Bad Cholesterol Symptoms: ಇಂದಿನ ಅನಾರೋಗ್ಯಕರ ಜೀವನಶೈಲಿಯ ಕಾರಣ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯ ಕೂಡ ಈ ಆರೋಗ್ಯ ಸಮಸ್ಯೆಗಳಲ್ಲಿ ಶಾಮೀಲಾಗಿವೆ. ಮತ್ತೊಂದೆಡೆ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಎದುರಾಗುತ್ತವೆ.ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ (Bad Cholesterol) ಕಂಡುಬರುತ್ತದೆ. ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಕೆಟ್ಟ ಕೊಲೆಸ್ಟ್ರಾಲ್. ಒಳ್ಳೆಯ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಲ್ಲ. ಮತ್ತೊಂದೆಡೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರೋಗಗಳ ಅಪಾಯವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ, ದೇಹದಲ್ಲಿ ಕಂಡುಬರುವ ಲಕ್ಷಣಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ, (Health News In Kannada)

COMMERCIAL BREAK
SCROLL TO CONTINUE READING

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಈ ಲಕ್ಷಣಗಳು ಕಂಡುಬರುತ್ತವೆ (Do not ever ignore these indications  of bad cholesterol)
ದೇಹದಲ್ಲಿ ಸೆಳೆತ (Body Pain In Bad Cholesterol)

ದೇಹದ ಯಾವುದೇ ಭಾಗದಲ್ಲಿ ಆಗಾಗ್ಗೆ ಸೆಳೆತ ಕಾಣಿಸಿಕೊಳ್ಳಲು ಶುರು ಮಾಡುತ್ತದೆ. ಇದು ಸಂಭವಿಸಿದಲ್ಲಿ, ಅದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದರಿಂದ, ನೀವು ಕಾಲುಗಳು, ತೊಡೆಗಳು, ಸೊಂಟ ಮತ್ತು ಕಾಲ್ಬೆರಳುಗಳಲ್ಲಿನ ಸೆಳೆತದ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಈ ಸಮಸ್ಯೆಯು ಸ್ವಲ್ಪ ಸಮಯದವರೆಗೆ ಇದ್ದು, ನಂತರ ಗುಣಮುಖವಾಗುತ್ತದೆ, ಹೀಗಾದರೆ ಅದು ಕೆಟ್ಟ ಕೊಲೆಸ್ಟ್ರಾಲ್ ನ ಒಂದು ಲಕ್ಷಣ ಮತ್ತು ಅದನ್ನು ನಿರ್ಲಕ್ಷಿಸಬೇಡಿ.

ವಾಕರಿಕೆ (Omitting Sensation In Bad Cholesterol)
ಕೆಲವೊಮ್ಮೆ ಜನರು ಲಘುವಾಗಿ ಏನನ್ನಾದರೂ ತಿಂದ ತಕ್ಷಣ ವಾಕರಿಕೆ ಅನುಭವ ಬರಲು ಪ್ರಾರಂಭಿಸುತ್ತದೆ. ಈ ಸಮಸ್ಯೆಯು ಒಂದು ಅಥವಾ ಎರಡು ದಿನಗಳವರೆಗೆ ಇದ್ದರೆ, ಅದು ಋತುಮಾನದ ಸಮಸ್ಯೆಯಾಗಿರಬಹುದು, ಆದರೆ ಇದು ಪದೇ ಪದೇ ಸಂಭವಿಸುತ್ತಿದ್ದರೆ, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸಂಕೇತವಾಗಿದೆ.


ಇದನ್ನೂ ಓದಿ-White Hair Remedies:ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬೇಕೆ? ಈ 3 ಎಣ್ಣೆಗಳನ್ನು ಮನೆಯಲ್ಲಿಯೇ ತಯಾರಿಸಿ ಹಚ್ಚಿ!

ಬೆವರು ಬರುವುದು (Swatting In Bad Cholesterol)
ಬಹುತೇಕ ಸಂದರ್ಭಗಳಲ್ಲಿ, ಬೆವರು ಬರುವುದನ್ನು ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಆದರೆ ನೀವು ಸಾಮಾನ್ಯ ತಾಪಮಾನದಲ್ಲಿ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಬೆವರುತ್ತಿದ್ದರೆ, ತಕ್ಷಣಕ್ಕೆ ಎಚ್ಚೆತ್ತುಕೊಳ್ಳಿ. ಏಕೆಂದರೆ ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಒಂದು ಸಂಕೇತವಾಗಿದೆ. ಇದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು ಆದ್ದರಿಂದ ನಿರ್ಲಕ್ಷಿಸಬೇಡಿ.


ಇದನ್ನೂ ಓದಿ-Hair Fall Remedy: ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಚಿಕಿತ್ಸೆ ಈ ಬಯೊಟಿನ್ ರಿಚ್ ಪೌಡರ್!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