ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಮಂದಿಯ ಸಾಮಾನ್ಯ ಸಮಸ್ಯೆ ಆಗಿದೆ. ದೇಹದಲ್ಲಿ ಶೇಖರಗೊಳ್ಳುವ ಅನಾರೋಗ್ಯಕರ ಕೊಬ್ಬು ಭವಿಷ್ಯದಲ್ಲಿ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡಬಹುದು. ಇದನ್ನು ತಪ್ಪಿಸಲು ತೂಕ ಇಳಿಕೆ ಬಹಳ ಮುಖ್ಯ. ತೂಕ ಇಳಿಕೆಗಾಗಿ ಜನರು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ನೀವೂ ಕೂಡ ತೂಕ ಇಳಿಸಲು ಬಯಸಿದರೆ, ಈ ಬೇಸಿಗೆಯಲ್ಲಿ ಏಳು ಬಗೆಯ ಚಮತ್ಕಾರಿ ಪಾನೀಯಗಳು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆ ಪಾನೀಯಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ಬೇಸಿಗೆಯಲ್ಲಿ ಏಳು ಬಗೆಯ ಅದ್ಭುತ ಪಾನೀಯಗಳ ಸಹಾಯದಿಂದ ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಲು ಟ್ರೈ ಮಾಡಿ.


* ಜೀರಿಗೆ ನೀರು:
ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಜೀರಿಗೆ ನೀರನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು. ಅದರಲ್ಲೂ ಮುಖ್ಯವಾಗಿ, ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬು ಕೇವಲ ಒಂದೇ ವಾರದಲ್ಲಿ ಕಡಿಮೆ ಆಗುವುದನ್ನು ನೀವು ಗಮನಿಸಬಹುದು.  ಜೀರಿಗೆ ನೀರು ಉತ್ತಮ ಜೀರ್ಣಕಾರಿಯಾಗಿದ್ದು ಅದು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ಮತ್ತೆ ಮತ್ತೆ ತಿನ್ನುವ ಬಯಕೆಯನ್ನು ದೂರ ಮಾಡುತ್ತದೆ.


ಇದನ್ನೂ ಓದಿ-  Anti-Hairfall Oil: ಈ ಎಣ್ಣೆ ಹಚ್ಚಿ ಕೇವಲ 5 ನಿಮಿಷ ಮಸಾಜ್ ಮಾಡಿ, ಕೂದಲುದುರುವಿಕೆ ತಕ್ಷಣ ನಿಂತ್ಹೋಗುತ್ತದೆ!


* ಗ್ರೀನ್ ಟೀ:
ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿರುವ ಗ್ರೀನ್ ಟೀ ಅನ್ನು ತೂಕ ನಷ್ಟಕ್ಕೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನಿತ್ಯ ಒಂದೆರಡು ಗ್ರೀನ್ ಟೀ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


* ಸೌತೆಕಾಯಿ:
ಬೇಸಿಗೆಯಲ್ಲಿ ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದೇ ಇದೆ. ಇದೊಂದು ರಿಫ್ರೆಶ್ ಪಾನೀಯವಾಗಿದ್ದು ನಿತ್ಯ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಬಹುದು.


* ಮಜ್ಜಿಗೆ:
ಮಜ್ಜಿಗೆ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ನಿಮಗೆ ತಿಳಿದೇ ಇದೆ. ಮಜ್ಜಿಗೆ ಒಂದು ಆರೋಗ್ಯಕರ ಪಾನೀಯವಾಗಿದ್ದು  ಇದು ಕರುಳಿನ ಸೂಕ್ಷ್ಮಜೀವಿಯನ್ನು ಸುಧಾರಿಸುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಮಜ್ಜಿಗೆಯಲ್ಲಿ ಚಿಟಿಕೆ ಹಿಂಗ್ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಕುಡಿಯುವುದು ತೂಕ ಇಳಿಕೆಗೆ ಒಳ್ಳೆಯದು.


ಇದನ್ನೂ ಓದಿ- Cholesterol ಕಡಿಮೆ ಇದ್ದರೂ ಅಪಾಯಕಾರಿ, ಮೆದುಳಿನ ಮೇಲೆ ಕೆಟ್ಟ ಪರಿಣಾಮದ ಜೊತೆಗೆ ಕ್ಯಾನ್ಸರ್ ಅಪಾಯ ಕೂಡ ಹೆಚ್ಚಾಗುತ್ತದೆ!


* ಆಪಲ್ ಅಂಡ್ ದಾಲ್ಚಿನ್ನಿ ವಾಟರ್:
ನಿತ್ಯ ಒಂದು ಆಪಲ್ ಸೇವನೆಯಿಂದ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ. ಆಪಲ್ ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ದಾಲ್ಚಿನ್ನಿ ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸುವ ಉತ್ತಮ ಮಸಾಲೆಯಾಗಿದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ತಯಾರಿಸಿದ ಜ್ಯೂಸ್ ಸೇವನೆಯಿಂದ ಚಯಾಪಚಯ ಉತ್ತಮಗೊಳ್ಳುತ್ತದೆ. ಮಾತ್ರವಲ್ಲ ದೀರ್ಘ ಸಮಯದವರೆಗೆ ನಿಮ್ಮ ಹೊಟ್ಟೆ ತುಂಬಿದಂತೆ ಇರುವುದರಿಂದ ಇದೂ ಸಹ ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ.


* ಲೆಮನ್ ಜ್ಯೂಸ್:
ನಿಂಬೆಹಣ್ಣಿನಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ನಿತ್ಯ ಬೆಳಿಗ್ಗೆ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ತೂಕ ಇಳಿಕೆಗೆ ಸಹಾಯಕವಾಗಲಿದೆ.


* ಆರೆಂಜ್ ಜ್ಯೂಸ್:
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಕಿತ್ತಳೆ ಎಂದರೆ ಆರೆಂಜ್ ಕೂಡ ಉತ್ತಮ ಡಿಟಾಕ್ಸ್  ಆಗಿದ್ದು, ಸಕ್ಕರೆ ಬೆರಸದೆ ಕಿತ್ತಳೆ ಜ್ಯೂಸ್ ಕುಡಿಯುವುದರಿಂದಲೂ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.