Raw Banana Benefits: ಬಾಳೆಕಾಯಿ ಅನೇಕ ಪೋಷಕಾಂಶಗಳಿಂದ ತುಂಬಿವೆ. ಇದನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಬಾಳೆಕಾಯಿ ಪೊಟ್ಯಾಸಿಯಮ್ ಮೆಗ್ನೀಸಿಯಮ್, ವಿಟಮಿನ್ ಬಿ 6, ವಿಟಮಿನ್ ಸಿ ನಂತಹ ಪೋಷಕಾಂಶಗಳೊಂದಿಗೆ ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ.


COMMERCIAL BREAK
SCROLL TO CONTINUE READING

ಬಾಳೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಬಾಳೆಕಾಯಿ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಾಳೆಕಾಯಿ ಉತ್ತಮ ಪರಿಹಾರವಾಗಿದೆ. 


ಬಾಳೆಕಾಯಿಯಲ್ಲಿ ಪೊಟ್ಯಾಸಿಯಮ್ ಇದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಸುಡುವ ಗುಣಲಕ್ಷಣಗಳಿಂದಾಗಿ, ಹೃದಯಾಘಾತದ ಅಪಾಯವನ್ನು ಸಹ ತಡೆಯುತ್ತದೆ.


ಇದನ್ನೂ ಓದಿ: ಪಡವಲಕಾಯಿ ಪಲ್ಯ ತಿಂದರೆ ಹೇಳ ಹೆಸರಿಲ್ಲದಂತೆ ಗುಣವಾಗುವುದು ಈ ಕಾಯಿಲೆ!


ಬಾಳೆಕಾಯಿಯಲ್ಲಿ ಕಂಡುಬರುವ ಮಧುಮೇಹ ವಿರೋಧಿ ಗುಣಲಕ್ಷಣಗಳು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 


ಬಾಳೆಕಾಯಿ ನಾರಿನಂಶದಿಂದ ಕೂಡಿದ್ದು, ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ದೈಹಿಕ ಆರೋಗ್ಯ ಮತ್ತು ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.


ಇದರಲ್ಲಿರುವಫೈಬರ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಹೆಚ್ಚು ಕೊಬ್ಬನ್ನು ಸುಡುತ್ತದೆ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.


ಇದನ್ನೂ ಓದಿ: ತೆಂಗಿನ ಹೂವು ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೊಂದು ಲಾಭ !


ಬಾಳೆಕಾಯಿ ದೈಹಿಕ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳು ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತವೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳು, ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.


ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಕಾಯಿ ಸೇವಿಸುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಬಾಳೆಕಾಯಿ ಚಿಪ್ಸ್ ತಿನ್ನುವ ಬದಲು, ಅವುಗಳನ್ನು ಬೇಯಿಸಿ ಪಲ್ಯ ಮಾಡಿ ತಿಂದರೆ ಅನೇಕ ಪ್ರಯೋಜನಗಳಿವೆ.


ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.