Weight loss Tips In Kannada : ಪ್ರತಿ ಅಡುಗೆಯಲ್ಲಿಯೂ ಬಳಸುವ ಮಸಾಲೆ ಪದಾರ್ಥ ಜೀರಿಗೆ.  ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 6 ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಜೀರಿಗೆ ಫೈಬರ್ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಜೀರಿಗೆ ಬೀಜಗಳನ್ನು ತಿನ್ನುವುದು ದೇಹದ  ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ, ಜೊತೆಗೆ ತೂಕ ನಷ್ಟಕ್ಕೆ  ಇದು ಅತ್ಯಂತ ಸಹಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ಅನೇಕ ಆಹಾರ ತಜ್ಞರು ತೂಕ ನಷ್ಟಕ್ಕೆ ಜೀರಿಗೆ ನೀರನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ತೂಕ ನಷ್ಟಕ್ಕೆ ಜೀರಿಗೆ ನೀರನ್ನು ಯಾವ ವಿಧಾನಗಳಲ್ಲಿ ಕುಡಿಯಬೇಕು ನೋಡೋಣ. 


1. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕರಿಬೇವಿನ ನೀರು : 
ಜೀರಿಗೆ ಮತ್ತು ಕರಿಬೇವಿನ ಎಲೆಯ ನೀರು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞ ಡಾ.ಸುಗೀತಾ ಮುತ್ರೇಜಾ. ಇದಕ್ಕಾಗಿ ರಾತ್ರಿ ಒಂದು ಲೋಟ ನೀರಿಗೆ 1 ಚಮಚ ಜೀರಿಗೆ ಮತ್ತು 5-7 ಕರಿಬೇವಿನ ಎಲೆಗಳನ್ನು ಹಾಕಿ. ಈ ನೀರನ್ನು ಫಿಲ್ಟರ್ ಮಾಡಿ  ಬೆಳಿಗ್ಗೆ ಕುಡಿಯಿರಿ. ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ  ಚಯಾಪಚಯ ದರ ಹೆಚ್ಚಾಗುತ್ತದೆ. ಅಲ್ಲದೆ ಜೀರಿಗೆ ಮತ್ತು ಕರಿಬೇವಿನ ಎಲೆಗಳ ನೀರು BMI ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Kidney health : ಕಿಡ್ನಿ ವೈಫಲ್ಯದ ಸಂಕೇತ ನೀಡುತ್ತವೆ ಈ ಲಕ್ಷಣಗಳು !


2. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕೊತ್ತಂಬರಿ ನೀರು : 
ಜೀರಿಗೆ ಮತ್ತು ಕೊತ್ತಂಬರಿ ಎರಡೂ ತೂಕವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಡುತ್ತದೆ ಮತ್ತು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಜೀರಿಗೆ ಮತ್ತು ಕೊತ್ತಂಬರಿ  ಬೀಜವನ್ನು  ನೀರಿನಲ್ಲಿ ಕುದಿಸಿ ಸೋಸಿ ಕುಡಿಯಬಹುದು ಇದು ಕೊಬ್ಬು ಕರಗಿಸಲು ಸಹಕಾರಿ. 


3. ತೂಕ ನಷ್ಟಕ್ಕೆ ಜೀರಿಗೆ ಮತ್ತು ನಿಂಬೆ ನೀರು :
ಜೀರಿಗೆಯಂತೆ, ನಿಂಬೆ ಕೂಡಾ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ .  2 ಚಮಚ ಜೀರಿಗೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಚೆನ್ನಾಗಿ ಕುದಿಸಿ. ಅದರ ನಂತರ, ನೀರನ್ನು ಸೋಸಿಕೊಂಡು ನಿಂಬೆ ರಸ ಬೆರೆಸಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜೀರಿಗೆ ನೀರನ್ನು ಕುಡಿದರೆ ಕ್ರಮೇಣ ತೂಕ ಕಡಿಮೆಯಾಗಲು ಶುರುವಾಗುತ್ತದೆ.


ಇದನ್ನೂ ಓದಿ : Vitamin C Deficiency: ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಈ 2 ಹಣ್ಣುಗಳು ಸಾಕು


4. ತೂಕ ನಷ್ಟಕ್ಕೆ ಜೀರಿಗೆ ಪುಡಿ ನೀರು  : 
ತೂಕ ನಷ್ಟಕ್ಕೆ ಜೀರಿಗೆ ಪುಡಿಯನ್ನು ಸಹ ಬಳಸಬಹುದು. ಒಂದು ಲೋಟ ನೀರನ್ನು ಬಿಸಿ ಮಾಡಿ. ಇದಕ್ಕೆ 1 ಚಮಚ ಜೀರಿಗೆ ಪುಡಿಯನ್ನು ಸೇರಿಸಿ.  ರುಚಿಗೆ ಉಪ್ಪು ಕೂಡಾ ಸೇರಿಸಬಹುದು. ಈ ನೀರನ್ನು ಪ್ರತಿದಿನ ಕುಡಿದರೆ ತೂಕ ಇಳಿಸಿಕೊಳ್ಳಬಹುದು.


5. ತೂಕ ನಷ್ಟಕ್ಕೆ ಜೀರಿಗೆ ಮತ್ತು ಚಕ್ಕೆ ನೀರು : 
ಚಕ್ಕೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೀರಿಗೆ ಮತ್ತು  ಚಕ್ಕೆ ಹಾಕಿ ಕುದಿಸಿ   ಆ ನೀರನ್ನು ಕುಡಿಯಬಹುದು. ಇದಕ್ಕಾಗಿ, ಒಂದು ಲೋಟ ನೀರಿನಲ್ಲಿ 1 ಚಮಚ ಜೀರಿಗೆ ಮತ್ತು  ಚಕ್ಕೆ ತುಂಡುಗಳನ್ನು ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುದಿಸಿ ಕುಡಿಯಿರಿ. ಇದು ತೂಕವನ್ನು ಕಳೆದುಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಈ ಸಂಗತಿಗಳಿಂದ ಇಂದೇ ಅಂತರ ಕಾಯ್ದುಕೊಳ್ಳಿ, ಇಲ್ದಿದ್ರೆ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆ...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.