ಹಸು ಎಮ್ಮೆ ಅಲ್ಲ ಈ ಪ್ರಾಣಿ ಹಾಲಿನಲ್ಲಿದೆ ಹೆಚ್ಚು ಪೌಷ್ಟಿಕಾಂಶ ! ಸೌಂದರ್ಯ ಹೆಚ್ಚಿಸುವುದರ ಆಂಟಿ ಏಜಿಂಗ್ ಆಗಿಯೂ ಕೆಲಸ ಮಾಡುತ್ತದೆ !
ಬಾಬಾ ರಾಮ್ ದೇವ್ ಅವರ ಈ ಅನುಭವವನ್ನು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲೂ ಹಂಚಿಕೊಂಡಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ.
ಯೋಗ ಗುರು ಬಾಬಾ ರಾಮ್‌ದೇವ್ ಹಾಲಿಗೆ ಸಂಬಂಧಪಟ್ಟಂತೆ ಒಂದುಹೆಲಿಕೆ ನೀಡಿದ್ದಾರೆ. ಯಾವ ಪ್ರಾಣಿಯ ಹಾಲು ನಿಜಕ್ಕೂ ಪ್ರಯೋಜನಕಾರಿ ಎನ್ನುವುದನ್ನು ಅವರು ವಿವರಿಸಿದ್ದಾರೆ. ಇವರ ಪ್ರಕಾರ ಹಸು, ಎಮ್ಮೆ, ಮೇಕೆ ಹಾಲಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಹಾಲಿದೆ. ಬೇರೆ ಆಹಾರಗಳಿಗೆ ಹೋಲಿಸಿದರೆ ಈ ಪ್ರಾಣಿಯ ಹಾಲನ್ನು ಸೂಪರ್ ಫುಡ್ ಎಂದು ಬಣ್ಣಿಸಿದ್ದಾರೆ. ಪತಂಜಲಿ ಯೋಗಪೀಠದಲ್ಲಿ ಯೋಗಾಭ್ಯಾಸ ಮಾಡುವಾಗ ಬಾಬಾ ರಾಮ್‌ದೇವ್.
ಇಲ್ಲಿ ಬಾಬಾ ರಾಮ್ ದೇವ್ ಹೇಳಿರುವುದು ಕತ್ತೆ ಹಾಲಿನ ಬಗ್ಗೆ. ಕತ್ತೆ ಹಾಲಿನಲ್ಲಿ ಅದ್ಭುತ ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳಿವೆ ಎನ್ನುವುದನ್ನು ವಿವರಿಸಿದ್ದಾರೆ. ಬಾಬಾ ರಾಮ್ ದೇವ್ ಅವರ ಈ ಅನುಭವವನ್ನು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲೂ ಹಂಚಿಕೊಂಡಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ : ಮಧುಮೇಹಕ್ಕೆ ವರದಾನ ʼಈʼ ಬೀಜ.. ಬಿಸಿಲಲ್ಲಿ ಒಣಗಿಸಿ ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್! ಕೊಲೆಸ್ಟ್ರಾಲ್ ಕೂಡಾ ಕರಗಿಹೋಗುತ್ತೆ!!
ಕತ್ತೆ ಹಾಲು ಹೆಚ್ಚು ಪೌಷ್ಟಿಕ :
ಇತರ ಪ್ರಾಣಿಗಳ ಹಾಲಿಗಿಂತ ಕತ್ತೆ ಹಾಲು ಹೆಚ್ಚು ಪೌಷ್ಟಿಕವಾಗಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಲ್ಯಾಕ್ಟೋಫೆರಿನ್ ಎಂಬ ಅಂಶವು ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಅವರೊಂದಿಗಿದ್ದ ವೈದ್ಯರು ಇದನ್ನು ಖಚಿತಪಡಿಸಿದ್ದು, ಕತ್ತೆ ಹಾಲು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಇದು ಚರ್ಮವನ್ನು ಕಾಂತಿಯುತವಾಗಿಸುವುದು ಮಾತ್ರವಲ್ಲದೆ ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಕತ್ತೆ ಹಾಲಿನಲ್ಲಿದೆ ಸೌಂದರ್ಯದ ಗುಟ್ಟು :
ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಅವರ ಸೌಂದರ್ಯಕ್ಕಾಗಿ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಈ ಪ್ರಾಚೀನ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ ಎನ್ನುತ್ತಾರೆ ಅವರು. ಕತ್ತೆ ಹಾಲನ್ನು "ಸೂಪರ್ ಕಾಸ್ಮೆಟಿಕ್" ಎಂದು ಬಣ್ಣಿಸಿದ ಅವರು, ಇದು ಚರ್ಮಕ್ಕೆ ವರದಾನವಾಗಿದೆ ಎಂದಿದ್ದಾರೆ.
ಅಲರ್ಜಿ ಇರುವವರಿಗೆ ಸುರಕ್ಷಿತ :
ವೈದ್ಯರ ಪ್ರಕಾರ, ಹಸು ಅಥವಾ ಎಮ್ಮೆಯ ಹಾಲಿನ ಅಲರ್ಜಿ ಇರುವವರಿಗೂ ಕತ್ತೆ ಹಾಲು ಪ್ರಯೋಜನಕಾರಿ. ಇದು ಜೀರ್ಣಿಸಿಕೊಳ್ಳಲು ಸುಲಭವಲ್ಲ. ಆದರೆ, ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಉತ್ಕರ್ಷಣ ನಿರೋಧಕ ಮತ್ತು ಆಂಟಿ ಏಜಿಂಗ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ವಿಟಮಿನ್ ಮತ್ತು ಮಿನರಲ್‌ಗಳಿಂದ ಸಮೃದ್ಧ :
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕತ್ತೆ ಹಾಲು ವಿಟಮಿನ್ ಎ, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.