Side Effects Of Papaya: ಪಪ್ಪಾಯಿ ಆರೋಗ್ಯಕ್ಕೆ ಆಗುವ ಹಾನಿಗಳೇನು ನಿಮಗೆ ತಿಳಿದಿವೆಯಾ?

Health Tips: ಮಧುಮೇಹ, ಹೃದಯ ಮತ್ತು ಕ್ಯಾನ್ಸರ್ ರೋಗಿಗಳಿಗೆ ಪಪ್ಪಾಯಿ ಪ್ರಯೋಜನಕಾರಿಯಾಗಿದೆ. ಆದರೆ, ಕೆಲವರು ಪಪ್ಪಾಯಿಯನ್ನು ತಿನ್ನಬಾರದು.  

Written by - Nitin Tabib | Last Updated : Apr 5, 2023, 03:36 PM IST
  • ಮಧುಮೇಹ, ಹೃದಯ ಮತ್ತು ಕ್ಯಾನ್ಸರ್ ರೋಗಿಗಳಿಗೆ ಪಪ್ಪಾಯಿ ಪ್ರಯೋಜನಕಾರಿಯಾಗಿದೆ.
  • ಆದರೆ, ಕೆಲವರು ಪಪ್ಪಾಯಿಯನ್ನು ತಿನ್ನಬಾರದು.
  • ಪಪ್ಪಾಯಿಗೆ ಅಲರ್ಜಿ ಇರುವವರು ಇವರಲ್ಲಿ ಶಾಮೀಲಾಗಿದ್ದಾರೆ.
Side Effects Of Papaya: ಪಪ್ಪಾಯಿ ಆರೋಗ್ಯಕ್ಕೆ ಆಗುವ ಹಾನಿಗಳೇನು ನಿಮಗೆ ತಿಳಿದಿವೆಯಾ? title=
ಪಪ್ಪಾಯಿ ಸೇವನೆಯ ಅಡ್ಡಪರಿಣಾಮಗಳು!

Side Effects Of Eating Papaya: ಪಪ್ಪಾಯಿ ಒಂದು ಆರೋಗ್ಯಕರ ಹಣ್ಣಾಗಿದ್ದು ಅದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಈ ಹಣ್ಣು ಆಹಾರದಲ್ಲಿ ಅತ್ಯಗತ್ಯ. ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಸಿದ ಅನುಭವ ನೀಡುತ್ತದೆ. ಮಧುಮೇಹ, ಹೃದಯ ಮತ್ತು ಕ್ಯಾನ್ಸರ್ ರೋಗಿಗಳಿಗೆ ಪಪ್ಪಾಯಿ ಪ್ರಯೋಜನಕಾರಿಯಾಗಿದೆ. ಆದರೆ, ಕೆಲವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಗೆ ಅಲರ್ಜಿ ಇರುವವರು ಇವರಲ್ಲಿ ಶಾಮೀಲಾಗಿದ್ದಾರೆ. ಇದಲ್ಲದೆ, ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ  ವೈದ್ಯರು ಪಪ್ಪಾಯಿಯನ್ನು ಸೇವಿಸಬಾರದು ಎಂದು ಸಲಹೆ ನೀಡುತ್ತಾರೆ. ಪಪ್ಪಾಯಿಯನ್ನು ಯಾರು ತಿನ್ನಬಾರದು ತಿಳಿದುಕೊಳ್ಳೋಣ ಬನ್ನಿ.

ಗರ್ಭಾವಸ್ಥೆಯಲ್ಲಿ
ಗರ್ಭಿಣಿಯರು ಪಪ್ಪಾಯಿ ತಿನ್ನಬಾರದು. ಪಪ್ಪಾಯಿಯು ಲ್ಯಾಟೆಕ್ಸ್ ಅನ್ನು ಹೊಂದಿರುತ್ತದೆ, ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ. ಈ ಕಾರಣದಿಂದಾಗಿ, ಮಗು ಅವಧಿಗೆ ಮುಂಚೆಯೇ ಜನಿಸಬಹುದಾದ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪಪ್ಪಾಯಿಯನ್ನು ತಿನ್ನುವುದರಿಂದ ಭ್ರೂಣವನ್ನು ಬೆಂಬಲಿಸುವ ಪೊರೆಯು ದುರ್ಬಲಗೊಳ್ಳುತ್ತದೆ.

ಗ್ಯಾಸ್ ಮತ್ತು ಅಸಿಡಿಟಿ
ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುತ್ತಿರುವವರೂ ಕೂಡ ಪಪ್ಪಾಯಿಯನ್ನು ಸೇವಿಸಬಾರದು. ಇದು ಆಮ್ಲೀಯವಾಗಿದ್ದು, ಇದರಿಂದಾಗಿ ಗ್ಯಾಸ್ ಮತ್ತು ಅಸಿಡಿಟಿ ಇರುವವರ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಚಿಕ್ಕ ಮಕ್ಕಳಿಗೆ
ಚಿಕ್ಕ ಮಕ್ಕಳಿಗೆ ಪಪ್ಪಾಯಿ ಕೊಡಬಾರದು. ಪಪೈನ್ ಎಂಬ ಕಿಣ್ವವು ಈ ಹಣ್ಣಿನಲ್ಲಿ ಕಂಡುಬರುತ್ತದೆ, ಇದು ಚಿಕ್ಕ ಮಕ್ಕಳಿಗೆ ಹಾನಿಕಾರಕವಾಗಿದೆ.

ಹಾಲುಣಿಸುವ ಮಹಿಳೆಯರು
ಪಪ್ಪಾಯಿಯು ಪಪೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ಎದೆ ಹಾಲಿಗೆ ಹಾದುಹೋಗುತ್ತದೆ ಮತ್ತು ಶಿಶುಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಹಾಲುಣಿಸುವ ಮಹಿಳೆಯರು ಪಪ್ಪಾಯಿ ಸೇವನೆಯನ್ನು ತಪ್ಪಿಸಬೇಕು.

ಇದನ್ನೂ ಓದಿ-ಕಂತೆ ಕಂತೆಯಾಗಿ ಕೂದಲುದುರುತ್ತಿವೆಯಾ? ಮನೆಯಲ್ಲೇ ತಯಾರಿಸಿ ಈ ಮ್ಯಾಜಿಕಲ್ ಎಣ್ಣೆ!

ಮೂತ್ರಪಿಂಡದ ಕಲ್ಲುಗಳು
ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಯಾವುದೇ ವ್ಯಕ್ತಿಯೂ ಸಹ ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದರ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕಿಡ್ನಿಯಲ್ಲಿರುವ ಕಲ್ಲಿನ ಗಾತ್ರವನ್ನು ಹೆಚ್ಚಿಸಬಹುದು.

ಇದನ್ನೂ ಓದಿ-ದೇವಾಧಿದೇವ ಮಹಾದೇವನಿಗೆ ಇಷ್ಟವಾಗುವ ಈ ಎಲೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೂ ಒಂದು ವರದಾನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News