Anti-Hairfall Oil: ಈ ಎಣ್ಣೆ ಹಚ್ಚಿ ಕೇವಲ 5 ನಿಮಿಷ ಮಸಾಜ್ ಮಾಡಿ, ಕೂದಲುದುರುವಿಕೆ ತಕ್ಷಣ ನಿಂತ್ಹೋಗುತ್ತದೆ!

Anti-Hairfall Tips: ಇಂದು ನಾವು ನಿಮಗಾಗಿ ಕೂದಲುದುರುವಿಕೆ ತಕ್ಷಣಕ್ಕೆ ನಿಂತು ಹೋಗುವಂತೆ ಮಾಡುವ ಒಂದು ತೈಲ ಮಿಶ್ರಣವನ್ನು ತಂದಿದ್ದೇವೆ. ಈ ಎಣ್ಣೆಯ ಕೇವಲ 5 ನಿಮಿಷಗಳ ಮಸಾಜ್ ಹೇರ್ ಫಾಲ್ ಗೆ ಗುಡ್ ಬೈ ಹೇಳಲಿದೆ. ದಾಸವಾಳದಲ್ಲಿ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಇದ್ದು, ಇದು ಕೂದಲಿಗೆ ಒಂದು ಸೂಪರ್ ಫುಡ್ ರೀತಿ ಕಾರ್ಯನಿರ್ವಹಿಸುತ್ತದೆ.  

Written by - Nitin Tabib | Last Updated : Mar 5, 2023, 04:58 PM IST
  • ದಾಸವಾಳದಲ್ಲಿ ಪ್ರೋಟೀನ್ ಹೇರಳ ಪ್ರಮಾಣದಲ್ಲಿರುತ್ತದೆ ಮತ್ತು
  • ಇದು ಕೂದಲಿಗೆ ಒಂದು ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ.
  • ದಾಸವಾಳದ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಸಂಯೋಜನೆಯು ನಿಮ್ಮ ಕೂದಲು ಉದುರುವಿಕೆಯ ಮೇಲೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.
Anti-Hairfall Oil: ಈ ಎಣ್ಣೆ ಹಚ್ಚಿ ಕೇವಲ 5 ನಿಮಿಷ ಮಸಾಜ್ ಮಾಡಿ, ಕೂದಲುದುರುವಿಕೆ ತಕ್ಷಣ ನಿಂತ್ಹೋಗುತ್ತದೆ! title=
ಕೂದಲು ಉದುರುವ ಸಮಸ್ಯೆಗೆ ಮನೆಮದ್ದು

Ayurveda Oil For Hair Fall: ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಆದರೆ ಇಂದಿನ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ಕೂದಲು ಉದುರುವಿಕೆಯ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರೊಂದಿಗೆ, ನಮ್ಮ ಕೂದಲು ಕ್ರಮೇಣ ತೆಳ್ಳಗಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಬೊಕ್ಕತಲೆ ಸಮಯೆಗೆ ಗುರಿಯಾಗಬಹುದು. ಹೀಗಾಗಿ ಇಂದು ನಾವು ನಿಮಗಾಗಿ ಕೂದಲು ಉದುರುವಿಕೆ ನಿಯಂತ್ರಣ ತೈಲವನ್ನು ತಂದಿದ್ದೇವೆ. ದಾಸವಾಳದಲ್ಲಿ ಪ್ರೋಟೀನ್ ಹೇರಳ ಪ್ರಮಾಣದಲ್ಲಿರುತ್ತದೆ ಮತ್ತು ಇದು ಕೂದಲಿಗೆ ಒಂದು ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ. ದಾಸವಾಳದ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಸಂಯೋಜನೆಯು ನಿಮ್ಮ ಕೂದಲು ಉದುರುವಿಕೆಯ ಮೇಲೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಈ ಹೇರ್ ಮಾಸ್ಕ್ ಅನ್ನು ಕೂದಲ ಆರೈಕೆಯಲ್ಲಿ ಶಾಮೀಲುಗೊಳಿಸಿದರೆ, ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬಂದು, ಕೂದಲು ಸುಂದರವಾಗಿ, ದಟ್ಟವಾಗಿ ಮತ್ತು ಗಟ್ಟಿಯಾಗಿ ಬೆಳೆಯಲು ಸಹಾಯ ಸಿಗುತ್ತದೆ, ಈ ಎಣ್ಣೆಯನ್ನು ತಯಾರಿಸುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ,

