Hair Treatment: ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ, ಮಾನವ ಜೀವನದಲ್ಲಿ ಅನೇಕ ನೈಸರ್ಗಿಕ ಬದಲಾವಣೆಗಳು ಉಂಟಾಗುತ್ತವೆ. ಇದರ ಜೊತೆಗೆ ನಮ್ಮ ದೇಹದಲ್ಲಿಯೂ ಕೂಡ ಹಲವು ಬದಲಾವಣೆಗಳೂ ಆಗತೊಡಗುತ್ತವೆ. ಈ ಎಲ್ಲಾ ವಿಷಯಗಳ ಹಿಂದೆ ಆಹಾರ ಮತ್ತು ಹಾರ್ಮೋನುಗಳು ಪ್ರಮುಖ ಕಾರಣವಾಗಿವೆ. ಬಾಲ್ಯದಲ್ಲಿ ಮಾಡಲಾಗುವ ಎಣ್ಣೆ ಮಸಾಜ್ ಚರ್ಮದ ಕೋಶಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ, ಇದು ನಮ್ಮ ದೇಹದ ಸೌಂದರ್ಯವನ್ನು ಬದಲಾಯಿಸುತ್ತದೆ, ಇದೇ ರೀತ್ ಕೂದಲಿನ ಬಗ್ಗೆಯೂ ಕಾಳಜಿ ವಹಿಸುವ ಅವಶ್ಯಕತೆಯಿದೆ. ಕಾಳಜಿ ವಹಿಸದ ಕಾರಣ, ನಾವು ಬಿಳಿ ಕೂದಲು, ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹೀಗಾಗಿ ಹುಣಸೆ ಎಲೆಗಳ ಸಹಾಯದಿಂದ ಈ ಎಲ್ಲಾ ಸಮಸ್ಯೆಗಳನ್ನು ನಾವು ನಿವಾರಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
ಆಮ್ಲಾ ಮತ್ತು ಹುಣಸೆ ಎಲೆಗಳ ಬಳಕೆ
ಆಮ್ಲಾ ಮತ್ತು ಹುಣಸೆ ಎಲೆ ಕೂದಲಿಗೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ಇದಕ್ಕಾಗಿ ನೀವು ತಾಜಾ ಆಮ್ಲಾವನ್ನು ತೆಗೆದುಕೊಳ್ಳಬೇಕು ಮತ್ತು ಕೆಲವು ಹುಣಸೆ ಎಲೆಗಳನ್ನು ತೆಗೆದುಕೊಳ್ಳಬೇಕು. ನಂತರ ನೆಲ್ಲಿಕಾಯಿಯನ್ನು ಕತ್ತರಿಸಿ ಮತ್ತು ಅವುಗಳನ್ನು ಹುಣಸೆ ಎಲೆಗಳೊಂದಿಗೆ ರುಬ್ಬಿ ಅದರ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಸ್ನಾನ ಮಾಡುವ ಮೊದಲು ಕೂದಲಿಗೆ ಈ ಪೇಸ್ಟ್ ಅನ್ನು ಅನ್ವಯಿಸಿ. ಇದರಿಂದ ಶೀಘ್ರದಲ್ಲಿಯೇ ನಿಮ್ಮ ಬಿಳಿ ಸಮಸ್ಯೆ ನಿವಾರಣೆಯಾಗುತ್ತವೆ.
ಹುಣಸೆ ಎಲೆಗಳು ಮತ್ತು ಮೊಸರಿನ ಬಳಕೆ
ಮೊಸರು ಮತ್ತು ಹುಣಸೆ ಎಲೆಗಳಿಂದ ನಿಮ್ಮ ಕೂದಲಿಗೆ ಹೇರ್ ಪ್ಯಾಕ್ ಅನ್ನು ನೀವು ತಯಾರಿಸಬಹುದು, ಇದು ನಿಮ್ಮ ಬೂದು ಬಣ್ಣದ ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಸ್ವಲ್ಪ ಹುಣಸೆ ಎಲೆಗಳನ್ನು ಮೊಸರಿನೊಂದಿಗೆ ಬೆರೆಸಿ ಮತ್ತು ನಿಮ್ಮ ಕೂದಲಿಗೆ 1 ಗಂಟೆ ಕಾಲದವರೆಗೆ ಅನ್ವಯಿಸಿ. ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಕಾಣಲು ಪ್ರಾರಂಭಿಸುವಿರಿ.
ಇದನ್ನೂ ಓದಿ-Health Tips: ಈ ಆಯುರ್ವೇದ ಚೂರ್ಣ ಸೇವಿಸಿದರೆ, ಮಧುಮೇಹ ನಿಯಂತ್ರಣಕ್ಕೆ ಔಷಧಿ ಬೇಕಾಗಿಲ್ಲ!
ಹುಣಸೆ ಎಲೆಗಳು ಮತ್ತು ಮೆಂತ್ಯ ಬೀಜಗಳ ಬಳಕೆ
ಮೆಂತ್ಯ ಬೀಜಗಳು ಮತ್ತು ಹುಣಸೆ ಎಲೆಗಳನ್ನು ಕೂದಲಿಗೆ ತುಂಬಾ ಹಿತಕಾರಿ ಎಂದು ಸಾಬೀತಾಗುತ್ತವೆ. ಇವುಗಳನ್ನು ಒಟ್ಟಿಗೆ ಬಳಕೆ ಮಾಡಲು ನೀವು ರಾತ್ರಿಯಿಡೀ ಒಂದು ಸಣ್ಣ ಪಾತ್ರೆಯಲ್ಲಿ ಮೆಂತ್ಯ ಬೀಜಗಳನ್ನು ನೆನೆಹಾಕಿ. ಬೆಳಗ್ಗೆ ಎದ್ದ ನಂತರ, ಅದರ ನೀರನ್ನು ಫಿಲ್ಟರ್ ಮಾಡಿ. ಮೆಂತ್ಯ ಬೀಜಗಳಲ್ಲಿ ಹುಣಸೆ ಎಲೆಗಳನ್ನು ಬೆರೆಸಿ ರುಬ್ಬಿಕೊಳ್ಳಿ, ಈಗ ನೀವು ಈ ಪೇಸ್ಟ್ ಅನ್ನು ತಲೆಗೂದಲಿಗೆ ಅನ್ವಯಿಸಬಹುದು.
ಇದನ್ನೂ ಓದಿ-Monsoon Tips: ಮಳೆಗಾಲದ ಋತುವಿನಲ್ಲಿ ಕಾಮಾಲೆ ರೋಗ ನಿಯಂತ್ರಣಕ್ಕೆ ಇಂದಿನಿಂದಲೇ ಅನುಸರಿಸಿ ಈ ಆಹಾರ ಕ್ರಮ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.