ನವದೆಹಲಿ : ಉತ್ತಮ ಆರೋಗ್ಯ (Health) ಇರಲಿ ಎಂದು ನಾವು ನಮ್ಮ ಜೀವನ ಕ್ರಮದಲ್ಲೇ (lifestyle) ಬದಲಾವಣೆ ಮಾಡಿಕೊಂಡಿರುತ್ತೇವೆ. ನಾವಿಲ್ಲಿ ಹೇಳುತ್ತಿರುವುದು ಒಳ್ಳೆಯ ಆರೋಗ್ಯ ಇರಲಿ ಎಂದು ಬಯಸಿ ನಾವು ಲೈಫ್ ಸ್ಟೈಲ್ ನಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಖಂಡಿತಾ ನಮ್ಮ ಆರೋಗ್ಯ ಹದಗೆಡಿಸಬಹುದು. ನಾವು ಮಾಡಬಹುದಾದ ಅಂಥಹ ಐದು ತಪ್ಪುಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

1. ಡಯಟ್ ಸೋಡಾ ಕುಡಿಯುವುದು :
ಅಧಿಕ ಸಕ್ಕರೆ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರ  ಎನ್ನುವುದು ನಮಗೆಲ್ಲಾ ಗೊತ್ತಿದೆ.  ಸಕ್ಕರೆ (sugar) ಕಡಿಮೆ ತಿಂದಷ್ಟೂ ಒಳ್ಳೆಯದು. ಈ ಡಯಟ್ ಸೋಡಾದಲ್ಲಿ (diet soda) ಕೃತಕ ಸ್ವೀಟ್ನರ್ ಇರುತ್ತದೆ. ಇದು ಸಕ್ಕರೆಗಿಂತಲೂ ಮಾರಕ. ಅಧ್ಯಯನವೊಂದರ ಪ್ರಕಾರ ಡಯಟ್ ಸೋಡಾ ಕುಡಿಯುವವರು ಹೆಚ್ಚಿಗೆ ತಿನ್ನುತ್ತಾರೆ.  ಇದು ಕೂಡಾ ಸರಿಯಲ್ಲ. ನೀರು (water) ಯಾವತ್ತಿಗೂ ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯಲೇ ಬೇಕಾದರೆ ಸೋಡಾ ಬಿಟ್ಟು, ಹಣ್ಣಿನ ರಸ, (fruit juice) ಲಿಂಬೆ ರಸ ಕುಡಿಯಿರಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಇದನ್ನೂ ಓದಿ : ಕೂದಲ ಆರೋಗ್ಯಕ್ಕೆ ತೆಂಗಿನ ಎಣ್ಣೆ ಯಾಕೆ ಬೆಸ್ಟ್..? ಇಲ್ಲಿದೆ 7 ಕಾರಣ


2. ವಿಕೆಂಡ್ ರಜಾದಿನಗಳಲ್ಲಿ ಅತಿಯಾಗಿ ನಿದ್ರೆ ಮಾಡುವುದು.
ಸಾಮಾನ್ಯವಾಗಿ ರಜಾದಿನಗಳಲ್ಲಿಸ್ವಲ್ಪ ಜಾಸ್ತಿ ನಿದ್ರೆ (over sleep) ಮಾಡುತ್ತೇವೆ. ಇದು ಖಂಡಿತಾ ಸರಿಯಲ್ಲ.  ಇದು ನಿಮ್ಮ ಜೈವಿಕ ಗಡಿಯಾರವನ್ನು ಏರುಪೇರು ಮಾಡಿಬಿಡುತ್ತವೆ. ವಾರದ ಬೇರೆ ದಿನಗಳಲ್ಲೂ ದೇಹ ಅಷ್ಟೇ ಪ್ರಮಾಣದ ನಿದ್ರೆ ಬಯಸಬಹುದು.  ದೇಹದ ನಿದ್ರೆಯ ಲಯ ಮರಳಿ ಪಡೆಯಲು ಕಷ್ಟ ಪಡಬೇಕಾದೀತು. ಎಲ್ಲಾ ದಿನಗಳಲ್ಲೂ ಸಮಪ್ರಮಾಣದ ನಿದ್ರೆ ಮಾಡಿ. ನಿದ್ರೆಯ ಟೈಮಿಂಗ್ ಬದಲಾಯಿಸಬೇಡಿ.


