Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ

Mango Peel Benefits: ಮಾವಿನ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

Written by - Yashaswini V | Last Updated : Apr 17, 2021, 02:56 PM IST
  • ಮಾವಿನ ಸಿಪ್ಪೆಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ
  • ಸುಕ್ಕುಗಳನ್ನು ತಡೆಗಟ್ಟುವಲ್ಲಿ ಮಾವಿನ ಸಿಪ್ಪೆಗಳು ಬಹಳ ಪ್ರಯೋಜನಕಾರಿ
  • ಮೊಡವೆ ಸಮಸ್ಯೆ ನಿವಾರಣೆಗೆ ಇದು ಸಹಕಾರಿ
Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ  title=
Mango Peel Benefits

Mango Peel Benefits: ಬೇಸಿಗೆ ಕಾಲ ಪ್ರಾರಂಭವಾಗಿದೆ. ಈ ಋತುವಿನಲ್ಲಿ ಎಲ್ಲರಿಗೂ ಪ್ರಿಯವಾಗುವ ಹಣ್ಣು ಎಂದರೆ ಮಾವಿನ ಹಣ್ಣು.  ಪ್ರತಿಯೊಬ್ಬರೂ ಬೇಸಿಗೆಯಲ್ಲಿ ಮಾವಿನ ಹಣ್ಣಿನ ರೆಸಿಪಿಗಳನ್ನು ಇಷ್ಟಪಡುತ್ತಾರೆ. ಆದರೆ ಸಾಮಾನ್ಯವಾಗಿ ಮಾವಿನ ಹಣ್ಣನ್ನು ಬಳಸುವಾಗ ಅದರ ಸಿಪ್ಪೆಯನ್ನು ಬಿಸಾಡಲಾಗುತ್ತದೆ. ಆದರೆ ಮಾವಿನಹಣ್ಣಿನ ಜೊತೆಗೆ ಅದರ ಸಿಪ್ಪೆಗಳು ಸಹ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಇಂದು ಮಾವಿನ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ - ಮಾವಿನ ಸಿಪ್ಪೆಗಳು (Mango Peel) ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಇವು ಅನುಕೂಲಕರವಾಗಿವೆ.

ಇದನ್ನೂ ಓದಿ - Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ

ಸುಕ್ಕುಗಳನ್ನು ತೊಡೆದುಹಾಕಲು- ಸುಕ್ಕುಗಳನ್ನು ತಡೆಗಟ್ಟುವಲ್ಲಿ ಮಾವಿನ ಸಿಪ್ಪೆಗಳು ಬಹಳ ಪ್ರಯೋಜನಕಾರಿ. ಮಾವಿನ (Mango) ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಳಗಿಸಿ ಅದರಿಂದ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ. ಬಳಿಕ  ಹದಿನೈದು ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ. 

ಮೊಡವೆಗಳಿಂದ ಪರಿಹಾರ- ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಮೊಡವೆ ಸಮಸ್ಯೆ ಉಂಟಾಗುತ್ತದೆ. ಮಾವಿನ ಸಿಪ್ಪೆಗಳನ್ನು ಬಳಸುವುದರಿಂದ ಮೊಡವೆ ಸಮಸ್ಯೆಯಿಂದ ಪರಿಹಾರವನ್ನು ಕಾಣಬಹುದು. 

ಇದನ್ನೂ ಓದಿ - ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್

ಟ್ಯಾನಿಂಗ್ ಆಗಲಿದೆ ದೂರ - ಬೇಸಿಗೆಯಲ್ಲಿ, ಜನರು ಟ್ಯಾನಿಂಗ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಾವಿನ ಸಿಪ್ಪೆ ಬಳಕೆಯಿಂದ ಟ್ಯಾನಿಂಗ್ ಸಮಸ್ಯೆಯಿಂದ ನಿವಾರಿಸಬಹುದು. ಇದರಲ್ಲಿರುವ ವಿಟಮಿನ್ ಸಿ ಟ್ಯಾನಿಂಗ್ ಅನ್ನು ನಿವಾರಿಸುತ್ತದೆ.

ಉತ್ತಮ ಗೊಬ್ಬರ - ಇದರಲ್ಲಿ ವಿಟಮಿನ್ ಸಿ, ಇ, ಪಾಲಿಫಿನಾಲ್, ಕ್ಯಾರೊಟಿನಾಯ್ಡ್ ಮತ್ತು ಸಸ್ಯ ನಾರುಗಳಿವೆ.  ಹಾಗಾಗಿ ಮಾವಿನ ಸಿಪ್ಪೆಯು ನಿಮ್ಮ ಸಸ್ಯಗಳಿಗೆ ಸಾವಯವ ಗೊಬ್ಬರವಾಗಿ ಬಳಕೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News