Hair Care Tips: ಕೂದಲಿಗೆ ಇಷ್ಟು ಹೊತ್ತು ಮಾತ್ರ ಮೆಹಂದಿ ಹಚ್ಚಿಕೊಳ್ಳಬೇಕು, ಇಲ್ಲವಾದರೆ ಈ ಸಮಸ್ಯೆ ಎದುರಾಗುತ್ತದೆ

ಕೆಲವರು ಕೂದಲಿಗೆ ಮೆಹಂದಿ ಹಚ್ಚಿ ಗಂಟೆ ಗಟ್ಟಲೆ ಹಾಗೆಯೇ ಬಿಡುತ್ತಾರೆ. ಇದರಿಂದ ಕೂದಲಿಗೆ ಹೆಚ್ಚು ಲಾಭವಾಗುತ್ತದೆ ಎನ್ನುವ ಭಾನವೆಯಿಂದ ಹಾಗೆ ಮಾಡುತ್ತಾರೆ.

Written by - Ranjitha R K | Last Updated : Sep 22, 2021, 04:22 PM IST
  • ಕೂದಲಿಗೆ ಮೆಹಂದಿ ಹಚ್ಚುವವರು ಅನೇಕರಿದ್ದಾರೆ
  • ಕೆಲವರಿಗೆ ಗಂಟೆಗಟ್ಟಲೆ ಮೆಹಂದಿಯನ್ನು ಹಾಗೇ ಬಿಡುವ ಅಭ್ಯಾಸವಿರುತ್ತದೆ
  • ಆದರೆ ಹೆಚ್ಚು ಹೊತ್ತು ಕೂದಲಿನಲ್ಲಿ ಮೆಹಂದಿ ಬಿಡುವುದು ಕೂಡಾ ಒಳ್ಳೆಯದಲ್ಲ
Hair Care Tips: ಕೂದಲಿಗೆ ಇಷ್ಟು ಹೊತ್ತು ಮಾತ್ರ ಮೆಹಂದಿ ಹಚ್ಚಿಕೊಳ್ಳಬೇಕು, ಇಲ್ಲವಾದರೆ ಈ ಸಮಸ್ಯೆ ಎದುರಾಗುತ್ತದೆ title=
ಹೆಚ್ಚು ಹೊತ್ತು ಕೂದಲಿನಲ್ಲಿ ಮೆಹಂದಿ ಬಿಡುವುದು ಕೂಡಾ ಒಳ್ಳೆಯದಲ್ಲ (file photo)

ನವದೆಹಲಿ : ಅನೇಕ ಜನರು ತಮ್ಮ ಕೂದಲಿಗೆ ಗೋರಂಟಿ (Henna) ಅಥವಾ ಮೆಹಂದಿ ಹಚ್ಚಲು ಇಷ್ಟಪಡುತ್ತಾರೆ. ಕೆಲವರು ಇದನ್ನು ಕೂದಲಿಗೆ ಕಂಡೀಷನರ್ ಆಗಿ ಬಳಸಿದರೆ, ಕೆಲವರು ಕೂದಲಿನ ಬಣ್ಣಕ್ಕಾಗಿ ತಲೆಗೆ ಗೋರಂಟಿ (Henna for hair) ಹಚ್ಚುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯ ಉತ್ಪನ್ನಗಳಿಗೆ ಹೋಲಿಸಿದರೆ, ಮೆಹಂದಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಏಕೆಂದರೆ, ಇದರಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದಿಲ್ಲ. ಹಾಗಂತ ಯಾವುದನ್ನೇ ಆಗಲಿ ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಅತಿಯಾದರೆ, ಅಮೃತವೂ ವಿಷ ಎನ್ನುತ್ತಾರಲ್ಲ ಹಾಗೆಯೇ, ಯಾವ ವಸ್ತುವನ್ನೇ ಆಗಲಿ, ಮಿತಿಯಾಗಿ ಬಳಸಬೇಕು. 

ಕೆಲವರು ಕೂದಲಿಗೆ ಮೆಹಂದಿ ಹಚ್ಚಿ ಗಂಟೆ ಗಟ್ಟಲೆ ಹಾಗೆಯೇ ಬಿಡುತ್ತಾರೆ. ಇದರಿಂದ ಕೂದಲಿಗೆ ಹೆಚ್ಚು ಲಾಭವಾಗುತ್ತದೆ (Benefits of henna) ಎನ್ನುವ ಭಾನವೆಯಿಂದ ಹಾಗೆ ಮಾಡುತ್ತಾರೆ. ಆದರೆ ಈ ಯೋಚನೆಯೇ ತಪ್ಪು. ಕೂದಲಿನಲ್ಲಿ ಮೆಹಂದಿಯನ್ನು ಹೆಚ್ಚು ಹೊತ್ತು ಬಿಟ್ಟರೆ, ಕೂದಲಿಗೆ ಹಾನಿಯಾಗುತ್ತದೆ. ಹಾಗಿದ್ದರೆ ಕೂದಲಿಗೆ ಮೆಹಂದಿ (Mehendi) ಹಚ್ಚಿದ  ಮೇಲೆ ಎಷ್ಟು ಸಮಯ ಬಿಟ್ಟು ಕೂದಲು ತೊಳೆಯಬೇಕು?  ಪ್ರಶ್ನೆಗೆ ಉತ್ತರ ಇಲ್ಲಿದೆ..

