Health Benefits of hing or Asafoetida: ಅಸಾಫೋಟಿಡಾ ಅಥವಾ ಇಂಗು… ಭಾರತೀಯ ಮಸಾಲೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ವಸ್ತು. ಇದರ ಪರಿಮಳ ಮತ್ತು ಔಷಧೀಯ ಗುಣಗಳಿಂದಾಗಿ, ಇಂಗು ಭಾರತೀಯ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ. ಇದಲ್ಲದೆ ಇಂಗುವನ್ನು ಆಯುರ್ವೇದ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.


COMMERCIAL BREAK
SCROLL TO CONTINUE READING

ಭಾರತೀಯ ಖಾದ್ಯಗಳಿಗೆ ಪರಿಮಳವನ್ನು ಹೆಚ್ಚಿಸಲು ಅಥವಾ ಉಪ್ಪಿನಕಾಯಿ ಮತ್ತು ಚಟ್ನಿಗಳಿಗೆ ಪರಿಮಳವನ್ನು ಸೇರಿಸಲು ಇಂಗು ಮುಖ್ಯವಾಗಿ ಬಳಸಲಾಗುತ್ತದೆ. ಇವೆಲ್ಲದರ ಹೊರತಾಗಿ, ಇಂಗು ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ,


ಇದನ್ನೂ ಓದಿ: ಮುನಿಯಪ್ಪ ಜಪದಲ್ಲಿ ಕೈ ಅಭ್ಯರ್ಥಿ ಗೌತಮ್ : ಗೊಂದಲದ ಗೂಡಾದ ಕೋಲಾರ ಲೋಕಸಭಾ  ಕ್ಷೇತ್ರ 


ರಕ್ತದೊತ್ತಡವನ್ನು ಕಡಿಮೆ: ಇಂಗುಗಳಲ್ಲಿ ಕಂಡುಬರುವ ಕೆಲ ಸಂಯುಕ್ತಗಳು ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.


ಅಸ್ತಮಾದಿಂದ ಉಪಶಮನ: ಆಸಫೋಟಿಡಾವು ಆಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಾದ ಬ್ರಾಂಕೈಟಿಸ್ ಮತ್ತು ಒಣ ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಇಂಗುವನ್ನು ಬಿಸಿ ನೀರಿನಲ್ಲಿ ಕರಗಿಸಿ ಹರ್ಬಲ್ ಟೀಯಾಗಿ ಕುಡಿದರೆ ಒಳ್ಳೆಯದು.


ಋತುಚಕ್ರದ ನೋವಿನಿಂದ ಪರಿಹಾರ: ರಕ್ತವನ್ನು ತೆಳುವಾಗಿಸುವ ನೈಸರ್ಗಿಕ ಸಂಯುಕ್ತಗಳು ಅದರಲ್ಲಿ ಕಂಡುಬರುವುದರಿಂದ ಋತುಚಕ್ರದ ಸಮಯದಲ್ಲಿ ನೋವಿನಿಂದ ಪರಿಹಾರವನ್ನು ಒದಗಿಸಲು ಇಂಗು ಸಹ ಸಹಾಯ ಮಾಡುತ್ತದೆ. ಇಂಗು ದೇಹದ ಯಾವುದೇ ಭಾಗಕ್ಕೆ ಅಡಚಣೆಯಾಗದಂತೆ ರಕ್ತ ಪರಿಚಲನೆಯನ್ನು ಮಾಡಲು ಸಹಕಾರಿ. ಇದು ಮುಟ್ಟಿನ ಸಮಯದಲ್ಲಿ ಬೆನ್ನು ಮತ್ತು ಕೆಳ ಹೊಟ್ಟೆಯ ನೋವನ್ನು ಕಡಿಮೆ ಮಾಡುತ್ತದೆ.


ತಲೆನೋವು: ಇಂಗು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ರಕ್ತನಾಳಗಳ ಊತವನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಇಂಗು ಬೆರೆಸಿ ದಿನಕ್ಕೆ ಕೆಲ ಬಾರಿ ಕುಡಿಯುವುದರಿಂದ ತಲೆನೋವಿನಿಂದ ಉಪಶಮನ ಪಡೆಯಬಹುದು.


ಜೀರ್ಣಕ್ರಿಯೆ: ಇಂಗು ಯಾವಾಗಲೂ ಅದರ ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿ. ಅಸಾಫೋಟಿಡಾ ನೈಸರ್ಗಿಕ ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ವಾಯು, ಹೊಟ್ಟೆ ಉಬ್ಬುವುದು ಮತ್ತು ಇತರ ಜೀರ್ಣಕಾರಿ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Mahalakshmi Ravindra: ಮದುವೆಯಾದ ಎರಡು ವರ್ಷಗಳ ನಂತರ ವಿಚ್ಛೇದನಕ್ಕೆ ಮುಂದಾದ್ರಾ ರವೀಂದರ್ ಮಹಾಲಕ್ಷ್ಮಿ? ಪೋಸ್ಟ್‌ ನಿಂದ ಹೊರಬಿತ್ತು ಸಿಕ್ರೇಟ್‌!!   


ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.