ಬೆಂಗಳೂರು : ನೈಸರ್ಗಿಕವಾಗಿ ಸಿಗುವ ಸಂಜೀವಿನಿಯೆಂದರೆ ಅದು ಎಳ ನೀರು. ಎಳನೀರು ಕುಡಿಯುವುದರ ಉಪಯೋಗ ಹಲವಾರು. ಇದು ಪೋಷಕಾಂಶಗಳ ಆಗರ. ಹಾಗಾಗಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಳನೀರು ಕುಡಿಯುವುದರಿಂದ ಅನೇಕ ಆರಿಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. 


COMMERCIAL BREAK
SCROLL TO CONTINUE READING

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯ : 
ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ದೇಹದಲ್ಲಿನ ರಕ್ತದ ಹರಿವನ್ನು ಅಮತೊಳನದಲ್ಲಿ ಇಡಲು ಸಹಾಯ ಮಾಡುತ್ತದೆ.  ಇದು ನೈಸರ್ಗಿಕ ಎಲೆಕ್ಟ್ರೋಲೈಟ್‌ ಎಂದರೆ ತಪ್ಪಾಗಲಾರದು. ಇದು ನಮ್ಮ ದೇಹದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಅಗತ್ಯ ಖನಿಜಗಳನ್ನು ಇದು ಹೊಂದಿರುತ್ತದೆ. ಇದು ಬೆವರಿನ ಮೂಲಕ ದೇಹದಿಂದ ಹೊರ ಹೋದ  ಎಲೆಕ್ಟ್ರೋಲೈಟ್‌ ಗಳನ್ನು  ಮತ್ತೆ ದೇಹಕ್ಕೆ ನೀಡುವಲ್ಲಿ ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಚಳಿಗಾಲದಲ್ಲಿ ಹೀಟರ್‌ ಬಳಸುತ್ತಿದ್ದರೆ ಎಚ್ಚರ..! ಈ ಸಮಸ್ಯೆಗಳಿಗೆ ಎಡ ಮಾಡಿಕೊಟ್ಟಂತಾಗುತ್ತದೆ..


ಎಳನೀರಿಗೆ ದೇಹದಲ್ಲಿರುವ ಜೀವಕೋಶಗಳನ್ನು ರಕ್ಷಿಸುವ ಶಕ್ತಿ ಇರುವುದರಿಂದ ದೇಹದ ಅಂಗಾಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ.ದೀರ್ಘಕಾಲದ ಕಾಯಿಲೆಗಳಾದ ಕ್ಯಾನ್ಸರ್, ಆಲ್ಝೈಮರ್ಸ್, ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ತಪ್ಪಿಸಲು ಎಳನೀರು ಸಹಾಯ ಮಾಡುತ್ತದೆ. ಇದು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  


ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ :
ಎಳನೀರಿನಲ್ಲಿ ಫೈಬರ್ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ.ಯಾವಾಗ ನಾವು ಅತಿಯಾಗಿ ಆಹಾರ ಸೇವಿಸಿದ್ದೇವೆ ಎಂದು ಅನ್ನಿಸುತ್ತದೆಯೋ ಅಥವಾ ಹೊಟ್ಟೆ ಭಾರ ಎಂದೆನಿಸುತ್ತದೆಯೋ ಆಗ ಒಂದು ಲೋಟ ಎಳನೀರು ಕುಡಿಯಬೇಕು. ಇದು ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಮಾಡಲು ಸಹಾಯ ಮಾಡುತ್ತದೆ. ಪದೇ ಪದೇ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸಹಕಾರಿ.


ಇದನ್ನೂ ಓದಿ : ಹಲ್ಲಿನಲ್ಲಿ ಅಂಟಿಕೊಂಡಿರುವ ಹಳದಿ ಕಲೆಗಳನ್ನು ತೆಗೆದು ಹಾಕುತ್ತವೆ ಈ ವಸ್ತುಗಳು


ಕಡಿಮೆ ಕ್ಯಾಲೋರಿಗಳು: 
ಇತರ ಪಾನೀಯಗಳಿಗೆ ಹೋಲಿಸಿದರೆ, ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಸೋಡಾ ಅಥವಾ ಇತರ ಪಾನೀಯಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಪಾಯ ತಂದೊಡ್ಡುತ್ತದೆ. ಆದರೆ, ಎಳ ನೀರು ಸೇವಿಸಿದರೆ ಅ ಭಯ ಇರುವುದಿಲ್ಲ. ಎಳನೀರು ಬಾಯಾರಿಕೆಯನ್ನು ನೀಗಿಸಲು ಮತ್ತು ದೇಹದ ಸಕ್ಕರೆ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. 


ಮೂಳೆಯನ್ನು ಬಲಪಡಿಸುತ್ತದೆ : 
ಎಳನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಧಿಕವಾಗಿರುತ್ತದೆ.   ಇವೆರಡೂ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ. ಎಳನೀರು ಕುಡಿದರೆ ಮೂಳೆ ಸವೆಯುವ ಸಮಸ್ಯೆ ಕೂಡಾ ತಪ್ಪುತ್ತದೆ.


ಇದನ್ನೂ ಓದಿ : ಕಣ್ಣಿನ ಆರೋಗ್ಯ ಕಾಪಾಡುತ್ತವೆ ಈ 8 ಪೌಷ್ಟಿಕಾಂಶ-ಭರಿತ ಆಹಾರಗಳು


ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :
ಎಳನೀರಿನಲ್ಲಿರುವ ಪೊಟ್ಯಾಸಿಯಮ್ ನಮ್ಮ ದೇಹದಲ್ಲಿ ಸೋಡಿಯಂನ ನಕಾರಾತ್ಮಕ ಪರಿಣಾಮಗಳ ವಿರುದ್ಧ ಹೋರಾಡುವ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಕಡಿಮೆ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎರಡನ್ನೂ ನಿವಾರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.