Covid-19: ತಲ್ಲಣ ಸೃಷ್ಟಿಸಿದ ಕೋವಿಡ್ ಜೆಎನ್.1 ರೂಪಾಂತರ- ಅಗತ್ಯವಿದೆಯೇ ಬೂಸ್ಟರ್ ಡೋಸ್!

COVID-19 JN.1 variant:  ಇನ್ನೇನು ಕೊರೊನಾ ಕಾಟ ಮುಗಿತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕೋವಿಡ್ ಹೊಸ ರೂಪಾಂತರ ಜೆ‌ಎನ್.1 ಎಲ್ಲೆಡೆ ಆತಂಕ ಸೃಷ್ಟಿಸಿದೆ. ದಿನನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡಿದೆ. 

Written by - Yashaswini V | Last Updated : Dec 21, 2023, 11:37 AM IST
  • ಗಮನಾರ್ಹವಾಗಿ, ದೇಶದಲ್ಲಿ 95% ಗಿಂತಲೂ ಹೆಚ್ಚು ಜನರು ಕೋವಿಡ್-19 ಲಸಿಕೆಯ ಮೊದಲ ಎರಡು ಡೋಸ್‌ಗಳನ್ನು ಪಡೆದಿದ್ದಾರೆ.
  • ಇವರಲ್ಲಿ, 25% ಜನರು ಮೂರನೇ ಅಥವಾ ಮುನ್ನೆಚ್ಚರಿಕೆ ಡೋಸ್ ಅನ್ನು ಕೂಡ ಪಡೆದಿದ್ದಾರೆ.
Covid-19: ತಲ್ಲಣ ಸೃಷ್ಟಿಸಿದ ಕೋವಿಡ್ ಜೆಎನ್.1 ರೂಪಾಂತರ- ಅಗತ್ಯವಿದೆಯೇ ಬೂಸ್ಟರ್ ಡೋಸ್! title=

COVID-19 JN.1 Variant: ಸದ್ಯ, ಕೊರೊನಾ ಸಾಂಕ್ರಾಮಿಕದಿಂದ ಬಚಾವ್ ಆದೆವು ಎಂದು ನೆಮ್ಮದಿಯಿಂದ ಇದ್ದವರಿಗೆ ಕೋವಿಡ್ ಜೆಎನ್.1 ರೂಪಾಂತರದ ಉಲ್ಬಣ ಮತ್ತೆ ಆತಂಕವನ್ನು ಸೃಷ್ಟಿಸಿದೆ. ಭಾರತದಲ್ಲಿ ಮೊದಲಿಗೆ ದಕ್ಷಿಣದ ರಾಜ್ಯ ಕೇರಳದಲ್ಲಿ ಪತ್ತೆಯಾದ ಕೋವಿಡ್ ಹೊಸ ರೂಪಾಂತರ ದಿನಗಳೆದಂತೆ ದೇಶಾದ್ಯಂತ ವ್ಯಾಪಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ದೇಶಾದ್ಯಂತ ಕೋವಿಡ್‌ನ ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು ಪ್ರಸ್ತುತ ಸಕ್ರಿಯ ಕೋವಿಡ್ ರೋಗಿಗಳ ಸಂಖ್ಯೆ 2300 ದಾಟಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, ಕೋವಿಡ್ ಹೊಸ ಉಪ ಸ್ಟ್ರೈನ್ ಜೆಎನ್.1 ರ ಮೇಲೆ  ತೀವ್ರ ನಿಗಾ ಇಡುವುದು ಅತ್ಯಗತ್ಯವಾಗಿದೆ. ಇದರೊಂದಿಗೆ, ಈ ಸ್ಟ್ರೈನ್ ಪ್ರಕರಣಗಳು ಪತ್ತೆಯಾಗಿರುವ ಪ್ರದೇಶಗಳಲ್ಲಿ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಸೀಕ್ವೆನ್ಸಿಂಗ್ ಮೂಲಕ ಮಾತ್ರ ಎಷ್ಟು ರೋಗಿಗಳು ಈ ರೂಪಾಂತರವನ್ನು ಹೊಂದಿದ್ದಾರೆಂದು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಕೊರೊನಾವೈರಸ್ ರೂಪಾಂತರವು ಹೆಚ್ಚು ಜನರಲ್ಲಿ ಕಂಡು ಬಂದರೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಸ್ತುತ, ಕೋವಿಡ್ ರೋಗಿಗಳಲ್ಲಿ ಸೌಮ್ಯವಾದ ರೋಗಲಕ್ಷಣಗಳು ಮಾತ್ರ ಕಂಡು ಬರುತ್ತಿದೆ. ಆದರೂ, ಈ ರೋಗಿಗಳನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ಅಷ್ಟೇ ಅಲ್ಲ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಕೋವಿಡ್‌ನ ಲಕ್ಷಣಗಳು ಸೌಮ್ಯವಾಗಿವೆಯೇ? ಇಲ್ಲವೇ ಗಂಭೀರ ಸ್ವರೂಪವನ್ನು ಪಡೆಯುತ್ತಿವೆಯೇ ಎಂಬುದರ ಬಗ್ಗೆಯೂ ತೀವ್ರ ನಿಗಾವಹಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ. 

