ನವದೆಹಲಿ: Benefits of Jaggery - ಇದುವರೆಗೆ ನೀವು ಬೆಲ್ಲದ ಹಲವು ಲಾಭಗಳ ಕುರಿತು ಕೇಳಿರಬಹುದು. ಆದರೆ, ಬೆಲ್ಲದಿಂದ ತೂಕ ಕಡಿಮೆಯಾಗುತ್ತದೆ ಎಂಬುದನ್ನು ಎಂದಾದರೂ ಕೇಳಿದ್ದೀರಾ? ತಜ್ಞರು ಹೇಳುವ ಪ್ರಕಾರ ಬೆಲ್ಲದಲ್ಲಿಯೂ ಕೂಡ ಕ್ಯಾಲೋರಿಗಳಿರುತ್ತವೆ. ಆದರೆ, ಸಕ್ಕರೆಗೆ ಹೋಲಿಸಿದರೆ ತುಂಬಾ ಕಡಿಮೆ ಇರುತ್ತವೆ. ಇದಲ್ಲದೆ ಬೆಲ್ಲ ಹಲವು ಆರೋಗ್ಯಕರ ಲಾಭಗಳನ್ನು ಕೂಡ ಹೊಂದಿದೆ ಮತ್ತು ಅದರ ಲಾಭ ಕೂಡ ನಿಮಗೆ ಸಿಗುತ್ತದೆ. ಬೆಲ್ಲ ಆಂಟಿ ಆಕ್ಸಿಡೆಂಟ್ ಗಳ ಆಗರವಾಗಿದೆ. ಜೊತೆಗೆ ಇದೊಂದು ನೈಸರ್ಗಿಕ ಸ್ವೀಟ್ನರ ಕೂಡ ಆಗಿದೆ. ಇದರಿಂದ ತೂಕ ಇಳಿಕೆಗೆ ಸಹಾಯ ಸಿಗುತ್ತದೆ.


COMMERCIAL BREAK
SCROLL TO CONTINUE READING

ಡೈಜೆಸ್ಟಿವ್ ಸಿಸ್ಟಂಗಾಗಿ ಲಾಭಕಾರಿ
ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಬೆಲ್ಲದ (Jaggery)ಸೇವನೆ ಶರೀರದಲ್ಲಿ  ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೀವು ಊಟದ ನಂತರ ಸಿಹಿಯಾಗಿ ಏನನ್ನಾದರೂ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ,  ನೀವು ಸಕ್ಕರೆಯ ಹಂಬಲವನ್ನು ಹೋಗಲಾಡಿಸಲು ಸ್ವಲ್ಪ ಬೆಲ್ಲವನ್ನು ತಿನ್ನಬಹುದು.


ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುತ್ತದೆ (Benefits Of Jaggery)
ಬೆಲ್ಲವು ನಿಮ್ಮ ದೇಹದಿಂದ ಎಲ್ಲಾ ವಿಷಕಾರಿ ಅಥವಾ ಹಾನಿಕಾರಕ ಪದಾರ್ಥಗಳನ್ನು  ತೆಗೆದುಹಾಕುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದು ಡಿಟಾಕ್ಸ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಿಂದತ್ಯಾಜ್ಯ ಪದಾರ್ಥಗಳನ್ನು ಹೊರಹಾಕುತ್ತದೆ.


ಮೆಟಾಬಾಲಿಸಂಗೆ ಉತ್ತಮ (Metabolism)
ನಿಮ್ಮ ಮೆಟಾಬಾಲಿಕ್ ದರ ಹೆಚ್ಚಾದಷ್ಟೂ ವೇಗವಾಗಿ ನೀವು ತೂಕವನ್ನು ಕಳೆದುಕೊಳ್ಳಬಹುದು ಮತ್ತು ವೇಗವಾಗಿ ನೀವು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಬೆಲ್ಲದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಆದ್ದರಿಂದ ಇದು ಚಯಾಪಚಯವನ್ನು ಸುಧಾರಿಸುತ್ತದೆ.


ತೂಕ ಇಳಿಕೆಗೆ ಉತ್ತಮ (Weight Loss)
ಬೆಲ್ಲವು ಸತು ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳನ್ನು ಹೊಂದಿದ್ದು, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ. ಜೊತೆಗೆ ದೇಹದಲ್ಲಿ Water Retention ನಿವಾರಿಸುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ-Vinegar Onion: ಈರುಳ್ಳಿಯನ್ನು ವಿನೆಗರ್ನಲ್ಲಿ ಅದ್ದಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ?


ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ
ಯಾವಾಗಲೂ ಬೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ, ಆಗ ಮಾತ್ರ ನೀವು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಲ್ಲವು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಹೊಂದಿದೆ ಎಂಬುದನ್ನು ಸಹ ನೆನಪಿನಲ್ಲಿಡಿ, ಆದ್ದರಿಂದ ಅದರ ಬಳಕೆ ಬಗ್ಗೆ ವಿಶೇಷ ಗಮನಹರಿಸಿ ನಿಮಗೆ ಮಧುಮೇಹ (Diabetes) ಇದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ಬೆಲ್ಲವನ್ನು ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ತಜ್ಞರ ಪ್ರಕಾರ, ಪ್ರತಿ ದಿನ ಎರಡು ಚಮಚಕ್ಕಿಂತ ಹೆಚ್ಚು ಬೆಲ್ಲವನ್ನು ಸೇವಿಸಬೇಡಿ.


ಇದನ್ನೂ ಓದಿ-Vitamin D Rich Foods: ಮೂಳೆಗಳನ್ನು ದುರ್ಬಲಗೊಳಿಸುತ್ತೆ ವಿಟಮಿನ್ ಡಿ ಕೊರತೆ, ಈ ಆಹಾರಗಳನ್ನು ಸೇವಿಸಿ ಪ್ರಯೋಜನ ಪಡೆಯಿರಿ


(ಸೂಚನೆ - ಇಲ್ಲಿ ನೀಡಲಾಗಿರುವ ಮಾಹಿತಿ ಮನೆ ಮದ್ದು ಹಾಗೂ ಸಾಮಾನ್ಯ ನಂಬಿಕೆಗಳನ್ನು ಆಧರಿಸಿವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Green Vegetables Juice: ಆರೋಗ್ಯಕ್ಕೆ ವರದಾನವಾದ ಈ ಗ್ರೀನ್ ಜ್ಯೂಸ್ ಜೊತೆ ದಿನ ಆರಂಭಿಸಿ, ಪಡೆಯಿರಿ ಹಲವು ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.