ತೂಕ ಇಳಿಕೆಯಿಂದ ಹೈಡ್ರೇಶನ್ ವರೆಗೆ ಪ್ರಯೋಜನಕಾರಿ ಈ ನೀರು!
Benefits of tender coconut water : ಎಳನೀರು ಕುಡಿಯುವುದರಿಂದ ದೇಹ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತದೆ.
ಬೆಂಗಳೂರು : ಅತ್ಯಂತ ಕಡಿಮೆ ದರದ ನೈಸರ್ಗಿಕ ಪಾನೀಯವೆಂದರೆ ಎಳ ನೀರು. ಈ ಅದ್ಭುತ ಪಾನೀಯವು ದೇಹದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಉತ್ತಮವಾಗಿದೆ. ಎಳನೀರು ಕುಡಿಯುವುದರಿಂದ ದೇಹ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತದೆ.
ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯ :
ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ದೇಹದಲ್ಲಿನ ರಕ್ತದ ಹರಿವು ಮತ್ತು ಇತರ ಬದಲಾವಣೆಗಳನ್ನು ಹೆಚ್ಚಿಸಲು ನೀರು ಸಹಾಯ ಮಾಡುತ್ತದೆ. ಇದನ್ನು ಎಲೆಕ್ಟ್ರೋಲೈಟ್ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಎಲೆಕ್ಟ್ರೋಲೈಟ್‌ಗಳನ್ನು ಹೆಚ್ಚಿಸಲು ಸಹಾಯ ಮಾಡುವ ಪಾನೀಯಗಳಲ್ಲಿ ಒಂದು ಎಳನೀರು. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಅಗತ್ಯ ಖನಿಜಗಳನ್ನು ಹೊಂದಿರುತ್ತದೆ. ಇದು ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್ ಗಳನ್ನು ಮತ್ತೆ ದೇಹಕ್ಕೆ ನೀಡುತ್ತದೆ.
ಇದನ್ನೂ ಓದಿ : ಪುರುಷರೇ ಬೊಕ್ಕ ತಲೆ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದೀರಾ? ಚಿಂತೆ ಬಿಟ್ಟು ಈ ಸುದ್ದಿ ಓದಿ!
ಎಳನೀರಿಗೆ ದೇಹದಲ್ಲಿರುವ ಜೀವಕೋಶಗಳನ್ನು ರಕ್ಷಿಸುವ ಶಕ್ತಿ ಇರುವುದರಿಂದ ದೇಹದ ಅಂಗಾಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಎಳನೀರು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ದೀರ್ಘಕಾಲದ ಕಾಯಿಲೆಗಳಾದ ಕ್ಯಾನ್ಸರ್, ಆಲ್ಝೈಮರ್ಸ್, ಹೃದ್ರೋಗ ಮತ್ತು ಪಾರ್ಶ್ವವಾಯುಗಳನ್ನು ತಪ್ಪಿಸಲು ಎಳನೀರು ಕುಡಿಯಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ :
ಎಳನೀರಿನಲ್ಲಿ ಫೈಬರ್ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನೂ ತಡೆಯುತ್ತದೆ. ಹೆವಿ ಆಹಾರವನ್ನು ಸೇವಿಸಿ ನಂತರ ನೀರು ಅಥವಾ ತೆಂಗಿನ ನೀರು ಕುಡಿದರೆ ಆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಪದೇ ಪದೇ ಜೀರ್ಣಕ್ರಿಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸಹಕಾರಿ.
ಇದನ್ನೂ ಓದಿ : ಪುರುಷರೇ ಬೊಕ್ಕ ತಲೆ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದೀರಾ? ಚಿಂತೆ ಬಿಟ್ಟು ಈ ಸುದ್ದಿ ಓದಿ!
ಕಡಿಮೆ ಕ್ಯಾಲೋರಿಗಳು:
ಇತರ ಪಾನೀಯಗಳಿಗೆ ಹೋಲಿಸಿದರೆ, ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಸೋಡಾ ಅಥವಾ ಇತರ ಫಿಜ್ಜಿ ಪಾನೀಯಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದರೆ, ಎಳ ನೀರು ಹಾಗಲ್ಲ. ಎಳನೀರು ಬಾಯಾರಿಕೆಯನ್ನು ನೀಗಿಸಲು ಮತ್ತು ದೇಹದ ಸಕ್ಕರೆ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮೂಳೆಯನ್ನು ಬಲಪಡಿಸುತ್ತದೆ :
ಎಳನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಧಿಕವಾಗಿದೆ. ಇವೆರಡೂ ಮೂಳೆಗಳ ಆರೋಗ್ಯಕ್ಕೆ ಸಹಾಯಕ. ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಎಳನೀರು ಕುಡಿದರೆ ಮೂಳೆ ಸವೆಯುವುದನ್ನು ತಪ್ಪಿಸಬಹುದು ಎನ್ನುತ್ತಾರೆ ವೈದ್ಯರು. ಪ್ರತಿದಿನ ಎಳನೀರು ಕುಡಿಯುವುದು ಮೂಳೆಗಳಿಗೆ ಒಳ್ಳೆಯದು.
ಇದನ್ನೂ ಓದಿ : ಕಿಡ್ನಿ ಆರೋಗ್ಯವಾಗಿರಬೇಕಾದರೆ ಈ ಎರಡು ಎಣ್ಣೆಗಳನ್ನೇ ಅಡುಗೆಗೆ ಬಳಸಬೇಕು !
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :
ಎಳನೀರಿನಲ್ಲಿರುವ ಪೊಟ್ಯಾಸಿಯಮ್ ನಮ್ಮ ದೇಹದಲ್ಲಿ ಸೋಡಿಯಂನ ನಕಾರಾತ್ಮಕ ಪರಿಣಾಮಗಳ ವಿರುದ್ಧ ಹೋರಾಡುವ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಕಡಿಮೆ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎರಡನ್ನೂ ನಿವಾರಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.