dinner menu for Weight Loss : ದೇಹಕ್ಕೆ ಮತ್ತು ಉತ್ತಮ ಆರೋಗ್ಯಕ್ಕೆ ಬೆಳಗ್ಗಿನ ಊಟ ಎಷ್ಟು ಮುಖ್ಯವೋ,ರಾತ್ರಿಯ ಭೋಜನ ಕೂಡಾ ಅಷ್ಟೇ ಮುಖ್ಯ.  ರಾತ್ರಿ ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಣ್ಣಗಾಗುವ ಭರದಲ್ಲಿ ಕೆಲವರು ರಾತ್ರಿಯ ಊಟವನ್ನೇ ಸ್ಕಿಪ್ ಮಾಡಿ ಬಿಡುತ್ತಾರೆ. ಹೀಗೆ ಮಾಡಬಾರದು, ಇದರಿಂದ ತೂಕ ಕಡಿಮೆಯಾಗುವುದಿಲ್ಲ. ಬದಲಾಗಿ ಹೆಚ್ಚುವ ಭಯ ಕಾಡುತ್ತದೆ. 


COMMERCIAL BREAK
SCROLL TO CONTINUE READING

ರಾತ್ರಿ ವೇಳೆ ಲಘುವಾದ ಆದರೆ ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸಿದರೆ, ತೂಕವನ್ನು ಕಳೆದುಕೊಳಲು ಸಹಾಯವಾಗುತ್ತದೆ. ಅದರಲ್ಲಿಯೂ ಕಡಿಮೆ ಮಸಾಲೆ, ಕಡಿಮೆ ಎಣ್ಣೆ ಬಳಸಿರುವ ಆಹಾರ ತೂಕ ಇಳಿಕೆಯಲ್ಲಿ ಹೆಚ್ಚು  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ರಾತ್ರಿ ವೇಳೆ ನಾವು ಏನು ತಿನ್ನುತ್ತೇವೆ ಎನ್ನುವುದನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡುವುದು ಬಹಳ ಮುಖ್ಯ.ಕೆಲವು ಆಹಾರಗಳಿಗೆ ಫ್ಯಾಟ್ ಬರ್ನ್ ಮಾಡುವ ಗುಣಗಳಿರುತ್ತವೆ. ಅಂಥಹ ಆಹಾರಗಳನ್ನು ರಾತ್ರಿ ಭೋಜನದಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. 


ಇದನ್ನೂ ಓದಿ : ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !


ತೂಕ ನಷ್ಟಕ್ಕೆ ರಾತ್ರಿ ಹೊತ್ತು ಏನು ತಿನ್ನಬೇಕು ?: 
ಓಟ್ಸ್ ಇಡ್ಲಿ : ಓಟ್ಸ್ ಇಡ್ಲಿಯನ್ನು ರಾತ್ರಿ ಭೋಜನಕ್ಕೆ ತಿನ್ನಬಹುದು.ಇದು ದೇಹಕ್ಕೆ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನೂ ಒದಗಿಸುತ್ತದೆ. ಓಟ್ಸ್ ಇಡ್ಲಿ ತಿನ್ನುವುದರಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ಅದರ ರುಚಿಯೂ ಅದ್ಭುತವಾಗಿರುತ್ತದೆ.ಓಟ್ಸ್ ಇಡ್ಲಿಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಬಹುದು.


ಕೊಕೊನಟ್ ರೈಸ್ :ಕೊಕೊನಟ್ ರೈಸ್ ತಯಾರಿಸಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ.ಈ ಅನ್ನ ಟೇಸ್ಟಿಯಾಗಿದ್ದು,ತೂಕ ನಷ್ಟಕ್ಕೆ ಬೆಸ್ಟ್ ಎನ್ನಲಾಗಿದೆ. ತೆಂಗಿನಕಾಯಿ ಅನ್ನಕ್ಕೆ ಕಡಲೆಕಾಯಿ,ತೆಂಗಿನಕಾಯಿ,ಗೋಡಂಬಿ ಮತ್ತು ಸಾಸಿವೆಗಳನ್ನು ಸೇರಿಸಲಾಗುತ್ತದೆ.


ಬಟಾಣಿ ಉಪ್ಪಿಟ್ಟು : ಬಟಾಣಿ ಉಪ್ಪಿಟ್ಟನ್ನು ಕೂಡಾ ರಾತ್ರಿಯ ಭೋಜನದಲ್ಲಿ ಸೇವಿಸಬಹುದು. ಉಪ್ಪಿಟ್ಟಿನಲ್ಲಿ ಬಟಾಣಿ ಸೇರಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್,ವಿಟಮಿನ್ ಕೆ,ಸಿ,ಫೋಲೇಟ್,ಪ್ರೊಟೀನ್, ಮ್ಯಾಂಗನೀಸ್ ಮತ್ತು ಫೈಬರ್ ದೊರೆಯುತ್ತದೆ.ಬಟಾಣಿ ಉಪ್ಪಿಟ್ಟಿಗೆ ಕ್ಯಾರೆಟ್, ಮೆಣಸಿನಕಾಯಿ, ಕೊತ್ತಂಬರಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಕೂಡಾ ಸೇರಿಸಿ ತಯಾರಿಸಲಾಗುತ್ತದೆ. 


ಇದನ್ನೂ ಓದಿ : ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಮಹತ್ವದ ಸಲಹೆಗಳು..!


ಎಗ್ ಚಾಟ್ :ಪ್ರೋಟೀನ್ ಪವರ್‌ಹೌಸ್ ಎಗ್ ಚಾಟ್ ಅನ್ನು ರಾತ್ರಿಯ ಊಟದಲ್ಲಿ ತಿನ್ನಬಹುದು.ಬೇಯಿಸಿದ ಮೊಟ್ಟೆ ಮತ್ತು ತರಕಾರಿಗಳನ್ನು ಬೆರೆಸಿ ಈ ಚಾಟ್   ತಯಾರಿಸಬಹುದು.ಆದರೆ, ನೆನಪಿರಲಿ ರಾತ್ರಿ ವೇಳೆ ಎರಡಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಒಳ್ಳೆಯದಲ್ಲ. 


ಓಟ್ಸ್ ಖಿಚಡಿ :ಓಟ್ಸ್ ಫೈಬರ್ ನಲ್ಲಿ ಸಮೃದ್ಧವಾಗಿದ್ದು, ದೇಹಕ್ಕೆ ಹೆಚ್ಚಿನ ಪ್ರೋಟೀನ್ ಅನ್ನು ಒದಗಿಸುತ್ತದೆ.ಮೂಂಗ್ ದಾಲ್,ಓಟ್ಸ್,ಹಸಿರು ಬಟಾಣಿ, ಟೊಮೆಟೊ,ಆಲಿವ್ ಎಣ್ಣೆ ಮತ್ತು ಮೂಂಗ್ ದಾಲ್ ಅನ್ನು ಸಹ ಓಟ್ಸ್ ಖಿಚಡಿಗೆ ಸೇರಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.