ಏನಪ್ಪಾ ಇದು ನೋಮೋಫೋಬಿಯ ಅಂತಾ ಯೋಚನೆ ಮಾಡ್ತಾ ಇದ್ದೀರಾ? ನೋಮೋ ಫೋಬಿಯ ಎಂದರೆ ನೋ ಮೊಬೈಲ್ ಫೋಬಿಯ ಎಂದರ್ಥ. ಹೌದು, ಮೊಬೈಲ್ ಇಲ್ಲದೆ ಇರುವ ಸ್ಥಿತಿಯನ್ನು ಊಹಿಸಲೂ ಸಾಧ್ಯವಾಗದ ಸ್ಥಿತಿಯೇ ನೋಮೋಫೋಬಿಯ. 


COMMERCIAL BREAK
SCROLL TO CONTINUE READING

ಯಾವುದೇ ಅನಿವಾರ್ಯ ಸಂದರ್ಭಗಳಲ್ಲಿ ಮೊಬೈಲ್ ಆಫ್ ಮಾಡಬೇಕಾಗಿ ಬಂದಲ್ಲಿ ಅಥವಾ ಮೊಬೈಲ್ ಚಾರ್ಜ್ ಖಾಲಿಯಾಗಿ ಮೊಬೈಲ್ ಸ್ವಿಚ್ ಆಫ್ ಆಗುವಂತಿದ್ದರೆ. ಇಲ್ಲವೇ ಸಿಗ್ನಲ್ ಸಿಗದೆ ಇರುವ ಜಾಗಗಳಿಗೆ ಹೋದಾಗ ನಿಮಗರಿಯದೆ ಆತಂಕ ಹೆಚ್ಚಾಗುವುದು. ಏನೋ ಕಳೆದು ಕೊಂಡಂತೆ ಭಾಸವಾಗುವುದು. ಸದಾ ಮೆಸೇಜ್, ಪೋನ್ ಕರೆಗಳಿಗಾಗಿ ಕಾಯುತ್ತಿರುವುದು ಈ ಎಲ್ಲಾ ಲಕ್ಷಣಗಳೂ ನೋಮೋಫೋಬಿಯ ಸ್ಥಿತಿಯ ಲಕ್ಷಣಗಳಾಗಿವೆ.


ಅತಿ ಹೆಚ್ಚು ಮೊಬೈಲ್ ಬಳಕೆಯು ಗೀಳಾಗಿ ಬದಲಾಗುವ ಮನಸ್ಥಿತಿಯೇ ನೋಮೋಫೋಬಿಯ.
ನಿಮಗೂ ನೋಮೋಫೋಬಿಯ ಇದೆಯೇ ಎಂದು ತಿಳಿದು ಕೊಳ್ಳಬೇಕೆ? ಹಾಗಾದರೆ ಈ ಲಕ್ಷಣಗಳು ನಿಮಗಿದೆಯೇ ಎಂದು ತಿಳಿಯಿರಿ.


  • ಮೊಬೈಲ್ ಇಂದ ಕೆಲಸಮಯ ದೂರವಿರುವುದು ಕಷ್ಟವೇ?

  • ವಾಟ್ಸ್ ಆಪ್, ಫೇಸ್ ಬುಕ್, ಮೆಸೇಜ್, ಮಿಸ್ ಕಾಲ್ ಹೀಗೆ ಪದೇ ಪದೇ ಚೆಕ್ ಮಾಡುವ ಚಟ ನಿಮಗಿದೆಯೇ?

  • ಪ್ರತಿದಿನ ಅತಿ ಹೆಚ್ಚು ಸಮಯ ಮೊಬೈಲಿನಲ್ಲೆ ಕಳೆಯುತ್ತಿರಾ?

  • ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ನಿಮಗೆ ನೋಮೋಫೋಬಿಯ ಇದೆ ಎಂದರ್ಥ.


ಇಷ್ಟೇನಾ ಅಂತಾ ರಿಲಾಕ್ಸ್ ಆಗ್ಬೇಡಿ. ನಿರ್ಲಕ್ಷ್ಯನೂ ಮಾಡ್ಬೇಡಿ. ಎಚ್ಚರ ಮೊದಮೊದಲು ಇದರ ಪರಿಣಾಮಗಳು ಅಪಾಯಕಾರಿ ಎನಿಸದಿರಬಹುದು. ಆದರೆ, ಕ್ರಮೇಣ ಇದು ನರ ದೌರ್ಬಲ್ಯ, ಆತಂಕ, ಒತ್ತಡ, ಖಿನ್ನತೆ, ನಿದ್ರಾಹೀನತೆ ಮತ್ತು ಹಲವು ರೀತಿಯ ಮಾನಸಿಕ ಸಮಸ್ಯೆಗಳಿಗೆ ಇದು ನಾಂದಿ ಹಾಡುತ್ತದೆ. ಅಷ್ಟೇ ಅಲ್ಲ ಇದು ನಿಮ್ಮ ಸಂಪೂರ್ಣ ಮಾನಸಿಕ ಸ್ವಾಸ್ಥ್ಯಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಸಾಧ್ಯವಾದಷ್ಟು ಮೊಬೈಲ್ ಅನ್ನು ಮಿತವಾಗಿ ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.