ಬಿಸಿಲ ಝಳಕ್ಕೆ ಕಾಯಿ ಮಾವಿನ ಜ್ಯೂಸ್ ಕುಡಿಯಿರಿ. ತುಂಬಾ ಸಿಂಪಲ್, ಆರೋಗ್ಯಕ್ಕೂ ಹಿತಕಾರಿ
ಮಾವಿನ ಕಾಯಿ ವಿಟಮಿನ್ ಸಿ ಯಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ನಮ್ಮ ದೇಹದ ಹೋರಾಟದ ತಾಕತ್ತನ್ನು ಹೆಚ್ಚಿಸುತ್ತವೆ.
ನವದೆಹಲಿ : ಹೇಳಿಕೇಳಿ ಇದು ಹಣ್ಣುಗಳ ರಾಜ ಮಾವಿನ ಹಣ್ಣಿನ (Mango) ಸೀಸನ್. ಮಾವಿನ ಹಣ್ಣಿನ ಜ್ಯೂಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಅದರ ಆರೋಗ್ಯ ಲಾಭಗಳು (Health Benefits of Mango) ನಿಮಗೆ ತಿಳಿದಿದೆ. ಈಗ ನಾವು ಹೇಳುತ್ತಿರುವುದು ಮಾವಿನ ಕಾಯಿ ಜ್ಯೂಸ್ ಬಗ್ಗೆ. ಅಂದರೆ ಕಾಯಿ ಮಾವು ಅಥವಾ ಕಚ್ಚಾ ಮಾವಿನ ಜ್ಯೂಸ್ ಬಗ್ಗೆ. ಮಾವಿನ ಕಾಯಿಯ ಜ್ಯೂಸ್ (Mango juice) ಕುಡಿದರೆ ಆರೋಗ್ಯ ಲಾಭದ ಪಟ್ಟಿ ಮಾಡಬಹುದು.
1. ಇಮ್ಯೂನಿಟಿ ಬೂಸ್ಟರ್ :
ಮಾವಿನ ಕಾಯಿ (Mango) ವಿಟಮಿನ್ ಸಿ ಯಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ನಮ್ಮ ದೇಹದ ಹೋರಾಟದ ತಾಕತ್ತನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ : Steam ಪಡೆಯುವುದರಿಂದ ಕರೋನಾದಿಂದ ರಕ್ಷಣೆ ಪಡೆಯಬಹುದೇ? ಇಲ್ಲಿದೆ ಸತ್ಯಾಸತ್ಯತೆ
2. ದೃಷ್ಟಿ ದೋಷ ಬರಲ್ಲ :
ಮಾವಿನ ಕಾಯಿಯಲ್ಲಿ ವಿಟಮಿನ್ ಎ (Vitamin A) ಕೂಡಾ ಸಮೃದ್ಧವಾಗಿರುತ್ತದೆ. ಹಾಗಾಗಿ ಇದು ಕಣ್ಣಿನ ಪೊರೆ, ರಾತ್ರಿ ಕುರುಡು ಬರದಂತೆ ತಡಯುತ್ತದೆ
3. ಸ್ಟ್ರೆಸ್ ಬಸ್ಟರ್ :
ಮಾವಿನ ಕಾಯಿಯಲ್ಲಿ ವಿಟಮಿನ್ ಬಿ6 ಇದೆ. ಇದು ಮೆದುಳಿನಲ್ಲಿ ಸ್ಟ್ರೆಸ್ ನಿವಾರಕ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ, ಒತ್ತಡ, ಡಿಪ್ರೆಶನ್ (Depression) ನಿವಾರಣೆಗೆ ಇದು ಅತಿ ಉಪಯುಕ್ತ
ಇದನ್ನೂ ಓದಿ : Dates Benefits : ಪುರುಷರು ಈ ಸಮಯದಲ್ಲಿ 5 ಖರ್ಜೂರ ತಿನ್ನಿ ನಂತ್ರ ನೋಡಿ ಅದರ ಪ್ರಯೋಜನ!
