ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಸಾಕು.. ಕೂದಲು ವೇಗವಾಗಿ, ಸದೃಢವಾಗಿ ಬೆಳೆಯುತ್ತವೆ..!
Hair Growth tips : ಕೂದಲು ಮುಖದ ಸೌಂದರ್ಯ ವಿಚಾರದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕಾಗಿ ಕೂದಲು ಉದುರುವ ಮುನ್ನವೇ ಅದರ ರಕ್ಷಣೆ ಮಾಡುವುದು ಒಳ್ಳೆಯದು.. ಒಂದು ವೇಳೆ ನಿಮ್ಮ ಕೇಶರಾಶಿಯ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬರುತ್ತಿದ್ದರೆ.. ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ...
Oils for hair growth : ಕೂದಲು ಬೆಳವಣಿಗೆಗಾಗಿ ನಾವು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದರೂ ಕೆಲವೊಂದಿಷ್ಟು ಬಾರಿ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಈ ಕೆಳಗೆ ನೀಡಿರುವ ಟಿಪ್ಸ್ ಪಾಲಿಸಿ..
ಬಾದಾಮಿ ಎಣ್ಣೆ : ಈ ಎಣ್ಣೆಯಲ್ಲಿ ವಿಟಮಿನ್‌ಗಳು, ಪ್ರೊಟೀನ್‌ಗಳು ಮತ್ತು ಟೋಕೋಫೆರಾಲ್ ಗಳಿವೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯನ್ನು ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಈ ಎಣ್ಣೆ ಕಡಿಮೆ ತೂಕದ್ದಾಗಿದ್ದು, ಕೂದಲು ಕೂಡ ಬೇಗನೆ ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.
ಕ್ಯಾಸ್ಟರ್ ಆಯಿಲ್ : ಕ್ಯಾಸ್ಟರ್ ಆಯಿಲ್‌ಗೆ ವಿಶೇಷ ಮಹತ್ವವಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಿಶೇಷವಾಗಿ ನೆತ್ತಿಯ ಆರೋಗ್ಯಕ್ಕೆ ಕಾಳಜಿ ವಹಿಸುತ್ತದೆ. ಕ್ಯಾಸ್ಟರ್ ಆಯಿಲ್ ಪ್ರೋಟೀನ್ನಲ್ಲಿ ಸಮೃದ್ಧವಾಗಿದ್ದು, ಖನಿಜಗಳು ಮತ್ತು ವಿಟಮಿನ್ ಇ ಅನ್ನು ಹೊಂದಿದೆ. ಕ್ಯಾಸ್ಟರ್ ಆಯಿಲ್ ರಿಸಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಚರ್ಮದ ತುರಿಕೆ ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ರಾಗಿ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆ
ತೆಂಗಿನೆಣ್ಣೆ : ನಿಮ್ಮ ಕೂದಲನ್ನು ದಪ್ಪವಾಗಿಸಲು ತೆಂಗಿನೆಣ್ಣೆ ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ತೆಂಗಿನ ಎಣ್ಣೆಯನ್ನು ಕೂದಲಿನ ಆರೋಗ್ಯಕ್ಕಾಗಿ ವರ್ಷಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಕೊಬ್ಬಿನಾಮ್ಲಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳುತ್ತವೆ. ಇದು ಕೂದಲಿಗೆ ಆಳವಾದ ಪೋಷಣೆಯನ್ನು ನೀಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಆಲಿವ್ ಎಣ್ಣೆ : ಈ ಎಣ್ಣೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಕೂದಲಿನ ಮೇಲೆ ನೈಸರ್ಗಿಕ ಕಂಡೀಷನರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಒಲೀಕ್ ಆಮ್ಲ ಮತ್ತು ವಿಟಮಿನ್ ಇ ಅನ್ನು ಹೊಂದಿದ್ದು, ಕೂದಲು ಬೆಳವಣಿಗೆಗೆ ಇವೆರಡೂ ಅತ್ಯಗತ್ಯ. ಇದರಿಂದ ನಿಮ್ಮ ಕೂದಲು ರಾಕೆಟ್ ವೇಗದಲ್ಲಿ ಬೆಳೆಯುತ್ತದೆ.
(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. Zee Kannada News ಮಾಧ್ಯಮವು ಅದನ್ನು ಅನುಮೋದಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.