Shravan Month 2023: ಉತ್ತರ ಭಾರತದಲ್ಲಿ ಈಗಾಗಲೇ ಶ್ರಾವಣ ತಿಂಗಳು ಆರಂಭಗೊಂಡಿದೆ. ದಕ್ಷಿಣ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣದ ಆಗಮನವಾಗಲಿದೆ. ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಶ್ರಾವಣ ಮಾಸದಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು ಎಂಬುದು ನಿಮಗೆ ತಿಳಿದಿದೆಯೇ? ಏಕೆಂದರೆ ಈ ಆಹಾರಗಳು ನಿಮ್ಮನ್ನು ಅನಾರೋಗ್ಯಕ್ಕೆ (Health News In Kannada) ದೂಡುವ ಸಾಧ್ಯತೆ ಇದೆ. ಶ್ರಾವಣ ಮಾಸದಲ್ಲಿ ಯಾವ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

COMMERCIAL BREAK
SCROLL TO CONTINUE READING

ಬದನೆ ಕಾಯಿ
ಶ್ರಾವಣ ಮಾಸದಲ್ಲಿ ಬದನೆಕಾಯಿ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಮಳೆಗಾಲದಲ್ಲಿ ಸಿಗುವ ಬದನೆಕಾಯಿಯಲ್ಲಿ ಕ್ರಿಮಿ ಕೀಟಗಳಿರುತ್ತವೆ ಮತ್ತು ಅವು  ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು ಆದ್ದರಿಂದ ಶ್ರಾವಣ ಮಾಸದಲ್ಲಿ ಬದನೆಕಾಯಿಯನ್ನು ಸೇವಿಸಬೇಡಿ.

ಎಲೆ ತರಕಾರಿಗಳು
ಮಳೆಗಾಲದಲ್ಲಿ ಎಲೆಗಳ ತರಕಾರಿಗಳನ್ನು ತ್ಯಜಿಸಬೇಕು. ಏಕೆಂದರೆ ಹಸಿರು ಸೊಪ್ಪುಗಳಲ್ಲಿ ಹುಳುಗಳಿರುತ್ತವೆ ಅವು ನಿಮಗೆ ಕಾಣಿಸದೇ ಹೊಟ್ಟೆಯೊಳಗೆ ಹೋಗುತ್ತವೆ. ಹೀಗಾಗಿ ಎಲೆಗಳ ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಿ.

ಮೊಸರು
ಮಳೆಗಾಲದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಈ ಋತುವಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾಗಳೂ ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಅದರಲ್ಲಿ ಹುಳಿಯೂ ಬರುತ್ತದೆ. ಹೀಗಾಗಿ ಶ್ರಾವಣದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಿ. ಮತ್ತೊಂದೆಡೆ, ನೀವು ಮೊಸರು ತಿನ್ನಲು ಬಯಸಿದರೆ, ನೀವು ಹುಳಿ ಮೊಸರು ಸೇವಿಸಿ.

ಹಾಲಿನ ಉತ್ಪನ್ನಗಳು
ಮಳೆಗಾಲದಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಅವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಕೆಲಸ ಮಾಡುತ್ತವೆ. ಹೀಗಾಗಿ ನೀವು ಹಾಲು, ಚೀಸ್ ಮುಂತಾದ ವಸ್ತುಗಳಿಂದ ದೂರವಿರಬೇಕು.


ಇದನ್ನೂ ಓದಿ-Women Hair Care: ಬಿಳಿಕೂದಲು ನಿವಾರಣೆ ಹಾಗೂ ಉದುರುವಿಕೆ ಸಮಸ್ಯೆಗೆ ಇಲ್ಲಿವೆ ಕೆಲ ಉಪಾಯಗಳು!

ಮಾಂಸಾಹಾರಿ ಪದಾರ್ಥ
ಶ್ರಾವಣ  ಮಾಸದಲ್ಲಿ ಅಪ್ಪಿತಪ್ಪಿಯೂ ನಾನ್ ವೆಜ್ ಸೇವಿಸಬಾರದು. ಏಕೆಂದರೆ ಈ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಮತ್ತೊಂದೆಡೆ ಎರಡನೇ ಕಾರಣವೆಂದರೆ ಈ ತಿಂಗಳಲ್ಲಿ ನಾನ್ ವೆಜ್ ತಿಂದರೆ ಅದರ ಜೀರ್ಣಕ್ರಿಯೆ ನಿಧಾನವಾಗುತ್ತದೆ.ಇಂತಹ ಸಂದರ್ಭದಲ್ಲಿ ಹೊಟ್ಟೆಯ ಸಮಸ್ಯೆ ಎದುರಾಗಬಹುದು.


ಇದನ್ನೂ ಓದಿ-Health Tips: ಈ ಆಯುರ್ವೇದ ಚೂರ್ಣ ಸೇವಿಸಿದರೆ, ಮಧುಮೇಹ ನಿಯಂತ್ರಣಕ್ಕೆ ಔಷಧಿ ಬೇಕಾಗಿಲ್ಲ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.