ಬೆಂಗಳೂರು : ಕಪ್ಪು, ಉದ್ದ ರೇಷ್ಮೆಯಂಥಹ ಕೂದಲು  ಪ್ರತಿಯೊಬ್ಬ ಮಹಿಳೆಯ ಬಯಕೆ.   ಆದರೆ ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಿಂದಾಗಿ ಕೂದಲು ದುರ್ಬಲವಾಗಿ ಉದುರಲು ಆರಂಭವಾಗುತ್ತದೆ.ಒಮ್ಮೆ ಕೂದಲು ಉದುರುವುದಕ್ಕೆ ಆರಂಭವಾದರೆ ಅದು ಕೂದಲ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ಮತ್ತೆ ಕೂದಲು ಬೆಳೆಯುವಂತೆ ಮಾಡಲು ನಾನಾ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ.ಇಲ್ಲಿ  ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳತ್ತ ಗಮನ ಹರಿಸುತ್ತಾರೆ.ಆದರೆ  ಇದ್ಯಾವುದೂ ಶಾಶ್ವತ ಪರಿಹಾರ ನೀಡುವುದಿಲ್ಲ, ಬದಲಾಗಿ ಅಡ್ಡ ಪರಿಣಾಮ ಬೀರುವ ಅಪಾಯವೂ ಇರುತ್ತದೆ. 


COMMERCIAL BREAK
SCROLL TO CONTINUE READING

ಪ್ರತಿ ಆರೋಗ್ಯ ಸಮಸ್ಯೆಗೂ ಮನೆ ಮದ್ದು ಇರುವಂತೆ ಕೂದಲಿನ ಆರೋಗ್ಯಕ್ಕೂ ಮನೆ ಮದ್ದು ಬಳಸಬಹುದು.ಕೂದಲಿಗೆ ಬಳಸುವ ಮನೆಮದ್ದುಗಳಲ್ಲಿ ಅಲೋವೆರಾ ಕೂಡಾ ಒಂದು. ಅಲೋವೆರಾ ನಮ್ಮ ಆರೋಗ್ಯ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿ.ಇದರಲ್ಲಿ ವಿಟಮಿನ್,ಮಿನರಲ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೇರಳವಾಗಿದ್ದು,ಕೂದಲಿಗೆ ಪೋಷಕಾಂಶವನ್ನು ಒದಗಿಸಿ ತೇವಾಂಶವನ್ನು ಕಾಪಾಡುತ್ತದೆ.ಇದು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಇದರ ನಿಯಮಿತ ಬಳಕೆಯಿಂದ,ಕೂದಲು ಬುಡದಿಂದಲೇ ಬಲವಾಗಿ,ಉದ್ದವಾಗಿ ಬೆಳೆಯುತ್ತದೆ. ಮತ್ತು ಬೇರುಗಳಿಂದ ದಪ್ಪವಾಗುತ್ತದೆ.


ಇದನ್ನೂ ಓದಿ : ಒಂದು ಟೂತ್ ಬ್ರಷ್ ಅನ್ನು ಎಷ್ಟು ದಿನ ಬಳಸಬಹುದು..? ಬ್ರಷ್‌ಗೂ ಮುಕ್ತಾಯ ದಿನಾಂಕ ಇರುತ್ತಾ..?


ಅಲೋ ವೆರಾ ಮತ್ತು ತೆಂಗಿನ ಎಣ್ಣೆ : 
ಕೂದಲು ಬೆಳೆಯಲು ಅಲೋವೆರಾ ಮತ್ತು ತೆಂಗಿನ ಎಣ್ಣೆಯನ್ನು ಬಳಸಬಹುದು. ಒಂದು ಬಟ್ಟಲಿನಲ್ಲಿ 3-4 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.ಇದಕ್ಕೆ ಎರಡು ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ.ಇದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದ ಮೇಲೆ ಸುಮಾರು 1 ಗಂಟೆಗಳ ಕಾಲ ಹಾಗೆಯೇ ಬಿಡಿ.ನಂತರ ಲಘು ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.ವಾರದಲ್ಲಿ 2 ರಿಂದ 3 ಬಾರಿ ಹೀಗೆ ಮಾಡುವುದರಿಂದ ಕೂದಲು ಬಹಳ ಬೇಗನೆ ಉದ್ದ ಬೆಳೆಯುತ್ತದೆ. 


ಅಲೋ ವೆರಾ ಮತ್ತು ಈರುಳ್ಳಿ ರಸ :
ಅಲೋವೆರಾ ಮತ್ತು ಈರುಳ್ಳಿ ರಸದ ಮಿಶ್ರಣವು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ಈರುಳ್ಳಿ ರಸವು ಸಲ್ಫರ್ ಅನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಇದಕ್ಕಾಗಿ,ಒಂದು ಬಟ್ಟಲಿನಲ್ಲಿ 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ.ಇದಕ್ಕೆ 3-4 ಚಮಚ ಈರುಳ್ಳಿ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಿಯ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಸುಮಾರು 1 ಗಂಟೆಯ ನಂತರ, ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.ಈ ಮಿಶ್ರಣವನ್ನು ಕೂದಲಿಗೆ ವಾರಕ್ಕೆ 1 ರಿಂದ 2 ಬಾರಿ  ಹಚ್ಚಬಹುದು. ಇದು ಕೂದಲನ್ನು ಬೇರಿನಿಂದಲೇ  ಬಲಪಡಿಸುವುದರೊಂದಿಗೆ  ಕೂದಲು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ :   ಜೇನುತುಪ್ಪದಲ್ಲಿ ನೆನೆಸಿದ ಈ 3 ಡ್ರೈ ಫ್ರೂಟ್ಸ್ ತಿನ್ನಿ, ದೇಹದ ದೌರ್ಬಲ್ಯ ದೂರವಾಗುತ್ತದೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.