ಬೆಂಗಳೂರು : ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಗತ್ಯ. ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳು ಬೇಕಾಗುತ್ತವೆ. ಅಂತೆಯೇ, ಕಡಿಮೆ ಕ್ಯಾಲೋರಿ ಸೇವನೆಯು ದೇಹಕ್ಕೆ ಅವಶ್ಯಕವಾಗಿದೆ. ನಾವು ದಿನವಿಡೀ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಿದರೆ, ದೇಹವು ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸಂಗ್ರಹಿಸುತ್ತದೆ. ನಾವು ಆಹಾರ ರೂಪದಲ್ಲಿ ತೆಗೆದುಕೊಳ್ಳುವಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಿನಂತೆ ದೇಹದಲ್ಲಿ ಸಂಗ್ರಹವಾಗುತ್ತವೆ. ಇದರಿಂದಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಬೊಜ್ಜು, ಹೊಟ್ಟೆ ಕೊಬ್ಬು, ಅಧಿಕ ದೇಹದ ತೂಕ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಬಹುತೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಅವಶ್ಯಕ. ತೂಕ ಇಳಿಸಿಕೊಳ್ಳಬೇಕಾದರೆ ದೈನಂದಿನ ಆಹಾರದಲ್ಲಿ ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಈ ಆಹಾರದ ಸಹಾಯದಿಂದ, ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ : ಇನ್ನೇಕೆ ಹೇರ್ ಡೈ, ಹೇರ್ ಪ್ಯಾಕ್… ಈ ಪುಟ್ಟ ಹಣ್ಣು ಸೇವಿಸಿದ್ರೆ ಬಿಳಿಕೂದಲು ಶಾಶ್ವತವಾಗಿ ಬುಡದಿಂದಲೇ ಕಪ್ಪಾಗುತ್ತೆ!
ಕೆಲವು ಆಹಾರಗಳು ತೂಕ ನಷ್ಟದಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತವೆ. ಕೆಲವು ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಕೊಬ್ಬನ್ನು ವೇಗವಾಗಿ ಬರ್ನ್ ಮಾಡಬಹುದು. ದೇಹದ ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುವ ಕೆಲವು ಆಹಾರ ಸಂಯೋಜನೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಬೇಳೆಕಾಳುಗಳು - ಟೊಮ್ಯಾಟೊ :
ಬೇಳೆಕಾಳುಗಳು ಪ್ರೋಟೀನ್, ಫೈಬರ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ . ಇದನ್ನು ಟೊಮೆಟೊಗಳೊಂದಿಗೆ ತಿಂದಾಗ, ಅವುಗಳಲ್ಲಿರುವ ಜೈವಿಕ ಕ್ರಿಯಾಶೀಲ ಫೈಟೊಕೆಮಿಕಲ್ಸ್ BMI ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಪಪ್ಪಾಯಿ ಕಾಳುಗಳು ಈ 3 ರೋಗಗಳಿಗೆ ದಿವ್ಯ ಔಷಧಿ..! ಹೀಗೆ ಸೇವಿಸಬೇಕು ಗೊತ್ತಾ..
ಗ್ರೀನ್ ಟೀ ಮತ್ತು ನಿಂಬೆ :
ಗ್ರೀನ್ ಟೀ ಮತ್ತು ನಿಂಬೆ ತೂಕ ನಷ್ಟಕ್ಕೆ ಉತ್ತಮ ಪಾನೀಯವಾಗಿದೆ. ಇದು ವೇಗವಾಗಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎರಡು ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ಆಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಕ್ಯಾಟೆಚಿನ್ಗಳು ದೊರೆಯುತ್ತವೆ. ಇದು ಯಕೃತ್ತು ಕೊಬ್ಬನ್ನು ಬಳಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಅನಾನಸ್ ಮತ್ತು ನಿಂಬೆ :
ತೂಕವನ್ನು ಕಳೆದುಕೊಳ್ಳಲು ನಿಮ್ಮ ಆಹಾರದಲ್ಲಿ ಅನಾನಸ್ ಮತ್ತು ನಿಂಬೆ ರಸವನ್ನು ಸೇರಿಸಿ. ಎರಡೂ ಹುಳಿ ಉತ್ಪನ್ನಗಳಾಗಿದ್ದು, ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ. ಇವು ಚಯಾಪಚಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇವುಗಳ ಬಳಕೆಯಿಂದ ಚರ್ಮವು ಸುಂದರವಾಗಿರುತ್ತದೆ.
ಇದನ್ನೂ ಓದಿ : ಪ್ರತಿದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ತಿನ್ನುತ್ತೀರಾ..? ಪರಿಣಾಮ ತಿಳಿದರೆ ಶಾಕ್ ಆಗುತ್ತೀರಿ..!
ಅಂಜೂರದ ಹಣ್ಣುಗಳು-ಬ್ರೆಜಿಲ್ ನಟ್ಸ್ :
ಅಂಜೂರದ ಹಣ್ಣುಗಳು ಮತ್ತು ಬ್ರೆಜಿಲ್ ನಟ್ಸ್ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೆಚ್ಚಿನ ಪ್ರಯೋಜನಕಾರಿಯಾಗಿರಲಿದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಇದ್ದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಸಾಕಷ್ಟು ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ದೊರೆಯುತ್ತವೆ.
ಮೊಟ್ಟೆ-ದೊಣ್ಣೆ ಮೆಣಸಿನಕಾಯಿ ( ಶಿಮ್ಲಾ ಮಿರ್ಚ್ ) :
ಮೊಟ್ಟೆಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವಾಗಿದೆ. ಶಿಮ್ಲಾ ಮಿರ್ಚ್ ಅಥವಾ ದೊಣ್ಣೆ ಮೆಣಸಿನಕಾಯಿ ತ್ವರಿತವಾಗಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂನಲ್ಲಿ ಕ್ಯಾಪ್ಸೈಸಿನ್ ಇದೆ ಎಂದು ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿದೆ. ಇದು ಹಸಿವನ್ನು ನಿಗ್ರಹಿಸುತ್ತದೆ. ಈ ಕಾರಣದಿಂದಾಗಿ, ಮೆಣಸಿನಕಾಯಿ ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.