Health Tips : ಮಣ್ಣಿನ ಹಂಚಿನಲ್ಲಿ ಬೇಯಿಸುವ ರೊಟ್ಟಿ ಅಥವಾ ಚಪಾತಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ?
ಅಲ್ಯೂಮಿನಿಯಂ ಶೇ.87 ರಷ್ಟು, ಹಿತ್ತಾಳೆಯಲ್ಲಿ ಶೇ.7 ರಷ್ಟು ಮತ್ತು ಕಂಚಿನಲ್ಲಿ ಶೇ.3 ರಷ್ಟು ಆಹಾರದ ಪೌಷ್ಟಿಕಾಂಶವನ್ನು ನಾಶಮಾಡುತ್ತವೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಆಹಾರದ ಶೇ.100 ರಷ್ಟು ಪೌಷ್ಟಿಕತೆಯು ಸುರಕ್ಷಿತವಾಗಿರುತ್ತದೆ.
ಕಾಲ ಬದಲಾದಂತೆ ನಮ್ಮ ಅಭ್ಯಾಸಗಳು ಕೂಡ ಬದಲಾಗಿವೆ. ಮೊದಲು ಭಾರತದಲ್ಲಿ, ಮಣ್ಣಿನ ಹಂಚಿನಲ್ಲಿ ರೊಟ್ಟಿ ಬೇಯಿಸುವ ಪದ್ಧತಿ ಇತ್ತು. ಆದರೆ ಕ್ರಮೇಣ ಮಣ್ಣಿನ ಬಾಣೆಲೆ ಹೋಗಿ ಕಬ್ಬಿಣ, ಉಕ್ಕು ಮತ್ತು ನಾನ್-ಸ್ಟಿಕ್ ಪ್ಯಾನ್ ಆಗಿ ಬದಲಾಯಿಸಲಾಗಿದೆ. ಆದ್ರೆ ಅರೋಗ್ಯ ದೃಷ್ಟಿಯಿಂದ ಮಣ್ಣಿನ ಬಾಣೆಲೆ ಮಾಡಿದ ರೊಟ್ಟಿ ಅಥವಾ ಚಪಾತಿಯ ಪ್ರಯೋಜನಗಳ ಬಗ್ಗೆ ತಿಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಮಣ್ಣಿನ ಬಾಣಲೆಯಲ್ಲಿ ರೊಟ್ಟಿ ಮಾಡುವುದು ಹೆಚ್ಚು ಪ್ರಯೋಜನಕಾರಿ.
ಮಣ್ಣಿನ ಬಾಣಲೆಯಲ್ಲಿ ಮಾಡಿದ ರೊಟ್ಟಿ ಏಕೆ ಹೆಚ್ಚು ಪ್ರಯೋಜನಕಾರಿ?
ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು ಹೇಳುವ ಪ್ರಕಾರ, ಅಲ್ಯೂಮಿನಿಯಂ ಶೇ.87 ರಷ್ಟು, ಹಿತ್ತಾಳೆಯಲ್ಲಿ ಶೇ.7 ರಷ್ಟು ಮತ್ತು ಕಂಚಿನಲ್ಲಿ ಶೇ.3 ರಷ್ಟು ಆಹಾರದ ಪೌಷ್ಟಿಕಾಂಶವನ್ನು ನಾಶಮಾಡುತ್ತವೆ. ಆದರೆ ಮಣ್ಣಿನ ಪಾತ್ರೆ(Clay Tawa)ಯಲ್ಲಿ ಆಹಾರದ ಶೇ.100 ರಷ್ಟು ಪೌಷ್ಟಿಕತೆಯು ಸುರಕ್ಷಿತವಾಗಿರುತ್ತದೆ.
ಇದನ್ನೂ ಓದಿ : Daily Health Tips : ಹಾಲು, ಮಾಂಸ ಸೇರಿದಂತೆ ಈ 8 ಆಹಾರಗಳನ್ನು ಸೇವಿಸುವ ಸರಿಯಾದ ಸಮಯ ಯಾವುದು ಗೊತ್ತಾ?
ಮಣ್ಣಿನ ಹಂಚಿನಲ್ಲಿ ರೊಟ್ಟಿ ಬೇಯಿಸುವುದರಿಂದಾಗುವ ಲಾಭಗಳು
ಡಾ. ಅಬ್ರಾರ್ ಮುಲ್ತಾನಿಯವರ ಪ್ರಕಾರ, ಮಣ್ಣಿನ ಬಾಣಲೆಯಲ್ಲಿ ರೊಟ್ಟಿ ಬೇಯಿಸುವ ಮೂಲಕ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು.
- ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೊಟ್ಟೆಯ ಗ್ಯಾಸ್ ಸಮಸ್ಯೆ(Gas Problem)ಯಿಂದ ಬಳಲುತ್ತಿದ್ದಾರೆ. ಆದರೆ, ಮಣ್ಣಿನ ಪಾತ್ರೆಯಲ್ಲಿ ರೊಟ್ಟಿ ಬೇಯಿಸುವುದು ಗ್ಯಾಸ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
- ಮಣ್ಣಿನ ಪಾತ್ರೆಯಲ್ಲಿ ಮಾಡಿದ ರೊಟ್ಟಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
- ಮಣ್ಣಿ ಹಂಚು ಬೇಗನೆ ಬಿಸಿಯಾಗುವುದಿಲ್ಲ. ಅದಕ್ಕಾಗಿಯೇ ರೊಟ್ಟಿ ಬೇಗ ಸುಡುವುದಿಲ್ಲ.
- ಮಣ್ಣಿನಲ್ಲಿರುವ ಪೋಷಕಾಂಶಗಳು ರೋಟಿ(Rotti) ಹೀರಲ್ಪಡುತ್ತವೆ ಮತ್ತು ಗೋಧಿ ಹಿಟ್ಟಿನ ಗುಣಗಳು ನಾಶವಾಗುವುದಿಲ್ಲ. ಇದು ನಿಮಗೆ ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ : Breakfast Tips: ರೋಗಗಳಿಂದ ದೂರವಿರಲು ಬೆಳಗಿನ ಉಪಹಾರದಲ್ಲಿ ಈ 2 ಆಹಾರವನ್ನು ತಪ್ಪದೇ ಸೇವಿಸಿ
ಮಣ್ಣಿನ ಹಂಚಿನಲ್ಲಿ ರೊಟ್ಟಿ ಬೇಯಿಸುವಾಗ ಈ ವಿಷಯ ನೆನಪಿರಲಿ
- ಮಣ್ಣಿನ ಹಂಚನ್ನು ಹೆಚ್ಚಿನ ಉರಿಯಲ್ಲಿ ಇಡಬೇಡಿ. ಇದು ಬಿರುಕು() ಬಿಡಲು ಕಾರಣವಾಗಬಹುದು.
- ಮಣ್ಣಿನ ಹಂಚನ್ನು ಸ್ವಚ್ಛಗೊಳಿಸಲು ಸ್ವಚ್ಛವಾದ ಬಟ್ಟೆಯನ್ನು ಬಳಸಿ. ತವಾವನ್ನು ಸೋಪು ಅಥವಾ ನೀರಿನಿಂದ ತೊಳೆಯಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.