Hing health benefits : ಹಿಂಗು ಜೀರ್ಣಕಾರಿ ಗುಣಗಳಿಂದ ಸಮೃದ್ಧವಾಗಿರುವ ಮಸಾಲೆಯಾಗಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಒಗ್ಗರಣೆ ವೇಳೆ ಹಿಂಗನ್ನು ಬಳಸಿದರೆ ಅಡುಗೆಯ ರುಚಿ ಮತ್ತು ಘಮ ಎರಡೂ ಹೆಚ್ಚುವುದು. ಹಿಂಗು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ, ಹಿಂಗು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ. ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರ ಹೊರತಾಗಿಯೂ ಹಿಂಗು  ಸೇವನೆಯು ಕೆಲವು ರೋಗಗಳಲ್ಲಿ ಪ್ರಯೋಜನಕಾರಿಯಾಗಿ ಸಾಬೀತಾಗುವುದು.  


COMMERCIAL BREAK
SCROLL TO CONTINUE READING

ಹಿಂಗು ಸೇವನೆಯಿಂದ ಆಗುವ ಪ್ರಯೋಜನಗಳು : 
ಜೀರ್ಣಶಕ್ತಿ ಹೆಚ್ಚುತ್ತದೆ :

ಹೊಟ್ಟೆಯ ಕಾಯಿಲೆಗಳಿಂದ ಪರಿಹಾರವನ್ನು ಒದಗಿಸಲು ಹಿಂಗು ಸೇವನೆಯು ಪ್ರಯೋಜನಕಾರಿಯಾಗಿದೆ. ಮಲಬದ್ಧತೆ, ಹೊಟ್ಟೆ ಭಾರ, ಹೊಟ್ಟೆನೋವು ಮುಂತಾದ ಸಮಸ್ಯೆ ಇರುವವರು ಹಿಂಗು ಸೇವಿಸುವುದು ಒಳ್ಳೆಯದು. ಹಿಂಗಿನಲ್ಲಿ  ಕಂಡುಬರುವ ಅಂಶಗಳು ಹೊಟ್ಟೆಯಲ್ಲಿ ವಾಯು ಮತ್ತು ಗ್ಯಾಸ್ ರಚನೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ : ಮದುವೆಗೆ ಮುನ್ನ ದಂಪತಿಗಳು ಈ ವೈದ್ಯಕೀಯ ಪರೀಕ್ಷೆಗೆ ಒಳಗಾಗಲೇಬೇಕು..! ತಜ್ಞರು ಹೇಳುವುದೇನು ?


ದೀರ್ಘಕಾಲದ ಕೆಮ್ಮಿನಿಂದ ಪರಿಹಾರ : 
ನೆಗಡಿ, ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಹಿಂಗು  ಸೇವಿಸಬಹುದು. ಹಿಂಗಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತವೆ.  ಹಿಂಗು ಕಫವನ್ನು ಕರಗಿಸಲು ಕೆಲಸ ಮಾಡುತ್ತದೆ. ಇದರೊಂದಿಗೆ, ಹಿಂಗು ದೀರ್ಘಕಾಲದ ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಶ್ವಾಸಕೋಶದಲ್ಲಿನ ಊತ ಮತ್ತು ಅಸ್ತಮಾದ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.


ಮುಟ್ಟಿನ ನೋವಿನಿಂದ ಪರಿಹಾರ : 
ಮುಟ್ಟಿನ ಸಮಯದಲ್ಲಿ, ಕೆಲವರಿಗೆ ಹೊಟ್ಟೆ ನೋವು ಹೊಟ್ಟೆ ಸೆಳೆತ  ಮತ್ತು ಜ್ವರದಂತಹ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಹಿಂಗಿನ ನೀರನ್ನು ಸೇವಿಸಬಹುದು. ಇದು ಪಿರಿಯಡ್ಸ್ ಸಮಯದಲ್ಲಿ ಇತರ ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ : Work Place Health Tips: ನೀವೂ ವರ್ಕ್ ಪ್ಲೇಸ್ ನಲ್ಲಿ ಸತತ ಕೆಲಸ ಮಾಡುತ್ತೀರಾ? ಈ ಸಲಹೆ ಅನುಸರಿಸಿ!


ಹಿಂಗು ಸೇವಿಸುವ ವಿಧಾನ ಯಾವುದು? : 
ಒಂದು ಲೋಟ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಚಿಟಿಕೆ ಹಿಂಗಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ. ಆದರೆ, ಯಾವುದೇ ರೀತಿಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ವೈದ್ಯಕೀಯ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.