ಇದನ್ನೂ ಓದಿ- JN-1ಗೆ ಬ್ರೇಕ್‌ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್‌

ದೇಶದಲ್ಲಿ ಕೋವಿಡ್-19 ಪ್ರಕರಣ ಮತ್ತು ಹೊಸ JN.1 ಉಪ-ವೇರಿಯೆಂಟ್ ಉಲ್ಬಣದ ನಡುವೆ ವ್ಯಾಕ್ಸಿನೇಷನ್ ಬಗ್ಗೆಯೂ ಜನರಲ್ಲಿ ಹಲವು ಪ್ರಶ್ನೆಗಳಿವೆ. ವಾಸ್ತವವಾಗಿ,  ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಕಳೆದ 6 ತಿಂಗಳಿನಿಂದ ವ್ಯಾಕ್ಸಿನೇಷನ್ ಕೂಡ ಕಡಿಮೆಯಾಗಿದೆ. ಇದೀಗ ಏಕಾಏಕಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯವೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುತ್ತಿದೆ.

ಬೂಸ್ಟರ್ ಡೋಸ್ ಪಡೆಯುವುದು ಅಗತ್ಯವೇ? 
ದಿನೇ ದಿನೇ ಉಲ್ಬಣಿಸುತ್ತಿರುವ ಕೋವಿಡ್ ಜೆಎನ್.1 ರೂಪಾಂತರದಿಂದ ಪಾರಾಗಲು ಬೂಸ್ಟರ್ ಡೋಸ್ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವೈದ್ಯರು, ಕೊರೊನಾ ಪ್ರಕರಣ ಕಂಪ್ಲೀಟ್ ಆಗಿ ಮುಗಿದೇ ಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇದರ ಹೊಸ ಹೊಸ ರೂಪಾಂತರಗಳು ಮತ್ತೆ ಮತ್ತೆ ಮುನ್ನಲೆಗೆ ಬರಬಹುದು. ಆದರೆ, ಕೊರೊನಾದಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಗಿದೆ. 

ಇದನ್ನೂ ಓದಿ- Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ

ಸದ್ಯ ಕೊರೊನಾವೈರಸ್ ಸಮುದಾಯದಲ್ಲಿಯಾದರೂ, ಅದು ಪರಿಣಾಮಕಾರಿಯಾಗಿಲ್ಲ. ಹಾಗಾಗಿ, ಬೂಸ್ಟರ್ ಡೋಸ್ ಬಗ್ಗೆ ಜನರು ತಾವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು, ಉಸಿರಾಟದ ಸಮಸ್ಯೆ ಇರುವವರು, 60 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಅನಿಯಂತ್ರಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಮುನ್ನೆಚ್ಚರಿಕಾ ಡೋಸ್ ತೆಗೆದುಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. 

ಇದರೊಂದಿಗೆ, ಸಾಧ್ಯವಾದಷ್ಟು ಜನಸಂದಣಿ ಇರುವ ಜಾಗಕ್ಕೆ ಹೋಗುವುದನ್ನು ತಡೆಯುವುದು, ಇಲ್ಲವೇ ಸ್ಥಳಗಳಿಗೆ ಹೋಗುವಾಗ ಅಥವಾ ಜ್ವರ, ಕೆಮ್ಮು ಮತ್ತು ಗಂಟಲು ನೋವಿನಂತಹ ಲಕ್ಷಣಗಳು ಕಂಡುಬಂದಾಗ ಮಾಸ್ಕ್ ಧರಿಸುವುದರಿಂದ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. 

ಗಮನಾರ್ಹವಾಗಿ, ದೇಶದಲ್ಲಿ 95% ಗಿಂತಲೂ ಹೆಚ್ಚು ಜನರು ಕೋವಿಡ್-19 ಲಸಿಕೆಯ ಮೊದಲ ಎರಡು ಡೋಸ್‌ಗಳನ್ನು ಪಡೆದಿದ್ದಾರೆ. ಇವರಲ್ಲಿ, 25%  ಜನರು ಮೂರನೇ ಅಥವಾ ಮುನ್ನೆಚ್ಚರಿಕೆ ಡೋಸ್ ಅನ್ನು ಕೂಡ ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News