ನವದೆಹಲಿ: ನಿಮಗೂ ಕೂಡ ಒಂದು ವೇಳೆ ಸಿಗರೆಟ್ ಸೇದುವ ಅಭ್ಯಾಸವಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಸಿಗರೆಟ್ ಸೇದುವ ಚಟ ನಿಮ್ಮಲ್ಲಿ ಕೊರೊನಾ ಸೋಂಕಿಗೆ (Coronavirus) ಕಾರಣವಾಗಬಹುದು. ಕ್ಯಾಲಿಫೋರ್ನಿಯಾ ವಿವಿಯಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಧೂಮಪಾನದ ಚಟ ಇರುವ ಜನರು ಕೊರೊನಾ ಸೋಂಕಿಗೆ ಗುರಿಯಾಗುವ ಸಾಧ್ಯತೆ ಶೇ.3 ರಿಂದ ಶೇ.5 ಹೆಚ್ಚು ಎಂದು ಈ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca


ಇಮ್ಯೂನಿಟಿ ಸಿಸ್ಟಂ ದುರ್ಬಲಗೊಳ್ಳುತ್ತದೆ
ಹೆಚ್ಚು ಸಿಗರೇಟು ಸೇದುವುದು ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಕರೋನಾ ಸೋಂಕು ದೇಹಕ್ಕೆ ಸುಲಭವಾಗಿ ಪ್ರವೇಶಿಸಲು ಕಾರಣವಾಗುತ್ತದೆ. ಧೂಮಪಾನವು ಉಸಿರಾಟದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಇದರ ಜೊತೆಗೆ, ನ್ಯುಮೋನಿಯಾ , ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವೂ ಕೂಡ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಧೂಮಪಾನಿಗಳು ಸುಲಭವಾಗಿ ಕರೋನಾ ಸೋಂಕಿಗೆ ಬಲಿಯಾಗುತ್ತಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನು ಓದಿ- Good News:'ಈ ದಿನ ಅಮೇರಿಕಾದಲ್ಲಿ Corona Vaccineನ ಮೊದಲ ಲಸಿಕೆ ನೀಡಲಾಗುವುದು'


ಸ್ಮೋಕಿಂಗ್ ನಿಂದ ಶ್ವಾಸಕೋಶದ ಮೇಲೆ ಪ್ರಭಾವ
 ಈ ಕುರಿತು ಹೇಳಿಕೆ ನೀಡಿರುವವ ಮುಖ್ಯ ಸಂಶೋಧಕ ಬ್ರಿಗಿಟ್ ಗೊಂಪೆರ್ಟ್,  ಸಿಗರೇಟಿನಿಂದ ಬರುವ ಹೊಗೆಯಿಂದ  ದೇಹದಲ್ಲಿನ ಇಂಟರ್ಫೆರಾನ್ ಎಂಬ ಕೋಶ ಕೆಲಸ ಮಾಡುವುದನ್ನು ನಿಲ್ಲಿಸಿ  ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಈ ಕೋಶವು ನಮ್ಮ ಶ್ವಾಸಕೋಶವನ್ನು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸುವಲ್ಲಿ ಬಲವಾದ ಶೀಲ್ಡ್ ನಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಅತಿಯಾದ ಧೂಮಪಾನದಿಂದಾಗಿ, ಈ ಶಿಲ್ದ್ ನಲ್ಲಿ ಅಲ್ಲಲ್ಲಿ ರಂಧ್ರಗಳು ತಯಾರಾಗುತ್ತವೆ  ಮತ್ತು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನ ಮಾಡುವ ಮಧುಮೇಹ ರೋಗಿಗಳು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ವಾಸ್ತವವಾಗಿ, ಮಧುಮೇಹ ಕಾಯಿಲೆ ಇರುವ ಸಿಗರೆಟ್ ವ್ಯಸನಿಗಳಲ್ಲಿ ಇಡೀ ದೇಹದ ನಾಳಗಳು ದುರ್ಬಲವಾಗಿರುತ್ತವೆ. ಈ ಕಾರಣದಿಂದಾಗಿ, ಶ್ವಾಸಕೋಶದ ಕಾರ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.


ಇದನ್ನು ಓದಿ- ಭಾರತದಲ್ಲಿ ಫೆಬ್ರುವರಿವರೆಗೆ Corona Vaccine ಸಿಗುವ ಸಾಧ್ಯತೆ, ಬೆಲೆ ಎಷ್ಟು ಇಲ್ಲಿದೆ ವಿವರ


ಇ-ಸಿಗರೆಟ್ ಸೇವನೆ ಕೂಡ ಅಪಾಯಕಾರಿ
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಇ-ಸಿಗರೆಟ್ ಸೇದುವುದು ಕೂಡ ಕರೋನಾ ವೈರಸ್ ಸೋಂಕಿನ ಅಪಾಯವನ್ನು ಐದು ರಿಂದ ನೂರು ಪ್ರತಿಶತದಷ್ಟು ಹೆಚ್ಚಿಸುತ್ತದೆ. ವಾಸ್ತವವಾಗಿ, ಅದರೊಳಗೆ ಇರುವ ನಿಕೋಟಿನ್ ಮತ್ತು ಇತರ ರಾಸಾಯನಿಕಗಳು ದೇಹಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇ-ಸಿಗರೆಟ್ ಮತ್ತು ಕರೋನಾ ನಡುವಿನ ಸಂಪರ್ಕವನ್ನು ಕಂಡುಹಿಡಿಯಲು ಸಂಶೋಧಕರು ನಾಲ್ಕು ಸಾವಿರಕ್ಕೂ ಹೆಚ್ಚು ಜನರ ಅಧ್ಯಯನ ನಡೆಸಿದ್ದಾರೆ. ಪರಿಣಾಮವಾಗಿ, ಐದು ಪಟ್ಟು ಹೆಚ್ಚು ಅಪಾಯ ಕಂಡುಬಂದಿದೆ. ವಿಶೇಷವೆಂದರೆ, ಸಿಗರೇಟ್ ಮತ್ತು ಇ-ಸಿಗರೆಟ್ ಧೂಮಪಾನಿಗಳಲ್ಲಿ ಸೋಂಕಿನ ದರ ಶೇ.7 ರಷ್ಟು ಇದೆ ಎಂದು ಕಂಡುಬಂದಿದೆ.


ಇತ್ತೀಚೆಗೆ, ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಎಚ್ಚರಿಕೆ ನೀಡಲಾಗಿದೆ. ಧೂಮಪಾನ ಅಥವಾ ಇ-ಸಿಗರೆಟ್ ಸೇವನೆಯು ಕರೋನಾ ವೈರಸ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.