Cancer Risk: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅತ್ಯಂತ ಮಾರಕ ಕಾಯಿಲೆಯಾಗಿ ಹೊರಹೊಮ್ಮುತ್ತಿದೆ. ತಜ್ಞರ ಪ್ರಕಾರ, ಕೆಲವು ಆಹಾರ ಪದ್ಧತಿಗಳು ಸಹ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತವೆ. ಕ್ಯಾನ್ಸರ್  ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಆಹಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 


* ಸಂಸ್ಕರಿಸಿದ ಮಾಂಸ: 
ಬೇಕನ್, ಸಾಸೇಜ್‌ಗಳು, ಹಾಟ್ ಡಾಗ್‌ಗಳು ಮತ್ತು ಡೆಲಿ ಮಾಂಸಗಳನ್ನು, ವಿಶ್ವ ಆರೋಗ್ಯ ಸಂಸ್ಥೆ (WHO) ಕಾರ್ಸಿನೋಜೆನ್‌ ಗುಂಪು 1  ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


* ಕೆಂಪು ಮಾಂಸ: 
ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸವನ್ನು (ಗೋಮಾಂಸ, ಹಂದಿಮಾಂಸ, ಕುರಿ ಮಾಂಸ) ಸೇವಿಸುವುದರಿಂದ, ಕೊಲೊರೆಕ್ಟಲ್, ಮೇದೋಜ್ಜೀರಕ ಗ್ರಂಥಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ- ನೀವು ನಿರ್ಲಕ್ಷಿಸಲೇಬಾರದ ಸಾಮಾನ್ಯವಲ್ಲದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳು!


* ಮದ್ಯಪಾನ: 
ಅತಿಯಾದ ಮದ್ಯಪಾನ ಸೇವನೆ ಬಾಯಿ, ಗಂಟಲು, ಅನ್ನನಾಳ, ಯಕೃತ್ತು, ಸ್ತನ ಮತ್ತು ಕೊಲೊನ್ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ.


* ಸಕ್ಕರೆ ಪಾನೀಯ ಮತ್ತು ಆಹಾರಗಳು: 
ಸಕ್ಕರೆಯಿಂದ ಮಾಡಿದ ಸಿಹಿಯಾದ ಪಾನೀಯ ಮತ್ತು ಆಹಾರಗಳ ಹೆಚ್ಚಿನ ಸೇವನೆ, ಸ್ಥೂಲಕಾಯವನ್ನುಂಟು ಮಾಡುತ್ತದೆ. ಅಲ್ಲದೆ ಸ್ತನ, ಯಕೃತ್ತು ಮತ್ತು ಕೊಲೊರೆಕ್ಟಲ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್‌ಗೂ ಕಾರಣವಾಗುವ ಸಾಧ್ಯತೆ ಇದೆ.


* ಉಪ್ಪಿನಲ್ಲಿ ಸಂರಕ್ಷಿಸಿಟ್ಟ ಆಹಾರ:  
ಉಪ್ಪಿನ ಸಂಗ್ರಹಿಸಿಟ್ಟ ತರಕಾರಿ, ಉಪ್ಪಿನಕಾಯಿ, ಒಣ ಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ  ಹೊಟ್ಟೆಯ ಕ್ಯಾನ್ಸರ್ ಸಾಧ್ಯತೆ ಹೆಚ್ಚಿರುತ್ತದೆ.


* ಸುಟ್ಟ, ಪ್ರೈ ಮಾಡಿದ ಮತ್ತು ಬೇಯಿಸಿದ (ತಂದೂರಿ) ಆಹಾರಗಳು: 
ಹೆಚ್ಚಿನ ಪ್ರಮಾಣದಲ್ಲಿ ಮಾಂಸವನ್ನು ಬೇಯಿಸುವುದು. ಉದಾಹರಣೆಗೆ ತಂದೂರಿ, ಗ್ರಿಲ್ಲಿಂಗ್ ಅಥವಾ ಪ್ರೈ ಮಾಡುವುದರಿಂದ ಪಾಲಿಸಿಕ್ಲಿಕ್‌ ಆರೊಮ್ಯಾಟಿಕ್‌ ಹೈಡ್ರೋಕಾರ್ಬನ್ (PAHs ) ಮತ್ತು ಹೆಟೆರೋಸೈಕ್ಲಿಕ್‌ ಅಮೈನ್ಸ್‌ (HCAs) ಎನ್ನುವ ಕಾರ್ಸಿನೋಜೆನಿಕ್‌ ಅಂಶಗಳನ್ನು ಉತ್ಪಾದಿಸುತ್ತವೆ. ಇದು ಕ್ಯಾನ್ಸರ್‌ ಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ- ಸಾರ್ಕೋಮಾ - ಗುಪ್ತ ಆಕ್ರಮಣಕಾರಿ ಕ್ಯಾನ್ಸರ್‌ನ ಅಪರೂಪದ ಚಿಹ್ನೆಗಳು ಮತ್ತು ಲಕ್ಷಣಗಳು


* ಹೆಚ್ಚು ಸಂಸ್ಕರಿಸಿದ ಆಹಾರಗಳು: 
ಸಂಸ್ಕರಿಸಿದ ಸಕ್ಕರೆ ಪದಾರ್ಥದ ಆಹಾರ ಸೇವನೆ ಮಾಡುವುದರಿಂದ ಬೊಜ್ಜು ಮತ್ತು ಕ್ಯಾನ್ಸರ್ ಸಾಧ್ಯತೆ ಹೆಚ್ಚಿದೆ.


* ಟ್ರಾನ್ಸ್ ಫ್ಯಾಟ್ಸ್:  
ಕರಿದ ಪದಾರ್ಥ, ಬೇಕ್‌ ಮಾಡಿದ ಆಹಾರ ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಕಂಡುಬರುವ  ಟ್ರಾನ್ಸ್ ಫ್ಯಾಟ್ಸ್,  ಉರಿಯೂತ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.


*ಕೃತಕ ಸಿಹಿ:  
ಕೃತಕ ಸಿಹಿ ಪದಾರ್ಥಗಳ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಕೆಲವು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇನ್ನೂ ನಿರ್ದಿಷ್ಟ ಸಾಕ್ಷಿಗಳು ಲಭ್ಯವಾಗಿಲ್ಲ.


* ಕಲುಷಿತ ಆಹಾರಗಳು: 
ಅಫ್ಲಾಟಾಕ್ಸಿನ್‌ ಕೂಡಿದ ಆಹಾರಗಳು (ಸರಿಯಾಗಿ ಸಂಗ್ರಹಿಸದ ಧಾನ್ಯಗಳು ಮತ್ತು ಬೀಜಗಳ ಮೇಲೆ ಬೆಳೆಯುವ ಶಿಲೀಂಧ್ರ) ಅಥವಾ ಇತರ ಕಾರ್ಸಿನೋಜೆನ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.


ಹಣ್ಣು, ತರಕಾರಿ, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವೆನೆಯಿಂದ ಹಾಗೂ ಈ ಮೇಲಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.