ಫೇಶಿಯಲ್ ನಂತರ ಮಾಡುವ ಈ ತಪ್ಪುಗಳಿಂದ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತದೆ
Things Not Do After Facial: ಕೆಲವೊಮ್ಮೆ ಫೇಶಿಯಲ್ ಮಾಡಿದ ನಂತರವೂ ಮುಖದ ಕಾಂತಿ ಮಂಕಾಗುತ್ತದೆ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೇ ಕಾರಣ.
ಬೆಂಗಳೂರು : ಬೇಸಿಗೆ ಕಾಲದಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಧೂಳು, ಸೂರ್ಯನ ಬೆಳಕು ನಿಮ್ಮ ತ್ವಚೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತದೆ. ಇದರಿಂದಾಗಿ ಚರ್ಮವು ಶುಷ್ಕವಾಗುತ್ತದೆ. ಈ ಹಿನ್ನೆಲೆಯಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಪ್ರತಿ ತಿಂಗಳು ಫೇಶಿಯಲ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಫೇಶಿಯಲ್ ತ್ವಚೆಯನ್ನು ಕೆಡದಂತೆ ಕಾಪಾಡುತ್ತದೆ. ಕೆಲವೊಮ್ಮೆ ಫೇಶಿಯಲ್ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಅದಕ್ಕೂ ಕಾರಣಗಳಿವೆ. ಫೇಶಿಯಲ್ ಮಾಡಿದ ನಂತರ ನಾವು ಮಾಡುವ ಕೆಲವೊಂದು ತಪ್ಪುಗಳ ಕಾರಣದಿಂದ ಹೀಗಾಗುತ್ತದೆ.
ಫೇಶಿಯಲ್ ಮಾಡಿದ ನಂತರ ಈ ತಪ್ಪುಗಳನ್ನು ಮಾಡಬೇಡಿ :
ಮತ್ತೆ ಮತ್ತೆ ಮುಖವನ್ನು ಸ್ಪರ್ಶಿಸುವುದು :
ಕೆಲವರಿಗೆ ಫೇಶಿಯಲ್ ನಂತರ, ಮತ್ತೆ ಮತ್ತೆ ಮುಖವನ್ನು ಮುಟ್ಟಿ ನೋಡುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಮೊಡವೆಗಳ ಸಮಸ್ಯೆ ಕಾಣಿಸಿಕೊಳ್ಳಬಹುದು. ಪದೇ ಪದೇ ಮುಖವನ್ನು ಮುಟ್ಟುತ್ತಾ ಇದ್ದರೆ ಸೋಂಕು ತ್ವಚೆಯೊಳಗೆ ತಲುಪುತ್ತದೆ. ಅದಕ್ಕಾಗಿಯೇ ಫೇಶಿಯಲ್ ಮಾಡಿದ ನಂತರ, ಪದೇ ಪದೇ ಮುಖವನ್ನು ಸ್ಪರ್ಶಿಸಬಾರದು.
ಇದನ್ನೂ ಓದಿ : Side Effects Of Papaya: ಪಪ್ಪಾಯಿ ಆರೋಗ್ಯಕ್ಕೆ ಆಗುವ ಹಾನಿಗಳೇನು ನಿಮಗೆ ತಿಳಿದಿವೆಯಾ?
ಮೇಕ್ಅಪ್ ಹಾಕುವುದು :
ಫೇಶಿಯಲ್ ಆದ ತಕ್ಷಣ ಮೇಕಪ್ ಮಾಡಬಾರದು. ಏಕೆಂದರೆ ಇದು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಯಾವುದಾದರೂ ಫಂಕ್ಷನ್‌ಗೆ ಹೋಗುವುದಾದರೆ 3 ದಿನ ಮುಂಚಿತವಾಗಿ ಫೇಶಿಯಲ್ ಮಾಡಿಸಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಫೇಶಿಯಲ್ ನಂತರ ತೆರೆದ ರಂಧ್ರಗಳನ್ನು ಮೇಕಪ್ ನ ರಾಸಾಯನಿಕಗಳು ಮುಚ್ಚುವುದನ್ನು ತಡೆಯಬಹುದು. ತ್ವಚೆ ಹಾಳಾಗದಂತೆ ಕಾಪಾಡಬಹುದು.
ಬಿಸಿಲಿಗೆ ಹೋಗಬಾರದು :
ಫೇಶಿಯಲ್ ಮಾಡಿದ ತಕ್ಷಣ ಬಿಸಿಲಿನಲ್ಲಿ ತಿರುಗಾಡಲೇ ಬಾರದು. ಮುಖದ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಆದ್ದರಿಂದ ಫೇಶಿಯಲ್ ನಂತರ ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ಇದನ್ನೂ ಓದಿ : ಕಂತೆ ಕಂತೆಯಾಗಿ ಕೂದಲುದುರುತ್ತಿವೆಯಾ? ಮನೆಯಲ್ಲೇ ತಯಾರಿಸಿ ಈ ಮ್ಯಾಜಿಕಲ್ ಎಣ್ಣೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.