimonyಗಳಿಂದ ನಿಮಗೆ ಹೊಟ್ಟೆನೋವು, ವಾಂತಿ, ಬೇಧಿ ಹಾಗೂ ಪುಪ್ಪುಸದ ಸಮಸ್ಯೆ ಎದುರಾಗಿ Emphysema ಆಗುವ ಸಾಧ್ಯತೆ ಕೂಡ ಇದೆ. ಸ್ಕಿನ್ ಕ್ರೀಂಗಳಲ್ಲಿ ಹಾಗೂ ಮೇಕಪ್ ಪೌಡರ್ ಗಳಲ್ಲಿ ಬಳಕೆಯಾಗುವ Arsenic ನಿಂದ ನಿಮಗೆ ಲಂಗ್ಸ್ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ. ಹೆಯರ್ ಕ್ರೀಂ, ಲಿಪ್ಸ್ಟಿಕ್ ಹಾಗೂ ಸ್ಕಿನ್ ಕ್ರೀಂಗಳಲ್ಲಿ ಬಳಸಲಾಗುವ Cadmium ನಿಂದ ನಿಮಗೆ ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದರ ದೀರ್ಘಾವಧಿ ಬಳಕೆಯಿಂದ ನಿಮ್ಮ ಮೂಳೆಗಳು ಕೂಡ ಶಿಥಿಲಗೊಳ್ಳಬಹುದು.
4. Parabens
ಪ್ಯಾರಾಬೆನ್ ರಾಸಾಯನಿಕವನ್ನು ಸೌಂದರ್ಯವರ್ಧಕದಲ್ಲಿ ಸಂರಕ್ಷಕವಾಗಿ (Preservatives) ಬಳಸಲಾಗುತ್ತದೆ. ಆದರೆ ಶ್ಯಾಂಪೂ ಮತ್ತು ಬಾಡಿ ಕ್ರೀಮ್‌ಗಳಲ್ಲಿ ಬಳಸುವ ಈ ರಾಸಾಯನಿಕವು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳ ಮೂಲವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಪ್ಯಾರಾಬೆನ್‌ಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಇದನ್ನು ನಿಮ್ಮ ಉತ್ಪನ್ನದಲ್ಲಿ ಇರಿಸಲಾಗುತ್ತದೆ ಇದರಿಂದ ಅದು ಹೆಚ್ಚು ಕಾಲ ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಉತ್ಪನ್ನದ ವಯಸ್ಸು ನಿಮಗೆ ಮುಖ್ಯವಾಗಿದೆಯೋ ಅಥವಾ ನಿಮ್ಮ ವಯಸ್ಸು ಎಂಬುದನ್ನು ನೀವೇ ನಿರ್ಧರಿಸಬೇಕು.
5. Sulphates (Sodium lauryl Sulphate SLS and Sodium Laureth Sulphate SLES)
ಶ್ಯಾಂಪೂಗಳು, ಟೂತ್‌ಪೇಸ್ಟ್‌ಗಳು ಮತ್ತು ಸಾಬೂನುಗಳಲ್ಲಿ ಬಳಸುವ ಸೋಡಿಯಂ ಲಾರಿಲ್ ಸಲ್ಫೇಟ್ ಎಂಬ ರಾಸಾಯನಿಕವು ನಿಮ್ಮ ಕೂದಲು, ಹಲ್ಲು ಮತ್ತು ಚರ್ಮಕ್ಕೆ ಅತ್ಯಂತ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಇದರ ದೀರ್ಘ ಬಳಕೆಯು ನಿಮ್ಮ ಕಣ್ಣು ಮತ್ತು ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ದಿನಗಳಲ್ಲಿ ನಿಮ್ಮ ಕೂದಲು ತುಂಬಾ ಉದುರುತ್ತಿದೆ ಎಂದು ನೀವು ಭಾವಿಸಿದರೆ, ಅದಕ್ಕೆ ನಿಮ್ಮ ಶಾಂಪೂದಲ್ಲಿ ಸೇರಿಸಲಾದ ಸೋಡಿಯಂ ಲಾರಿಲ್ ಸಲ್ಫೇಟ್ ಕಾರಣವಾಗಿರಬಹುದು.
ಇದನ್ನೂ ಓದಿ-China's Cyber Attack On India: ಭಾರತದ ವಿರುದ್ಧ ಚೀನಾ ಹೊಸ ಕುತಂತ್ರ, ಪ್ರಮುಖ ಸಂಸ್ಥೆಗಳ ಮೇಲೆ Cyber Attack!
