menstrual pain: ನಮ್ಮ ಎಲ್ಲಾ ಕಾಯಿಲೆಗಳಿಗೆ ನಾವೇ ಮದ್ದು ಹುಡುಕಿ ಕೊಳ್ಳೊದಾದ್ರೆ ವೈದ್ಯರು ಯಾಕೆ ಅಲ್ವ? ಏನೋ ಸಣ್ಣ ಪುಟ್ಟ ತಲೆನೋವು ಇಲ್ಲವೆ ಕಾಲು ನೋವು ಅಂದ್ರೆ ಯಾವಾಗಲೋ ಒಂದು ಭಾರಿ ಮಾತ್ರೆ ತೆಗೆದುಕೊಳ್ಳೊದು ಪಾರವಾಗಿಲ್ಲ ಅದ್ರೆ ಇಲ್ಲೊಂದು ಹುಡುಗಿ ವೈದ್ಯರ ಸಲಹೆ ಪಡೆಯದೆ ಗೆಳತಿಯರು ಹೇಳಿದ್ರು ಅಂತ ಅವರ ಮಾತು ಕೇಳಿಕೊಂಡು ನೋವು ನಿವಾರಕ ಮಾತ್ರೆಗಳನ್ನ ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಇದೀಗ ಈ ಅಭ್ಯಾಸವೇ ಅವಳ ಪ್ರಾಣಕ್ಕೆ ಮುಳುವಾಗಿ ಅವಳ ಪ್ರಾಣ ತೆಗೆದುಬಿಟ್ಟಿದೆ. 


COMMERCIAL BREAK
SCROLL TO CONTINUE READING

ಲೈಲಾ ಎಂಬ ಹುಡುಗಿ ವಿಪರೀತವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಹೊಟ್ಟೆ ನೋವಿನ ನಿವಾರಣೆಗಾಗಿ ಸ್ನೇಹಿತರ ಸಲಹೆ ಪಡೆದಿದ್ದಳು. ಅವರು ಅವಳಿಗೆ ನೋವು ನಿವಾರಕ ಮಾತ್ರೆಗಳನ್ನ ತೆಗೆದುಕೊಳ್ಳುವಂತೆ  ಸೂಚಿಸಿದ್ದರು. ಅದರಂತೆಯೇ ಆ ಹುಡುಗಿ ಮಾತ್ರೆಗಳನ್ನ ತೆಗೆದುಕೊಳ್ಳಲು ಅಭ್ಯಾಸ ಮಾಡಿಕೊಂಡಿದ್ದಳು. ಮಾತ್ರೆಗಳು ನೋವು ಕಡಿಮೆ ಮಾಡುತ್ತಿದ್ದಂತೆಯೇ ಅವಳು ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ನೋವು ನಿವಾರಿಸಿಕೊಳ್ಳಲು ಈ ಮಾತ್ರೆಗಳ ಮೊರೆ ಹೋಗುತ್ತಿದ್ದಳು. ಅದರೆ ಇದೀಗ ಅದೇ ಅಭ್ಯಾಸ ಆಕೆಯ ಪ್ರಾಣವನ್ನೆ ತೆಗೆದುಬಿಟ್ಟಿದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್ ನೀಡುತ್ತೆ ಆರೋಗ್ಯಕ್ಕೆ ಬೂಸ್ಟ್‌..!


ಡಿಸೆಂಬರ್​​​ 05 ರಂದು ಲೈಲಾಗೆ ಭಾರಿ ತಲೆ ನೋವು, ಭೇದಿ ಹಾಗು ವಾಂತಿಯಾಗಿದ್ದ ಕಾರಣ ಪೋಷಕರು ಆಕೆಯನ್ನ ಆಸ್ಪತ್ತೆಗೆ ಕರೆದೊಯ್ದಿದ್ದರು. ಈ ಸಮಯದಲ್ಲಿ ಬಾಲಕಿ ಭಾರಿ ಒದ್ದಾಟ ನಡೆಸುತ್ತಿರುವುದನ್ನ ಗಮನಿಸಿದ ವೈದ್ಯರು ಆಕೆಯನ್ನ ಸಿಟಿ ಸ್ಕಾನ್‌ಗೆ ಒಳಪಡಿಸಿದ್ದರು. ನಂತರ ಸಿಟಿ ಸ್ಕಾನ್‌ ರಿಪೋರ್ಟ್‌ನಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ತಕ್ಷಣವೇ ಬಾಲಕಿಯನ್ನ ಪೋಷಕರು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರು. ಮೆದುಲು ನಿಷ್ಕ್ರಿಯೆಗೊಂಡು ಯುವತಿ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 13 ರಂದುಸಾವನ್ನಪ್ಪಿದ್ದಾಳೆ.


ಇದನ್ನೂ ಓದಿ: Covid-19: ತಲ್ಲಣ ಸೃಷ್ಟಿಸಿದ ಕೋವಿಡ್ ಜೆಎನ್.1 ರೂಪಾಂತರ- ಅಗತ್ಯವಿದೆಯೇ ಬೂಸ್ಟರ್ ಡೋಸ್!


ಈ ಬಾಲಕಿಯ ಅಂತ್ಯ ಮನಕಲುಕುವಂತಿದ್ದರು ಕುಟುಂಬವರು ಮಗಳ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಮಗಳ ಸಾವಿನ ನೋವಿನ ನಡುವೆ ಕೂಡ ಹೆತ್ತವರು ಮಗಳ ಅಗಾಂಗ ದಾನ ಮಾಡಿ ಐವರ ಬಾಳಿಗೆ ಬೆಳಕಾಗಿದ್ದಾರೆ.


ಇನ್ನೂ ನಿವೇನಾದರೂ ಮುಟ್ಟಿನ ನೋವಿನಿಂದ ಬಳಲುತ್ತಿದ್ದು ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಎಚ್ಚರ ವಹಿಸಿಕೊಳ್ಳಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.