ನವದೆಹಲಿ: Benefits of Argan Oil - ಅರ್ಗಾನ್ ಎಣ್ಣೆಯು (Argan Oil) ನಿಮ್ಮ ಚರ್ಮಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರಪಂಚದ ಅತ್ಯಂತ ದುಬಾರಿ ಎಣ್ಣೆಗಳಲ್ಲಿ ಒಂದಾದ ಅರ್ಗಾನ್ ಎಣ್ಣೆಯು ಎಲ್ಲಾ ಚರ್ಮದ (Skin Problems) ಪ್ರಕಾರಗಳಿಗೆ ಸೂಕ್ತವಾಗಿದೆ ಮತ್ತು ಕೂದಲುಗಳಿಗೆ (Hair Care) ಪೋಷಣೆಯನ್ನು ನೀಡುತ್ತದೆ. ಅರ್ಗಾನ್ ಎಣ್ಣೆಯಲ್ಲಿ ವಿಟಮಿನ್ ಎ, ವಿಟಮಿನ್ ಇ, ಆಂಟಿಆಕ್ಸಿಡೆಂಟ್ ಮತ್ತು ಖನಿಜಗಳು ಸಮೃದ್ಧವಾಗಿವೆ. ನೀವು ಪ್ರತಿನಿತ್ಯ ಚರ್ಮದ (Acne Marks) ಮೇಲೆ ಅರ್ಗಾನ್ ಎಣ್ಣೆಯನ್ನು ಬಳಸಿದರೆ, ಅದು ಮುಖಕ್ಕೆ ಹೊಳಪನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಪಿಗ್ಮೆಂಟೆಶನ್ ತಡೆಯುತ್ತದೆ
ಮುಖದ ಮೇಲೆ ಕಲೆಗಳಿದ್ದರೆ, ಅರ್ಗಾನ್ ಎಣ್ಣೆಯನ್ನು ಬಳಸುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಮತ್ತು ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರ್ಗಾನ್ ಎಣ್ಣೆ ಸಮೃದ್ಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಪಿಗ್ಮೆನ್ಟೆಶನ್ ನಿಂದ ಕೂಡ ಇದು ಮುಕ್ತಿ ನೀಡುತ್ತದೆ.


ಇದನ್ನೂ ಓದಿ- Insulin:ಈ ಇನ್ಸುಲಿನ್ ಇಂಜೆಕ್ಷನ್ ಅನ್ನು ನೀವು ಫ್ರಿಡ್ಜ್ ನಲ್ಲಿ Insulin:ಈ ಇನ್ಸುಲಿನ್ ಇಂಜೆಕ್ಷನ್ ಅನ್ನು ನೀವು ಫ್ರಿಡ್ಜ್ ನಲ್ಲಿ ಇಡಬೇಕಾಗಿಲ್ಲ


ಏಜಿಂಗ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ
ಅರ್ಗಾನ್ ಎಣ್ಣೆಯು ಮುಖದ ಮೇಲಿನ ವಯಸ್ಸಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ, ಇ, ಒಮೆಗಾ ಕೊಬ್ಬಿನಾಮ್ಲಗಳು, ಸಪೋನಿನ್ ಗಳು ಮತ್ತು ಮೆಲಟೋನಿನ್ ಇರುತ್ತದೆ. ಅರ್ಗಾನ್ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಮೇಲೆ ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Ginger Home Remedies : ಈ ಶೀತ ಸಮಸ್ಯೆಗಳಿಗೆ ರಾಮಬಾಣ 'ಹಸಿ ಶುಂಠಿ' : ಬಳಸುವುದು ಹೇಗೆ? ಎಂದು ಇಲ್ಲಿ ತಿಳಿಯಿರಿ


ಚರ್ಮವನ್ನು ಹೈಡ್ರೇಟ್ ಆಗಿ ಇಡುತ್ತದೆ
ಅರ್ಗಾನ್ ಎಣ್ಣೆ ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಮೂಲಕ ಸುಲಭವಾಗಿ ಹೀರಲ್ಪಡುತ್ತದೆ, ಇದು ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ಮಲಗುವ ಸಮಯದಲ್ಲಿ ನಿಮ್ಮ ಮುಖವನ್ನು ತೊಳೆದ ನಂತರ, ಆರ್ಗನ್ ಎಣ್ಣೆಯಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿ.


ಇದನ್ನೂ ಓದಿ-Morning walk : ಬೆಳಗಿನ ವಾಕಿಂಗ್ ನಲ್ಲಿ ನೀವು ಈ ತಪ್ಪು ಮಾಡುತ್ತೀರಾ? ಹಾಗಿದ್ರೆ, ನಿಮಗೆ ಈ ಸಮಸ್ಯೆ ತಪ್ಪಿದಲ್ಲ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.