4. ಜೀರ್ಣ ಕ್ರಿಯೆಗೆ ಉಪಯುಕ್ತ :
ಮಾವಿನ ಕಾಯಿ ತಿಂದರೆ ಅಸಿಡಿಟಿ (Accidity) , ಅಜೀರ್ಣ ಹೊಟ್ಟೆ ನೋವು ಇತ್ಯಾದಿ ಮಾಯವಾಗಿ ಬಿಡುತ್ತೆ. ಜೀರ್ಣ ಕ್ರೀಯೆ (Digestion) ತುಂಬಾ ಸರಾಗವಾಗಿ ನಡೆಯುತ್ತದೆ.
ಮಾವಿ ಕಾಯಿ ಜ್ಯೂಸ್ ಮಾಡುವ ವಿಧಾನ :
1. ಸಿಪ್ಪೆ ತೆಗೆದ ಎರಡು ಕಾಯಿ ಮಾವನ್ನು ಬೇಯಿಸಿ. ಅದರ ವಾಟೆ ತೆಗೆದು ಬರೀ ಪಲ್ಪ್ ನ್ನು ಒಂದು ಕಪ್‍ನಲ್ಲಿಟ್ಟುಕೊಳ್ಳಿ
2. ಇನ್ನೊಂದು ಪ್ಲೇಟ್ ನಲ್ಲಿ ಸ್ವಲ್ಪ ಏಲಕ್ಕಿ, ಪುದಿನ ಸೊಪ್ಪು, ಸ್ವಲ್ಪ ಕರಿಮೆಣಸು (Pepper) , ಚಾಟ್ ಮಸಾಲ, ಜೀರಾ ಪುಡಿ, ಒಂದು ಕಪ್ ಬೆಲ್ಲ (Jaggery) ಇಟ್ಟು ಕೊಳ್ಳಿ
3. ಏಲಕ್ಕಿ, ಕರಿಮೆಣಸು ಮತ್ತು ಬೆಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ.
4. ಮಿಕ್ಸಿ ತೆಗೆದು ಅದಕ್ಕೆ ಮಾವಿನ ಕಾಯಿಯ ಪಲ್ಪ್ ಹಾಕಿ. ಪುಡಿ ಮಾಡಿದ ಏಲಕ್ಕಿ, ಕರಿಮೆಣಸು, ಬೆಲ್ಲ, ಸ್ವಲ್ಪ ಪುದಿನ ಸೊಪ್ಪು (Mint leaves) ಸೇರಿಸಿ ಗ್ರೈಂಡ್ ಮಾಡಿ
5. ನಂತರ ಅದಕ್ಕೆ ಸ್ವಲ್ಪ ಚಾಟ್ ಮಸಾಲ, ಸ್ವಲ್ಪ ಜೀರಾ ಪೌಡರ್ ಬೇಕಾದರೆ ಒಂಚೂರು ಒಪ್ಪು ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಿ, ಪೇಸ್ಟ್ ರೀತಿ ಮಾಡಿ ಕಪ್‍ನಲ್ಲಿ ತೆಗೆದಿಟ್ಟುಕೊಳ್ಳಿ
6. ಈಗ ಗ್ಲಾಸ್ ತೆಗೆದು ಅದಕ್ಕೆ ಒಂದು ಸ್ಪೂನ್ ನೀವು ಮಾಡಿದ ಮಾವಿನ ಕಾಯಿ ಪೇಸ್ಟ್ ಹಾಕಿ. ಎರಡು ಮೂರು ತುಂಡು ಐಸ್ ಹಾಕಿ. ಶುದ್ದ ನೀರನ್ನು (water) ಸೇರಿಸಿ ಚೆನ್ನಾಗಿ ಕಲಸಿ. ಇಲ್ಲಿಗೆ ನಿಮ್ಮ ಮಾವಿನ ಕಾಯಿ ಜ್ಯೂಸ್ ಫಟಾಫಟ್ ರೆಡಿ. ನಿಮಗೆ ಎಷ್ಟು ಗ್ಲಾಸ್ ಬೇಕೊ ಅಷ್ಟು ಗ್ಲಾಸ್ ಜ್ಯೂಸ್ ರೆಡಿ ಮಾಡಿ.
ಇದನ್ನೂ ಓದಿ : How to buy Kharbooja: ಖರ್ಬೂಜ ಖರೀದಿ ವೇಳೆ ಈ ಸರಳ Tips ನೆನಪಿಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.