ನವದೆಹಲಿ : ಚಳಿಗಾಲದಲ್ಲಿ ಬಾಳೆಹಣ್ಣನ್ನು (Banana in winter) ಸೇವಿಸುವುದರಿಂದ ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು (Banana) ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ ಕೆಲವು ಸಮಸ್ಯೆಗಳಿದ್ದಲ್ಲಿ ಬಾಳೆಹಣ್ಣನ್ನು ಸೇವಿಸಬಾರದು. ತಜ್ಞರ ಪ್ರಕಾರ, ಉಸಿರಾಟದ ಸಮಸ್ಯೆಗಳು, ಶೀತ ಮತ್ತು ಕೆಮ್ಮಿನ ಸಮಸ್ಯೆಗಳಿದ್ದರೆ, ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತದೆ.  ಇನ್ನು ಸೈನಸ್ ಸಮಸ್ಯೆಗಳಿದ್ದರೆ, ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.  


COMMERCIAL BREAK
SCROLL TO CONTINUE READING

ಮಲಬದ್ಧತೆ ಸಮಸ್ಯೆ :
ಸರಿಯಾಗಿ ಮಾಗಿದ ಬಾಳೆಹಣ್ಣು (Banana) ತಿನ್ನುವುದರಿಂದ ಹೊಟ್ಟೆ ಶುಚಿಯಾಗುತ್ತದೆ. ಆದರೆ ಬಾಳೆಹಣ್ಣು ಅರ್ಧಂಬರ್ಧ ಬಲಿತಿದ್ದರೆ,  ಅದು ಮಲಬದ್ಧತೆಗೆ (Constipation) ಕಾರಣವಾಗಬಹುದು. ಬಾಳೆಹಣ್ಣು ಸೇವಿಸುವಾಗಲೂ ಮಿತಿಯಾಗಿ ಸೇವಿಸುವುದು ಉತ್ತಮ. ಹಸಿ ಮತ್ತು ಅರ್ಧ ಮಾಗಿದ ಬಾಳೆಹಣ್ಣುಗಳನ್ನು ತಿನ್ನುವುಡು ಸರಿಯಲ್ಲ.  


ಇದನ್ನೂ ಓದಿ : Eating Apple: ಸೇಬು ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ?


ಬೊಜ್ಜು ಹೆಚ್ಚಾಗುತ್ತದೆ :
ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಬಾಳೆಹಣ್ಣು ಫೈಬರ್ ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಅದನ್ನು ಹಾಲಿನೊಂದಿಗೆ ಸೇವಿಸಿದರೆ, ನಂತರ ತೂಕ (Weight gain) ಹೆಚ್ಚಾಗುತ್ತದೆ.


ಹೊಟ್ಟೆ ನೋವು ಮತ್ತು ಆಸಿಡಿಟಿ :
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಬಾಳೆಹಣ್ಣು ಪಿಷ್ಟವನ್ನು ಹೊಂದಿರುತ್ತದೆ. ಆದ್ದರಿಂದ ಅದನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದು ಹೊಟ್ಟೆ ನೋವು ಮತ್ತು ವಾಂತಿಯ (Vomiting) ಸಮಸ್ಯೆಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ : Diabetes: ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಈ 2 ಪದಾರ್ಥಗಳು ರಾಮಬಾಣವಿದ್ದಂತೆ!


ಸಕ್ಕರೆ ಮಟ್ಟ ಹೆಚ್ಚಾಗುತ್ತದೆ :
ಮಧುಮೇಹ ಇರುವವರು ಬಾಳೆಹಣ್ಣು ತಿನ್ನುವುದು ಹಾನಿಕಾರಕವಾಗಿದೆ. ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ.  ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಮಧುಮೇಹಿಗಳಾಗಿದ್ದರೆ ಬಾಳೆಹಣ್ಣಿನ ಸೇವನೆಯನ್ನು ಕಡಿಮೆ ಮಾಡಿ. 


ಹಲ್ಲುಗಳು ಹಾನಿಗೊಳಗಾಗಬಹುದು :
ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ಸೇವಿಸಿದರೆ ದಂತಕ್ಷಯವು ಸಂಭವಿಸಬಹುದು. ಬಾಳೆಹಣ್ಣಿನಲ್ಲಿ ಅಮೈನೋ ಆಸಿಡ್ ಟೈರೋಸಿನ್ ಇರುತ್ತದೆ. ಇದು ದೇಹದಲ್ಲಿ ಟೈರಮೈನ್ ಆಗಿ ಬದಲಾಗುತ್ತದೆ. ಇದು ಮೈಗ್ರೇನ್ ಅನ್ನು ಪ್ರಚೋದಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.