Vomiting problem during travel: ಪ್ರಯಾಣದ ವೇಳೆ ವಾಂತಿ ಸಮಸ್ಯೆಯಿದ್ದರೆ ಜೊತೆಗಿರಲಿ ಈ ವಸ್ತುಗಳು

Vomiting problem during travel:ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಯಿಂದಾಗಿ ಅನೇಕ ಜನರು ಹೊರಗೆ ಹೋಗಲು ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ.

Written by - Ranjitha R K | Last Updated : Jun 27, 2021, 03:02 PM IST
  • ಪ್ರಯಾಣಿಸುವಾಗ ಅನೇಕ ಜನರಿಗೆ ವಾಂತಿಯಾಗುವ ಸಮಸ್ಯೆ ಇರುತ್ತದೆ.
  • ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ.
  • ಪ್ರಯಾಣಕ್ಕೂ ಮುನ್ನ ವಸ್ತುಗಳು ನಿಮ್ಮ ಜೊತೆಯಿರಲಿ
Vomiting problem during travel: ಪ್ರಯಾಣದ ವೇಳೆ ವಾಂತಿ ಸಮಸ್ಯೆಯಿದ್ದರೆ ಜೊತೆಗಿರಲಿ ಈ ವಸ್ತುಗಳು title=
ಪ್ರಯಾಣಕ್ಕೂ ಮುನ್ನ ವಸ್ತುಗಳು ನಿಮ್ಮ ಜೊತೆಯಿರಲಿ (photo zee news)

ನವದೆಹಲಿ : ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ಅನೇಕ ಜನರಿಗೆ ವಾಂತಿಯಾಗುವ ಸಮಸ್ಯೆ (Vomiting problem during travel) ಇರುತ್ತದೆ. ನಿಮಗೂ ಈ ಸಮಸ್ಯೆಯಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಪ್ರಯಾಣದ ಸಮಯದಲ್ಲಿ ವಾಂತಿ (Vomiting problem) ಮಾಡುವ ಸಮಸ್ಯೆಗೆ ಕೆಲ ಪರಿಹಾರಗಳು ಇಲ್ಲಿವೆ. 

ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಯಿಂದಾಗಿ (Vomiting problem during travel) ಅನೇಕ ಜನರು ಹೊರಗೆ ಹೋಗಲು ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ. ಪ್ರಯಾಣಕ್ಕೂ ಮುನ್ನ ಈ ವಸ್ತುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ. 

ಇದನ್ನೂ ಓದಿ : ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ

1. ಪುದೀನಾ : 
ಆಹಾರ ತಜ್ಞ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಪ್ರಯಾಣದ ಸಮಯದಲ್ಲಿ ನಿಮಗೆ ತಲೆಸುತ್ತುವುದು, ವಾಂತಿ ಮತ್ತು ವಾಕರಿಕೆ ಸಮಸ್ಯೆಗಳಿದ್ದರೆ, ಪುದೀನ (Mint leaves) ಸಹಾಯಕ್ಕೆ ಬರುತ್ತದೆ. ಪುದೀನ ಸಿರಪ್ ಅಥವಾ ಪಾನಕವನ್ನು ಪ್ರಯಾಣದ ವೇಲೆ ನಿಮ್ಮೊಂದಿಗೆ  ಕೊಂಡೊಯ್ಯಿರಿ. ಪ್ರಯಾಣಿಸುವ ಮೊದಲು ಅದನ್ನು ಕುಡಿಯಿರಿ. ಇದಕ್ಕೆ ಬದಲಾಗಿ ಪುದೀನ ಮಾತ್ರೆಗಳನ್ನು ಕುಡಾ ತೆಗೆದುಕೊಳ್ಳಬಹುದು. 

2. ನಿಂಬೆ-ಉಪ್ಪು :
ಪ್ರಯಾಣ ಮಾಡುವಾಗ ವಾಕರಿಕೆ ಮತ್ತು ವಾಂತಿ ಉಂಟಾದರೆ, ನಿಂಬೆ ರಸವನ್ನು (Lemon juice)ನೀರಿನಲ್ಲಿ ಬೆರೆಸಿ ಅದಕ್ಕೆ ಉಪ್ಪು ಸೇರಿಸಿ ಸೇವಿಸಬಹುದು. ಪ್ರಯಾಣಕ್ಕೆ ಹೋಗುವ ಮೊದಲು ನಿಂಬೆ, ಉಪ್ಪು (Salt) ಮತ್ತು ನೀರನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ.

ಇದನ್ನೂ ಓದಿ : Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ

3. ಸಿಟ್ರಸ್ ಹಣ್ಣುಗಳು ಮತ್ತು ರಸಗಳು :
ಪ್ರಯಾಣ ಆರಂಭಕ್ಕೂ ಮುನ್ನ ಸಿಟ್ರಸ್ ಹಣ್ಣುಗಳನ್ನು ಅಥವಾ ಅವುಗಳ ರಸವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಿಮಗೆ ವಾಂತಿ, ತಲೆಸುತ್ತುವುದು, ವಾಕರಿಕೆ ಮುಂತಾದ ಸಮಸ್ಯೆ ಎದುರಾದಾಗಲೆಲ್ಲಾ ಅದನ್ನು ಸೇವಿಸಬೇಕು. 

4. ಶುಂಠಿ ಪರಿಹಾರ : 
ಪ್ರಯಾಣದ ಸಮಯದಲ್ಲಿ ಶುಂಠಿ (Ginger) ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಶುಂಠಿಯ ಸಿಪ್ಪೆ ತೆಗೆದು, ಅದರ ಚೂರುಗಳನ್ನು ಕತ್ತರಿಸಿ ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಪ್ರಯಾಣ ಮಾಡುವಾಗ ನಿಮಗೆ ವಾಂತಿ, ತಲೆಸುತ್ತುವುದು ಮತ್ತು ವಾಕರಿಕೆ ಸಮಸ್ಯೆ ಎದುರಾದಾಗ ಶುಂಠಿ ಚೂರುಗಳನ್ನು (Benefits of ginger) ನಿಮ್ಮ ಬಾಯಿಯಲ್ಲಿ ಇಟ್ಟುಕೊಂಡು ಅದರ ರಸವನ್ನು ಹೀರಿಕೊಳ್ಳಿ. 

ಇದನ್ನೂ ಓದಿ : Thumbe Plant Benefits : ಶಿವನಿಗೆ ಶ್ರೇಷ್ಠವಾದ 'ತುಂಬೆ ಹೂ'ವಿನಲ್ಲಿದೆ ನಾನಾ ರೋಗ ವಾಸಿ ಮಾಡುವ ಶಕ್ತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News