how to lower cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯದ ಆರೋಗ್ಯ ಹದಗೆಡುತ್ತದೆ. ಕೊಲೆಸ್ಟ್ರಾಲ್ ಹೃದಯ ನಾಳಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಸರಿಯಾದ ರಕ್ತ ಪರಿಚಲನೆಯನ್ನು ತಡೆಯುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಆಹಾರ ಪದ್ಧತಿಯನ್ನು ಬದಲಾಯಿಸುವುದು ಅನಿವಾರ್ಯ. ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವುದು ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಕೊಲೆಸ್ಟ್ರಾಲ್ ನಿಂದಾಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.


ಕೊಲೆಸ್ಟ್ರಾಲ್ ಸಮಸ್ಯೆಯಿರುವವರು ಕೆಲವು ಆಹಾರ ಸೇವಿಸಬಾರದು:


ಜಂಕ್ ಫುಡ್‌: ಫಾಸ್ಟ್‌ ಫುಡ್ ಮತ್ತು ಸಂಸ್ಕರಿಸಿದ ಆಹಾರ ತಿನ್ನುವುದನ್ನು ತಪ್ಪಿಸಬೇಕು. ಬಹಳಷ್ಟು ಎಣ್ಣೆಯನ್ನು ಹೊಂದಿರುವ ಆಹಾರಗಳು, ಕರಿದ ಆಹಾರಗಳು ಸಹ ಕೊಲೆಸ್ಟ್ರಾಲ್ ಗೆ ಒಳ್ಳೆಯದಲ್ಲ.


ಇದನ್ನೂ ಓದಿ: ಈ ಮರದ ಒಂದು ಎಲೆಯನ್ನು ಬೆಳಗೆದ್ದು ಜಗಿಯಿರಿ.. ಇಡೀ ದಿನ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುವುದು!


ಮೊಟ್ಟೆ: ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದರಲ್ಲಿರುವ ಹಳದಿ ಲೋಳೆಯನ್ನು ಕೊಲೆಸ್ಟ್ರಾಲ್ ಹೆಚ್ಚಾಗಿರುವವರು ತಿನ್ನಬಾರದು. ಗೋಡಂಬಿ ಅಥವಾ ತುಪ್ಪ ಕೂಡ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಅವುಗಳನ್ನೂ ತಿನ್ನುವುದು ಒಳ್ಳೆಯದಲ್ಲ.


ಪ್ಯಾಕ್ಡ್‌ ಫುಡ್:‌ ಪ್ಯಾಕ್ ಮಾಡಿದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ‌ ಆರೋಗ್ಯ ಸಮಸ್ಯೆಗಳು ಬರುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಇರುವವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು.


ಕೊಲೆಸ್ಟ್ರಾಲ್ ಇರುವವರು ಪೌಷ್ಟಿಕ ಆಹಾರ ಸೇವಿಸುವುದು ಉತ್ತಮ. ಕೊಲೆಸ್ಟ್ರಾಲ್ ಜಾಸ್ತಿ ಎಂದು ಗೊತ್ತಿದ್ದರೂ ಇಂತಹ ಆಹಾರ ಸೇವಿಸುವುದರಿಂದ ಥೈರಾಯ್ಡ್, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಆಹಾರ ಪದ್ಧತಿಯಲ್ಲಿ ಬದಲಾವಣೆಗಳ ಜೊತೆಗೆ, ಸರಿಯಾದ ವ್ಯಾಯಾಮವನ್ನು ಮಾಡುವುದು ಒಳ್ಳೆಯದು.  


ಇದನ್ನೂ ಓದಿ: ಕ್ಯಾನ್ಸರ್, ಶುಗರ್, ಕೊಲೆಸ್ಟ್ರಾಲ್ ಸೇರಿದಂತೆ 10 ರೋಗಗಳಿಗೆ ರಾಮಬಾಣ ಈ ಪಾನೀಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.