Diabetes: ಮಧುಮೇಹ.. ಈ ಸಮಸ್ಯೆ ಇತ್ತೀಚೆಗೆ ಅನೇಕರನ್ನು ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆ ಆವರಿಸುವುದರಿಂದ ನಿಮ್ಮ ದೇಹದಲ್ಲಿ ಹಲವಾರು ಬದಲಾವನೆಗಳಾಗುತ್ತವೆ, ಒಂದು ಆಹಾರ ತಿಂದರೆ ಹೆಚ್ಚು, ಒಂದು ತಿಂದರೆ ಕಡಿಮೆಯಂತಾಗಿ ಬಿಡುತ್ತದೆ. ನಮ್ಮ ದೇಹದಲ್ಲಿ ಶುಗರ್ ಹೆಚ್ಚಾಗುವ ಕಾರಣ ಇದು, ಇತರ ಭಾಗಗಳಿಗೂ ಅಪಾಯವನ್ನುಂಟು ಮಾಡುತ್ತದೆ. ಇದರಿಂದ ಕಿಡ್ನಿ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಎದುರಾಗಬಹದು.
ಶುಗರ್ ಅನ್ನು ನಾವು ಕಂಟ್ರೋಲ್ನಲ್ಲಿಡುವುದು ತುಂಬಾ ಮುಖ್ಯ, ಅದಕ್ಕೆ ನಾವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ. ನಾವು ಸರಿಯಾದ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ದಿನವಿಡೀ ಶುಗರ್ ಕಂಟ್ರೋಲ್ನಲ್ಲಿಡಬಹುದು. ಶುಗರ್ ಅನ್ನು ಕಂಟ್ರೋಲ್ನಲ್ಲಿಡಲು ಹಲವಾರು ಆಹಾರಗಳು ಸಹಾಯ ಮಾಡುತ್ತದೆ. ಅದರಲ್ಲಿ ಬೇವಿನ ಎಲೆ ಕೂಡ ಒಂದು, ಜನರು ಶುಗರ್ ಅನ್ನು ಕಂಟ್ರೋಲ್ನಲ್ಲಿಡಲು, ಹಲವಾರು ಔಷಧಿಗಳು ಹಾಗೂ ವಿಭಿನ್ನ ಆಹಾರಗಳ ಮೊರ ಹೋಗುತ್ತಾರೆ, ಆದರೆ ನಿಮ್ಮ ಹಿತ್ತಲಿನಲ್ಲಿ ಬೆಳೆಯುಬ ಬೇವಿನ ಎಲೆ ನಿಮ್ಮ ಶುಗರ್ ಅನ್ನು ಕಂಟ್ರೋಲ್ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.
ಮಧುಮೇಹದಿಂದ ಬಳಲುತ್ತಿರುವ ಜನರು ಔಷಧಿಗಳೊಂದಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ವಿವಿಧ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಸಕ್ಕರೆ ನಿಯಂತ್ರಣಕ್ಕೆ ಮೆಂತ್ಯ, ಹಾಗಲಕಾಯಿಯಂತಹ ಆಹಾರಗಳನ್ನು ಸೇವಿಸುತ್ತಾರೆ. ಮಧುಮೇಹಿಗಳಿಗೆ ಬೇವಿನ ಎಲೆ ಕಹಿ. ಈ ಎಲೆಗಳು ನೈಸರ್ಗಿಕವಾಗಿ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿವೆ, ಇದು ನಿಸ್ಸಂದೇಹವಾಗಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅವುಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದ್ದು, ಸೇವಿಸಿದಾಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೇವಿನ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಅನ್ನು ತಡೆಯುತ್ತದೆ. ರಕ್ತಕ್ಕೆ ಬಿಡುಗಡೆಯಾಗುವ ಗ್ಲೂಕೋಸ್ನ ವೇಗವೂ ಬಹಳ ಕಡಿಮೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬೇವಿನ ಎಲೆಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಆದ್ದರಿಂದ ದೇಹದಲ್ಲಿ ಗ್ಲೂಕೋಸ್ ಸಂಶ್ಲೇಷಣೆ ಸುಧಾರಿಸುತ್ತದೆ.
ಬೇವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಮಧುಮೇಹಿಗಳಲ್ಲಿ ಗಾಯಗಳು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೇವಿನ ಎಲೆಗಳು ಆರೋಗ್ಯವನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಬೇವಿನ ಎಲೆಗಳು ಮಧುಮೇಹ ರೋಗಿಗಳಲ್ಲಿ ಕಂಡುಬರುವ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.