Covid-19 Third Wave In India - ಬರುವ ಅಕ್ಟೋಬರ್ ನಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊವಿಡ್-19 ಮೂರನೇ ಅಲೆ! ವಿಶ್ವಾದ್ಯಂತದ ಸುಮಾರು 40 ತಜ್ಞರು ಹೇಳಿದ್ದೇನು?

World's Health Experts On Covid-19 Third Wave In India - ಈ ಓಪಿನಿಯನ್ ಪೋಲ್ ಪ್ರಕಾರ ಶೇ.85 ರಷ್ಟು ವೈದ್ಯಕೀಯ ತಜ್ಞರು (Mecical Experts), ಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊವಿಡ್-19ನ ಮೂರನೇ ಅಲೆ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಉಳಿದ ತಜ್ಞರು ಈ ಅಲೆಯ ಪ್ರಕೋಪ ಸೆಪ್ಟೆಂಬರ್ ಹಾಗೂ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಎರಡನೇ ಅಲೆಯ ಹೋಲಿಕೆಯಲ್ಲಿ ಭಾರತ ಮೂರನೇ ಅಲೆಯನ್ನು ಸಾಕಷ್ಟು ಸಿದ್ಧತೆಗಳಿಂದ ಎದುರಿಸಲಿದೆ ಎಂದೂ ಕೂಡ ಅವರು ಹೇಳಿದ್ದಾರೆ. 

Written by - Nitin Tabib | Last Updated : Jun 18, 2021, 10:37 PM IST
  • ಮುಂಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊರೊನಾ ಮೂರನೇ ಅಲೆಯ ತಾಂಡವ.
  • ವಿಶ್ವಾದ್ಯಂತ ಸುಮಾರು 40 ತಜ್ಞರ ಪೈಕಿ ಶೇ.85 ರಷ್ಟು ತಜ್ಞರ ಅಭಿಮತ,
  • ಮೂರನೇ ಅಲೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಆರಂಭವಾಗುವ ಸಾಧ್ಯತೆ ಎಂದ ಉಳಿದ ತಜ್ಞರು.
Covid-19 Third Wave In India - ಬರುವ ಅಕ್ಟೋಬರ್ ನಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊವಿಡ್-19 ಮೂರನೇ ಅಲೆ! ವಿಶ್ವಾದ್ಯಂತದ ಸುಮಾರು 40 ತಜ್ಞರು ಹೇಳಿದ್ದೇನು? title=
Coronavirus Third Wave (File Photo)

ಬೆಂಗಳೂರು:  World's Health Experts On Covid-19 Third Wave In India - ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ಸೃಷ್ಟಿಸಿರುವ ಅಪಾರ ಹಾನಿಯ ಬಳಿಕ ಇದೀಗ ಮೂರನೇ ಅಲೆಯ (Coronavirus Third Wave) ಶಂಕೆಗಳನ್ನು ನಿರಂತರವಾಗಿ ವ್ಯಕ್ತಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಮುಖ ವೈದ್ಯಕೀಯ ಸಲಹೆಗಾರರು ಕೂಡ ಮೂರನೇ ಅಲೆ ಬಂದೆ ಬರಲಿದೆ ಎಂದು ಹೇಳಿದ್ದಾರೆ. ಆದರೆ, ಮೂರನೇ ಅಲೆ ಎಷ್ಟು ಅಪಾಯಕಾರಿ ಸಾಬೀತಾಗಲಿದೆ ಎಂಬುದರ ಕುರಿತು ಸಂಶೋಧನೆ ಮುಂದುವರೆದಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ವಿಶ್ವಾದ್ಯಂತದ ಸುಮಾರು 40 ವೈದ್ಯಕೀಯ ತಜ್ಞರು (Global Medical Experts Opinion) ಈ ಕುರಿತು ಓಪಿನಿಯನ್ ಪೋಲ್ ನಡೆಸಿದ್ದಾರೆ.

ಈ ಸಮೀಕ್ಷೆಯ ಪ್ರಕಾರ, ಬರುವ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ಕೊರೊನಾ ವೈರಸ್ ನ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಸುಮಾರು ಶೇ.85 ರಷ್ಟು ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಕೆಲವರು ಭಾರತದಲ್ಲಿ ಕೊರೊನಾ ವೈರಸ್ ನ ಮೂರನೆಯ ಅಲೆಯ ಪ್ರಕೋಪ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಆದರೆ, ಇದೇ ವೇಳೆ ಈ ತಜ್ಞರಲ್ಲಿ ಶ್.70 ರಷ್ಟು ತಜ್ಞರು, ಎರಡನೇ ಅಲೆಯ (Coronavirus Second Wave) ಹೋಲಿಕೆಯಲ್ಲಿ 3ನೇ ಅಲೆಯನ್ನು ಭಾರತ ಸಾಕಷ್ಟು ಸಿದ್ಧತೆಗಳಿಂದ ಎದುರಿಸಲಿದೆ ಎಂದಿದ್ದಾರೆ. 