ಕೂದಲು ಉದುರುವಿಕೆ ನಿಯಂತ್ರಣ ತೈಲ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು
>> ದಾಸವಾಳದ ಎಣ್ಣೆಯ ಕೆಲವು ಹನಿಗಳು
>> ಬಾದಾಮಿ ಎಣ್ಣೆಯ ಎರಡು ಸ್ಪೂನ್ಗಳು

ಕೂದಲು ಉದುರುವಿಕೆ ನಿಯಂತ್ರಣ ತೈಲವನ್ನು ಹೇಗೆ ತಯಾರಿಸಬೇಕು?
>> ಕೂದಲುದುರುವಿಕೆ ನಿಯಂತ್ರಣ ತೈಲವನ್ನು ತಯಾರಿಸಲು, ಮೊದಲನೆಯದಾಗಿ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ.
>> ನಂತರ ಅದಕ್ಕೆ ಸ್ವಲ್ಪ ಉಗುರು ಬೆಚ್ಚನೆಯ ದಾಸವಾಳದ ಎಣ್ಣೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
>> ಈಗ ನಿಮ್ಮ ಕೂದಲು ಉದುರುವಿಕೆ ನಿಯಂತ್ರಣ ತೈಲ ಸಿದ್ಧವಾಗಿದೆ.

ಇದನ್ನೂ ಓದಿ-Cholesterol ಕಡಿಮೆ ಇದ್ದರೂ ಅಪಾಯಕಾರಿ, ಮೆದುಳಿನ ಮೇಲೆ ಕೆಟ್ಟ ಪರಿಣಾಮದ ಜೊತೆಗೆ ಕ್ಯಾನ್ಸರ್ ಅಪಾಯ ಕೂಡ ಹೆಚ್ಚಾಗುತ್ತದೆ!

ಕೂದಲು ಉದುರುವಿಕೆ ನಿಯಂತ್ರಣ ತೈಲವನ್ನು ಹೇಗೆ ಅನ್ವಯಿಸಬೇಕು?
>> ಕೂದಲು ಉದುರುವಿಕೆ ನಿಯಂತ್ರಣ ತೈಲವನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ.
>> ನಂತರ ಕನಿಷ್ಠ 5-10 ನಿಮಿಷಗಳ ಕಾಲ ನಿಮ್ಮ ಕೂದಲನ್ನು ಎಲ್ಲಾ ಬದಿಗಳಿಂದ ಸರಿಯಾಗಿ ಮಸಾಜ್ ಮಾಡಿ.
>> ಇದರ ನಂತರ, ನೀವು ಸುಮಾರು ಒಂದು ಗಂಟೆಗಳ ಕಾಲ ಕೂದಲಿನಲ್ಲಿ ಹಾಗೆ ಬಿಡಿ.
>> ಬಳಿಕ ಸೌಮ್ಯವಾದ ಶಾಂಪೂ ಸಹಾಯದಿಂದ ನೀವು ಕೂದಲನ್ನು ತೊಳೆಯಿರಿ.

ಇದನ್ನೂ ಓದಿ-Diabetes Diet: ಸಕ್ಕರೆ ಕಾಯಿಲೆ ಕಾಯಿಲೆ ನಿಯಂತ್ರಣಕ್ಕೆ ವರದಾನವಿದ್ದಂತೆ ಈ ಧಾನ್ಯದ ರೊಟ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ, ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News