ನವದೆಹಲಿ: Vitamin D Deficiency Symptoms - ಕರೋನಾ ಮಹಾಮಾರಿ ಆರಂಭಗೊಂಡ ಬಳಿಕ ಹೆಚ್ಚಿನ ಜನರು ತಮ್ಮ ಮನೆಯಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಇದು ಅವರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ.  8 ರಿಂದ 9 ಗಂಟೆಗಳ ಕಾಲ ಮನೆಯಿಂದ ಕೆಲಸ ಮಾಡುವುದರಿಂದ ಹೆಚ್ಚಿನ ಜನರು ಹೊರಗೆ ಬರುತ್ತಿಲ್ಲ. ಈ ಕಾರಣದಿಂದಾಗಿ ಅವರ ದೇಹವು ಸೂರ್ಯನ ಬೆಳಕನ್ನು ಪಡೆಯುತ್ತಿಲ್ಲ. ದೇಹಕ್ಕೆ ಸೂರ್ಯನ ಬೆಳಕಿನ ಕೊರತೆಯಿಂದಾಗಿ, ವಿಟಮಿನ್ ಡಿ ಕೊರತೆಯ ಸಮಸ್ಯೆ ಎದುರಾಗುತ್ತಿದೆ.


COMMERCIAL BREAK
SCROLL TO CONTINUE READING

ನಮ್ಮ ಮೂಳೆಗಳ ಆರೋಗ್ಯಕ್ಕೆ (Health Tips) ಮತ್ತು ರೋಗನಿರೋಧಕ ಶಕ್ತಿ ವೃದ್ಧಿಗೆ ವಿಟಮಿನ್ ಡಿ ಅತ್ಯಗತ್ಯ. ನಮ್ಮ ಚರ್ಮವು ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಉತ್ಪಾದಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ  ಕೊರತೆಯಿದೆಯೇ ಎಂದು ತಿಳಿಯಲು, ನೀವು ಕೆಲವು ಲಕ್ಷಣಗಳನ್ನು ಗಮನಿಸಬೇಕು. ಇದಲ್ಲದೆ, ನಮ್ಮ ದೇಹದಲ್ಲಿ ವಿಟಮಿನ್ ಡಿ ಯ ಸರಿಯಾದ ಪ್ರಮಾಣವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


ವಿಟಮಿನ್ D ಕೊರತೆಯ ಲಕ್ಷಣಗಳು
>> ವಿಟಮಿನ್ D ಕೊರತೆಯಿಂದ ಮಕ್ಕಳಲ್ಲಿ ರಿಕ್ಕೆಟ್ಸ್ ಕಾಯಿಲೆ ಬರುತ್ತದೆ. ಸ್ನಾಯುಗಳು ಬಲಹೀನವಾಗುತ್ತವೆ. ಇದರಂದ ಮೂಳೆಗಳಲ್ಲಿ ನೋವು ಹಾಗೂ ಕೀಲುಗಳಲ್ಲಿ ಡಿಫಾರ್ಮಿಟಿ ಸಮಸ್ಯೆ ಎದುರಾಗುತ್ತದೆ.


>> ಸಾಮಾನ್ಯವಾಗಿ ವ್ಯಕ್ತಿಗಳಲ್ಲಿ ವಿಟಮಿನ್ D ಕೊರತೆ ಬೇಗನೆ ಕಾಣಿಸುವುದಿಲ್ಲ. ಆಯಾಸ, ಕೂದಲುದುರುವಿಕೆ ಹಾಗೂ ಮಸಲ್ ಕ್ರ್ಯಾಂಪ್ಸ್ ಗಳಂತ ಕೆಲ ಲಕ್ಷಣಗಳು ವಿಟಮಿನ್ D ಕೊರತೆಯ ಕೆಲ ಸಂಕೇತಗಳಾಗಿವೆ.


ವಿಟಮಿನ್ D ಸಪ್ಲಿಮೆಂಟ್  (Benefits Of Vitamin D)
ನಿಮಗೂ ಒಂದು ವೇಳೆ ನಿಮ್ಮ ಶರೀರದಲ್ಲಿ ಈ ಮೇಲಿನ ಬದಲಾವಣೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ, ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ ಎಂಬುದನ್ನು ನೆನಪಿನಲ್ಲಿಡಿ. ನಿಮಗೆ ವಿಟಮಿನ್ ಡಿ ಕೊರತೆಯಿರಲಿ ಅಥವಾ ಇಲ್ಲದಿರಲಿ, ಇದು ರಕ್ತ ಪರೀಕ್ಷೆಯ ಮೂಲಕ ಬಹಿರಂಗಗೊಳ್ಳುತ್ತದೆ ಮತ್ತು ನಂತರ ನೀವು ವೈದ್ಯರ ಸಲಹೆಯ ಮೇರೆಗೆ ವಿಟಮಿನ್ ಡಿ ಪೂರಕವನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ-How To Increase Height: ಈ ಅಭ್ಯಾಸಗಳನ್ನು ಹೊಂದಿರುವ ಮಕ್ಕಳ ಹೈಟ್ ವೇಗವಾಗಿ ಹೆಚ್ಚಾಗುತ್ತೆ


ಈ ಮನೆಮದ್ದುಗಳನ್ನು ಕೂಡ ಟ್ರೈ ಮಾಡಬಹುದು
ಕೆಲ ಮನೆಮದ್ದುಗಳನ್ನು ಬಳಸಿಯೂ ಕೂಡ ನೀವು ವಿಟಮಿನ್ D ಕೊರತೆಯನ್ನು ನೀಗಿಸಬಹುದು.


>>  ವಿಟಮಿನ್ D ನಿಂದ ಸಮೃದ್ಧವಾದ ಆಹಾರಗಳಾದ ಚೀಸ್, ಮೊಟ್ಟೆಯ ಹಳದಿ ಭಾಗವನ್ನು ನೀವು ಆಹಾರದಲ್ಲಿ ಶಾಮೀಲುಗೊಳಿಸಿ. ಜೊತೆಗೆ ನಿಯಮಿತವಾಗಿ ಹಾಲು ಸೇವಿಸಿ.


>> ನಿಮ್ಮ ಮನೆಯ ಬಾಲ್ಕನಿಯಲ್ಲಿ ಬಿಸಿಲು (Benefits Of Sunlight) ಬರುವ ಜಾಗದಲ್ಲಿ ನಿಂತು ಶರೀರಕ್ಕೆ ಬಿಸಿಲು ತಾಕಿಸಿ. 


>> ವಾರದ ಮೂರು ದಿನ ಕನಿಷ್ಠ ಅಂದರೆ 15 ರಿಂದ 20 ನಿಮಿಷ ನಿಯಮಿತವಾಗಿ ಬಿಸಿಲಿನಲ್ಲಿ ನಿಂತುಕೊಳ್ಳಿ.


ಇದನ್ನೂ ಓದಿ-ಹೆಚ್ಚು ಹೊತ್ತು ಸ್ನಾನ ಮಾಡುವುದು ಕೂಡಾ ಅಪಾಯಕಾರಿ ಎನ್ನುವುದು ತಿಳಿದಿದೆಯೇ?


(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆ ಉಪಾಯ ಹಾಗೂ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ.  ಈ ಸಲಹೆಗಳನ್ನು ಅನುಸರಿಸುವ ಮಾಡು ವೈದ್ಯರನ್ನು ಸಂಪರ್ಕಿಸಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Protein Deficiency Symptoms: ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ ಗೋಚರಿಸಲಿದೆ ಈ ಲಕ್ಷಣಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