ಮೂರನೇ ಅಲೆಯ ನಿಯಂತ್ರಣ ಸಾಧ್ಯ, ವ್ಯಾಕ್ಸಿನೆಶನ್ ಪ್ರಮಾಣದಲ್ಲಿ ಭಾರಿ ಏರಿಕೆ
ಈ ಕುರಿತು ಮಾತನಾಡಿರುವ AIIMS ನಿರ್ದೇಶಕ ಡಾ. ರಣದೀಪ್ ಗುಲೇರಿಯಾ (Dr. Ranadeep Guleria), 'ದೇಶದಲ್ಲಿ ಲಸಿಕಾಕರಣದ ಪರಿಧಿ ಸಾಕಷ್ಟು ಹೆಚ್ಚಾದ ಕಾರಣ, ಭಾರತದಲ್ಲಿ ಮೂರನೇ ಅಲೆಯನ್ನು ಬೇಗನೆ ನಿಯಂತ್ರಣಕ್ಕೆ ತರುವ ಸಾಧ್ಯತೆಯನ್ನು ವರ್ತಿಸುತ್ತಿದ್ದಾರೆ. ಎರಡನೇ ಅಲೆಯ ಹೋಲಿಕೆಯಲ್ಲಿ ಇದೀಗ ಭಾರತದಲ್ಲಿ ಸಾಕಷ್ಟು ಜನರು ಕೊವಿಡ್ ಲಸಿಕೆಯನ್ನು (Corona Vaccine) ಹಾಕಿಸಿಕೊಂಡಿದ್ದಾರೆ ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ

ಮಕ್ಕಳ ಮೇಲೆ ಮೂರನೇ ಅಲೆಯ ಹೆಚ್ಚು ಪ್ರಭಾವ, 2/3 ರಷ್ಟು ತಜ್ಞರ ಅಭಿಮತ
ಮೂರನೆಯ ಅಲೆ ಮಕ್ಕಳ (Covid-19 Impact On Children) ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ಆದರೆ, ಈ ವಾದವನ್ನು 2/3 ರಷ್ಟು ಒಪ್ಪಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ತಜ್ಞರೊಬ್ಬರು 18 ಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ಇದುವರೆಗೆ ವ್ಯಾಕ್ಸಿನ್ ಇಲ್ಲದೆ ಇರುವ ಕಾರಣ ಈ ಅಪಾಯ ಎದುರಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ಇನ್ಮುಂದೆ ಪುರುಷರೂ ಗರ್ಭಧರಿಸಬಹುದು, ತಲೆಕೆಟ್ಟ ಚೀನಾ ವಿಜ್ಞಾನಿಗಳ ವಿಲಕ್ಷಣ ಆವಿಷ್ಕಾರ

ಈ ಕುರಿತು ಈ ಮೊದಲು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (World Health Organization) ಮತ್ತು AIIMS ಸಿರೋಪ್ರೆವೆಲೆಂಸ್ ಸಮೀಕ್ಷೆ, ಕೊರೊನಾ ವೈರಸ್ ನ ಮೂರನೇ ಅಲೆಯ ಪ್ರಭಾವ ವಯಸ್ಕರಿಗೆ ಹೋಲಿಸಿದರೆ, ಮಕ್ಕಳ ಮೇಲೆ ತುಂಬಾ ಕಡಿಮೆ ಇರಲಿದೆ ಎಂದಿವೆ. ತಮ್ಮ ಹೊಸ ಅಧ್ಯಯನ ದಲ್ಲಿ WHO ಹಾಗೂ AIIMS ವಿಭಿನ್ನ ಹಕ್ಕುಗಳನ್ನು ಮಂಡಿಸಿವೆ. ಸಮೀಕ್ಷೆಯ ಪ್ರಕಾರ ವಯಸ್ಕರರ ಹೋಲಿಕೆಯಲ್ಲಿ ಮಕ್ಕಳಲ್ಲಿ ಸಿರೋ ಪಾಜಿಟಿವಿಟಿ ದರ (AIIMS Sero Survey) ತುಂಬಾ ಹೆಚ್ಚಗಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-​29 ದೇಶಗಳಲ್ಲಿ ದೊರೆತ ಕೊವಿಡ್-19 ಲ್ಯಾಮ್ದಾ ರೂಪಾಂತರಿ, WHO ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News