ಇದನ್ನೂ ಓದಿ :  Milk Bath: ಸ್ನಾನದ ನೀರಿಗೆ ಬೆರೆಸಿ 1 ಲೋಟ ಹಾಲು ಸಿಗಲಿದೆ ಈ ಎಲ್ಲಾ ಪ್ರಯೋಜನಗಳು

ಇಷ್ಟು ಹೊತ್ತು ಮಾತ್ರ ಕೂದಲಿನಲ್ಲಿ ಮೆಹಂದಿ ಬಿಡಬೇಕು : 
ಕೂದಲಿಗೆ ಮೆಹಂದಿ ಹಚ್ಚಿ 4-5 ಗಂಟೆಗಳ ಕಾಲ ಹಾಗೇ ಬಿಡುವ ಅಭ್ಯಾಸವಿದ್ದರೆ ಅದನ್ನು ಇಂದೇ ಬದಲಾಯಿಸಿಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ಡ್ರೈ (hair care) ಆಗುತ್ತದೆ. ಅಲ್ಲದೆ, ಕೂದಲಿನ ವಿನ್ಯಾಸ ಕೂಡಾ ಕೆಡುತ್ತದೆ. ತಜ್ಞರ ಪ್ರಕಾರ, ಕೂದಲಿಗೆ ಬಣ್ಣ ಬರಬೇಕೆಂದು ಮೆಹಂದಿ ಹಚ್ಚಿದರೆ  ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಹಾಗೇ ಬಿಡಬೇಡಿ. ಇನ್ನು ಕಂಡೀಷನಿಂಗ್ ಮಾಡಲು ಮೆಹಂದಿ ಹಚ್ಚಿದರೆ, 45 ನಿಮಿಷಗಳ ನಂತರ ಕೂದಲನ್ನು ತೊಳೆಯಬೇಕು.

ಇನ್ನು ಕೂದಲಿಗೆ ಮೆಹಂದಿ ಹಚ್ಚುವಾಗ ಅಥವಾ ಮೆಹಂದಿ ಹಚ್ಚಿದ ನಂತರ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಡಬೇಕು..
1.ಕೂದಲಿಗೆ ಗೋರಂಟಿ ಹಚ್ಚಿದ ನಂತರ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, ಕೂದಲನ್ನು ಒಣಗಿಸುವಾಗ, ಅದು ಸ್ವಲ್ಪ ತೇವವಾಗಿದ್ದಾಲೇ ಎಣ್ಣೆಯನ್ನು ಹಚ್ಚಿ. 
2.ಮೆಹಂದಿಯು ಕೂದಲನ್ನು ಡ್ರೈ (Dry hair) ಮಾಡುತ್ತದೆ. ಆದ್ದರಿಂದ, ಗೋರಂಟಿ ಹಚ್ಚುವ ಮೊದಲು ನಿಮಗಿಷ್ಟವಾಗುವ ಎಣ್ಣೆಯನ್ನು ಅದರಲ್ಲಿ ಬೆರೆಸಿ. 
3.ಇದಲ್ಲದೇ ಗೋರಂಟಿಗೆ ಮೊಸರು ಸೇರಿಸಿ ಕೂದಲಿನ ಕಂಡೀಷನಿಂಗ್ ಕೂಡ ಮಾಡಬಹುದು.
4.ಮಾರುಕಟ್ಟೆಯಿಂದ ಮೆಹಂದಿ ಪುಡಿಯನ್ನು ಖರೀದಿಸುವುದಾದರೆ, ಆ ಪೌಡರ್ ನಲ್ಲಿ ರಾಸಾಯನಿಕಗಳನ್ನು ಬೆರೆಸಿರುತ್ತಾರೆ ಎನ್ನುವ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. 

ಇದನ್ನೂ ಓದಿ:  Dark Elbow and Knees: ಮೊಣಕೈ, ಮೊಣಕಾಲಿನ ಕಪ್ಪು ಕಲೆ ನಿವಾರಣೆಗೆ ಇದನ್ನೊಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News