3. ಬಾಟಲಿ ನೀರು ಕುಡಿಯುವುದು.
ಸಂಸ್ಕರಿತ ನೀರಿಗಿಂತ ನೈಸರ್ಗಿಕ ನೀರು (Natural water) ಕುಡಿಯುವುದು ಯಾವತ್ತಿಗೂ ಒಳ್ಳೆಯದು. ನಾವು ಸೇಫ್ ಅಂದು ಕೊಂಡಷ್ಟು ಸೇಫ್ ಅಲ್ಲ ಬಾಟಲಿ ನೀರು. ನೀರು ಶುದ್ದ ಇದ್ದರೂ ಕೂಡಾ ಕೆಲವೊಂದು ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್ ಬಾಟಲಿಗಳ ಮೂಲಕವೇ ನೀರನ್ನು ಸೇರಿಕೊಳ್ಳುತ್ತವೆ.  ಅಧ್ಯಯನವೊಂದರ ಪ್ರಕಾರ 86% ನೀರಿನ ಬಾಟಲಿಗಳು (water bottle) ರಿಸೈಕಲ್ ಆಗುವುದಿಲ್ಲ. ಇದರಿಂದಲೂ ಬ್ಯಾಕ್ಟೀರಿಯಾಗಳು (Bacteria) ನೀರನ್ನು ಸೇರಿಕೊಳ್ಳಬಹುದು.


ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಸೇವಿಸಬೇಡಿ! ಇಲ್ಲದಿದ್ರೆ ತಪ್ಪಿದಲ್ಲ ಈ ತೊಂದರೆ!


4. ಪದೇ ಪದೇ ಸ್ಯಾನಿಟೈಸರ್ ಬಳಕೆ
ಸಾನಿಟೈಸರ್ ಗಳು (sanitizer) ಕೆಲವೊಂದು ಕೀಟಾಣುಗಳ ಪ್ರಸರಣವನ್ನು ತಡೆಯುತ್ತವೆ.  ಸಾನಿಟೈಸರ್ ನ್ನು ಬೇಕಾದಾಗ ಅಷ್ಟೇ ಬಳಸಬೇಕು. ವ್ಯಾಪಕವಾಗಿ ಸಾನಿಟೈಸರ್ ಬಳಸಿದರೆ, ಕೆಲವೊಂದು ರೋಗಾಣುಗಳು ರೂಪಾಂತರಿತಗೊಂಡು ಮತ್ತಷ್ಟು ಬಲವಾಗುತ್ತವೆ. 


5. ಕಾರ್ಬೋಹೈಡ್ರೇಟ್ ಕಡಿತ ಮಾಡುವುದು
ಕಾರ್ಬೋ ಹೈಡ್ರೇಟ್ ಗಳು ನಮ್ಮ ದೇಹಕ್ಕೆ ಶಕ್ತಿ ನೀಡುತ್ತವೆ.  ನಮ್ಮ ಮೆದುಳಿಗೂ (Brain) ಆಹಾರ ಒದಗಿಸುತ್ತವೆ. ಇವುಗಳ ಸೇವನೆ ಕಡಿಮೆ ಮಾಡಿಬಿಟ್ಟರೆ, ನಮ್ಮ ದೇಹ ದುರ್ಬಲವಾಗಿ ಬಿಡುತ್ತದೆ.  ದಿನಪೂರ್ತಿ ಚಟುವಟಿಕೆಯಿಂದಿರಬೇಕಾದರೆ ಅಧಿಕ ಕಾರ್ಬೋ ಹೈಡ್ರೇಟ್ ಬೇಕೇ ಬೇಕು.


ಇದನ್ನೂ ಓದಿ : World Milk Day 2021: ಇವುಗಳನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.