6.Talc
ಚಿಕ್ಕ ಮಕ್ಕಳಿಗೆ ಬಳಸಲಾಗುವ ಬೇಬಿ ಪೌಡರ್ ನಿಂದ ಹಿಡಿದು ಐ ಶ್ಯಾಡೋಗಳಲ್ಲಿ Talc ಒಂದು ಪ್ರಮುಖ ಇನ್ಗ್ರಿಡಿಯೆಂಟ್ ಆಗಿ ಬಳಕೆಯಾಗುತ್ತದೆ ಈ ಟಾಲ್ಕ್ ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ, ಟಾಲ್ಕ್ ಒಂದು ಖನಿಜವಾಗಿದೆ, ಇದು ಕ್ಯಾನ್ಸರ್ ಉಂಟುಮಾಡುವ ಕಲ್ನಾರಿನ ಗಣಿ ಬಳಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಟಾಲ್ಕ್‌ನಲ್ಲಿ ಕಲ್ನಾರಿನ ಕಲಬೆರಕೆಯ ಅಪಾಯವಿದೆ. ಅಂತಹ ಕಲಬೆರಕೆ ಟಾಲ್ಕ್ ಅನ್ನು ಬಳಸುವ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಲಾಗಿದೆ.
ಇದನ್ನೂ ಓದಿ-ಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊವಿಡ್-19 ಮೂರನೇ ಅಲೆ! ಜಾಗತಿಕ 40 ತಜ್ಞರು ಹೇಳಿದ್ದೇನು?
7.ಸೌಂದರ್ಯವರ್ಧಕಗಳ ಹೆಚ್ಚುವರಿ ಮಾರುಕಟ್ಟೆ ನಕಲಿಯಾಗಿದೆ
ಇಂತಹ ಪರಿಸ್ಥಿತಿಯಲ್ಲಿ ಸೌಂದರ್ಯ ಸಾಧನಗಳ ಈ ಸಂಪೂರ್ಣ ಮಾರುಕಟ್ಟೆ ನಕಲಿಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸುತ್ತದೆ. ಯಾವುದೇ ಸಾಧನ ಬಳಸಿದರು ಅಪಾಯಕಾರಿಯೇ? ಸ್ಪಷ್ಟವಾಗಿ ಹೇಳುವುದಾದರೆ, ಇದು ನಿಜ. ಆದರೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಬಳಸಲಾಗುವ ಸನ್ ಸ್ಕ್ರೀನ್ ಹಾಗೂ ಕೂದಲನ್ನು ಸ್ವಚ್ಛಗೊಳಿಸಲು ಶಾಂಪೂ ಬಳಕೆ ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಒಳ್ಳೆಯ ಬ್ರಾಂಡ್ ಹಾಗೂ ಕಂಪನಿಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಇದರಿಂದ ಪಾರಾಗಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಸ್ವಲ್ಪ ಮಟ್ಟಿಗಾದರು ಹಾನಿಯಿಂದ ಪಾರಾಗಬಹುದು. ಆದರೆ, ದುಬಾರಿಯಾಗಿರುವ ಎಲ್ಲ ಕಾಸ್ಮೆಟಿಕ್ ಗಳು ಸುರಕ್ಷಿತವಾಗಿವೆ ಎಂಬುದರ ಗ್ಯಾರಂಟಿಗೂ ಕೂಡ ಇಲ್ಲ ಎಂಬುದು ನೆನಪಿರಲಿ.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ
ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಚರ್ಮವನ್ನು ಗುರುತಿಸಿ. ಯಾವುದೇ ಒಂದು ಉತ್ಪನ್ನದಿಂದ ಚರ್ಮಕ್ಕೆ ಕಿರಿಕಿರಿ ಉಂಟಾದಲ್ಲಿ ತಕ್ಷಣ ಅದರ ಉಪಯೋಗ ಬಂದ್ ಮಾಡಿ. ಸ್ಕಿನ್ ಲೈಟ್ ನಿಂಗ್ ಅಥವಾ ಫೇರ್ ನೆಸ್ ಕ್ರೀಂ ಬಳಸಿ ಬಿಸಿಲಿನಲ್ಲಿ ಹೋಗಬೇಡಿ. ದೆಹಲಿಯಂತಹ ಪ್ರದೇಶದಲ್ಲಿ 15 ರಿಂದ 20 SPF ಇರುವ ಸನ್ ಕ್ರೀಂ ಸಾಕಾಗುತ್ತದೆ. ಸೂರ್ಯನ ಹೊಡೆತ ಜಾಸ್ತಿ ಇರುವ ಪರ್ವತ ಪ್ರದೇಶಗಳಲ್ಲಿ ಮಾತ್ರ SPF 40 ಇರುವ ಕ್ರೀಂ ಅವಶ್ಯಕತೆ ಬೀಳುತ್ತದೆ. ಹೆಯರ್ ಡೈ ನಿಂದ ಕಣ್ಣುರಿತ ಅಥವಾ ಅಂಗೈಯಲ್ಲಿ ತುರಿಕೆ ಉಂಟಾದರ ಅದರ ಬಳಕೆ ಸ್ಥಗಿತಗೊಳಿಸಿ. ಹರ್ಬಲ್ ಸೌಂದರ್ಯವರ್ಧಕಗಳಲ್ಲಿಯೂ ಕೂಡ ಕೆಮಿಕಲ್ ಗಳಿರುತ್ತವೆ ನೆನಪಿಡಿ. ಅವುಗಳಿಂದಲೂ ಕೂಡ ಸುರಕ್ಷತೆಯ ಗ್ಯಾರಂಟಿ ಇಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.