ಬೆಂಗಳೂರು : ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ದೇಹದಲ್ಲಿ ರಕ್ತ ಸರಿಯಾದ ಪ್ರಮಾಣದಲ್ಲಿ ಇರುವುದು ಮುಖ್ಯ.  ದೇಹದಲ್ಲಿ ರಕ್ತದ ಕೊರತೆ ಉಂಟಾದರೆ ಅದನ್ನು ರಕ್ತಹೀನತೆ ಎನ್ನುತ್ತಾರೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದರೆ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸಬೇಕು. ಈ ಆಹಾರಗಳು ದೇಹದಲ್ಲಿ ಹೊಮೊಗ್ಲೋಬಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತವೆ. ಅಲ್ಲದೆ, ರಕ್ತಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು, ಕೆಲವೊಂದು ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಈ ತರಕಾರಿಗಳ ಸೇವನೆಯಿಂದ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.  


COMMERCIAL BREAK
SCROLL TO CONTINUE READING

ರಕ್ತಹೀನತೆ ನಿವಾರಣೆಗೆ ಸಹಾಯ ಮಾಡುವ ತರಕಾರಿಗಳು ಯಾವುವು ? : 
ಬೀಟ್ರೂಟ್ :
ಬೀಟ್ರೂಟ್ ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ  ತರಕಾರಿಯಾಗಿದೆ. ಇದು ನಮ್ಮ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಿಮೊಗ್ಲೋಬಿನ್ ಮಟ್ಟ ಹೆಚ್ಚಾದಂತೆ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಬೀಟ್ ರೂಟ್ ಅನ್ನು ಹಸಿಯಾಗಿಯೇ ತಿನ್ನಬಹುದು.  ಅಥವಾ ಇದನ್ನು ಪಲ್ಯ, ಸಾಂಬಾರ್, ಪಚಡಿ, ಚಟ್ನಿ ಮಾಡಿಕೊಂಡು ಕೂಡಾ ತಿನ್ನಬಹುದು. ತಿನ್ನುವುದಕ್ಕೆ ರುಚಿಯಾಗಿರುವ ಈ ತರಕಾರಿ ಅನಿಮಿಯಾ ರೋಗಿಗಳಿಗೆ ಬಹಳ ಸಹಾಯಕ. 


ಇದನ್ನೂ ಓದಿ : ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು ! ಇದಕ್ಕಾಗಿಯೇ ಈ ಆಹಾರಗಳ ಸೇವನೆ ಕಡ್ಡಾಯ .!


ಆಲೂಗಡ್ಡೆ :
ದೇಹದಲ್ಲಿ ರಕ್ತದ ಕೊರತೆಯಿದ್ದರೆ, ನೀವು ಸೇವಿಸಲೇಬೇಕಾದ ಇನ್ನೊಂದು ತರಕಾರಿ ಎಂದರೆ ಆಲೂಗಡ್ಡೆ. ಆಲೂಗಡ್ಡೆಯಲ್ಲಿಯೂ ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ದೇಹದ ರಕ್ತಹೀನತೆಯ ಸಮಸ್ಯಯನ್ನು ನಿವಾರಿಸುತ್ತದೆ. ಇದಲ್ಲದೆ, ಆಲೂಗಡ್ಡೆ ತಿನ್ನುವುದರಿಂದ ದೇಹಕ್ಕೆ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನೆನಪಿರಲಿ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿದು, ಹುರಿದು ಸೇವಿಸಬೇಡಿ. ಈ ರೀತಿಯಲ್ಲಿ ಆಲೂಗಡ್ಡೆಯನ್ನು ಸೇವಿಸಿದರೆ ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿ ಉಂಟುಮಾಡಬಹುದು.


ಪಾಲಕ್ ಸೊಪ್ಪು :
 ಸೊಪ್ಪು ಪಲ್ಯ, ಸೊಪ್ಪು ಸಾಂಬಾರ್, ಮಸೊಪ್ಪು  ಈ ಎಲ್ಲಾ ಅಡುಗೆಗಳಲ್ಲಿ ಪಾಲಕ್ ಸೊಪ್ಪನ್ನು ಬಳಸಲಾಗುತ್ತದೆ. ಪಾಲಕ್ ಸೊಪ್ಪು ಹಿಮೋಗ್ಲೋಬಿನ್ ಮತ್ತ ಹೆಚ್ಚಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ಪ್ರತಿ 100 ಗ್ರಾಂ ಪಾಲಕ್ ಸೊಪ್ಪಿನಲ್ಲಿ ಸುಮಾರು 4 ಗ್ರಾಂ  ಐರನ್ ಅಂಶ ಇರುತ್ತದೆ. ಇದೇ ಕಾರಣಕ್ಕಾಗಿ ಚಳಿಗಾಲದಲ್ಲಿ ಪಾಲಕ್ ಸೊಪ್ಪು ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. 


ಇದನ್ನೂ ಓದಿ : Jaggery Benefits : ಚಳಿಗಾಲದಲ್ಲಿ ಹೆಚ್ಚು ಸೇವಿಸಿ ಬೆಲ್ಲ, ಆರೋಗ್ಯಕ್ಕಿದೆ ಇದು ಈ ಪ್ರಯೋಜನಗಳು 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.