ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು ! ಇದಕ್ಕಾಗಿಯೇ ಈ ಆಹಾರಗಳ ಸೇವನೆ ಕಡ್ಡಾಯ .!

Heart Attack risk in winter : ಚಳಿಗಾಲದಲ್ಲಿ ರಕ್ತನಾಳಗಳಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ. ಈ ಕಾರಣದಿಂದ ಚಳಿಗಾಲದಲ್ಲಿ ಹೃದ್ರೋಗದ ಪಾಯ ಕಾಡುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.  

Written by - Ranjitha R K | Last Updated : Nov 23, 2022, 12:16 PM IST
  • ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಕೆಲವೊಂದು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ
  • ಚಳಿಗಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಅಧಿಕವಾಗಿರುತ್ತದೆ.
  • ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರ ಪದಾರ್ಥ ಸೇವಿಸಬೇಕು
ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು ! ಇದಕ್ಕಾಗಿಯೇ  ಈ ಆಹಾರಗಳ ಸೇವನೆ ಕಡ್ಡಾಯ .!  title=
Heart attack risk in winter

Heart Attack risk in winter : ಚಳಿಗಾಲ ಆರಂಭವಾಗಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಕೆಲವೊಂದು ಕಾಯಿಲೆಗಳ ಅಪಾಯವೂ ಕಾಡುತ್ತದೆ. ಈ ಪೈಕಿ ಹುದಯಾಘಾತ ಕೂಡಾ ಒಂದು. ಆರೋಗ್ಯತಜ್ಞರ ಪ್ರಕಾರ, ಚಳಿಗಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಅಧಿಕವಾಗಿರುತ್ತದೆ. ಇದಕ್ಕೆ ಕಾರಣವೂ ಇದೆ. ಚಳಿಗಾಲದಲ್ಲಿ ರಕ್ತನಾಳಗಳಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ. ಈ ಕಾರಣದಿಂದ ಚಳಿಗಾಲದಲ್ಲಿ ಹೃದ್ರೋಗದ ಅಪಾಯ ಕಾಡುತ್ತದೆ. ಈ ಕಾರಣಕ್ಕಾಗಿಯೇ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಈ ಆಹಾರಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಚಿಯಾ ಸೀಡ್ : 
ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಹೇರಳವಾಗಿ ಕಂಡುಬರುತ್ತವೆ. ಚಿಯಾ ಬೀಜಗಳನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ದೇಹವನ್ನು ಒಳಗಿನಿಂದ ಬೆಚ್ಚಗಿಡುವುದು ಸಾಧ್ಯವಾಗುತ್ತದೆ. ಮಾತ್ರವಲ್ಲ, ಇದು ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಿದ್ದರೆ ಚಿಯಾ ಸೀಡ್ ಅನ್ನು ಸೇವಿಸುವುದು ಹೇಗೆ? ಚಿಯಾ ಬೀಜಗಳನ್ನು ಸೇವಿಸುವುದಕ್ಕೆ ಮೊದಲು ಅದನ್ನು ಹುರಿದು ಪುಡಿ ಮಾಡಿಕೊಳ್ಳಬೇಕು.   ಈ ರೀತಿ ಮಾಡಿಟ್ಟುಕೊಂಡ ಪುಡಿಯನ್ನು ಸಲಾಡ್,  ಪಲ್ಯಗಳಲ್ಲಿ ಬಳಸಬಹುದು.  

ಇದನ್ನೂ ಓದಿ : Lemon Water : ನಿಂಬೆ ನೀರು ಸೇವಿಸಿದರೆ ಆರೋಗ್ಯಕ್ಕಿವೆ ಅದ್ಭುತ ಪ್ರಯೋಜನಗಳು

ಸೋಯಾಬೀನ್ :
ಸೋಯಾಬೀನ್ ಅನ್ನು ಪ್ರೋಟೀನ್ ನ ಉತ್ತಮ ಮೂಲ ಎಂದು ಹೇಳಲಾಗುತ್ತದೆ. ಸೋಯಾಬೀನ್‌ನಲ್ಲಿ ಐಸೊಫ್ಲಾವೊನ್‌  ಕಂಡು ಬರುತ್ತವೆ. ಇದು ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಸೋಯಾಬೀನ್ ತಿನ್ನುವುದರಿಂದ ಲಿಪಿಡ್ ಪ್ರೊಫೈಲ್ ನಲ್ಲಿ ಕೂಡಾ ಸುಧಾರಣೆ ಕಂಡು ಬರುತ್ತದೆ. ಇದೆ ಕಾರಣಕ್ಕೆ ಬಾಡಿ ಬಿಲ್ಡಿಂಗ್ ಮಾಡುವವರಿಗೆ ಸೋಯಾಬಿನ್ ತಿನ್ನುವಂತೆ ಸಲಹೆ ನೀಡಲಾಗುತ್ತದೆ. 

ವಾಲ್‌ನಟ್ಸ್ :
ಡ್ರೈ ಫ್ರುಟ್ಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಡ್ರೈ ಫ್ರುಟ್ಸ್ ಪೈಕಿ ವಾಲ್‌ನಟ್ಸ್ ನಲ್ಲಿ ಒಮೆಗಾ-3 ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಹೇರಳವಾಗಿರುತ್ತವೆ. ಈ ಕಾರಣದಿಂದಾಗಿ ವಾಲ್ನಟ್ಸ್  ಅನ್ನು ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯಕ್ಕೆ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದು ರಕ್ತನಾಳಗಳಲ್ಲಿರುವ ಬ್ಲಾಕೇಜ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಾಲ್ ನಟ್ಸ್ ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. 

ಇದನ್ನೂ ಓದಿ : Home Remedy: ಹಲ್ಲು ನೋವು ಅಷ್ಟೇ ಅಲ್ಲ, ಈ ಕಾಯಿಲೆಗಳನ್ನು ಕೂಡ ನಿವಾರಿಸುವ ಸಾಮರ್ಥ್ಯ ಪಟಕಕ್ಕಿದೆ

 ( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr

Trending News