Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
Remedy for Kidney Stone:ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ, ಸಂಧಿವಾತ ಮತ್ತು ಇತರ ಸಮಸ್ಯೆಗಳ ಅಪಾಯವೂ ಎದುರಾಗುವುದು. ಮೂತ್ರಪಿಂಡದ ಸಮಸ್ಯೆಯನ್ನು ಕೂಡಾ ಇದು ತಂದೊಡ್ಡುತ್ತದೆ.ಯೂರಿಕ್ ಆಸಿಡ್ ಮಟ್ಟವು ತುಂಬಾ ಹೆಚ್ಚಾದಾಗ,ಅದು ಕೀಲುಗಳಲ್ಲಿ ಹರಳುಗಳ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಯೂರಿಕ್ ಆಸಿಡ್ ನಿಂದಾಗಿ ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ಅದನ್ನು ನೈಸರ್ಗಿಕ ರೀತಿಯಲ್ಲಿ ಪರಿಹರಿಸಿಕೊಳ್ಳಬಹುದು.ಈ ಮೂಲಕ ಕೀಲು ನೋವಿನಿಂದಲೂ ಮುಕ್ತಿ ಪಡೆಯುವುದರ ಜೊತೆಗೆ ಕಿಡ್ನಿ ಆರೋಗ್ಯವನ್ನು ಕೂಡಾ ಕಾಪಾಡಬಹುದು.
ಈ ನೈಸರ್ಗಿಕ ಪರಿಹಾರಗಳಲ್ಲಿ ಪಲಾವ್ ಎಲೆ ಕೂಡಾ ಒಂದು.ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಇದು ಪ್ರಯೋಜನಕಾರಿಯಾಗಿದೆ.ಅಲ್ಲದೆ ಸಂಧಿವಾತ ಸಂಬಂಧಿತ ಸಮಸ್ಯೆಗಳನ್ನು ಕೂಡಾ ಇದು ನಿವಾರಿಸುತ್ತದೆ.
ಈ ಎಲೆಗಳು ವಿಟಮಿನ್ ಸಿ, ಎ ಮತ್ತು ಫೋಲಿಕ್ ಆಸಿಡ್ ಅನ್ನು ಹೇರಳವಾಗಿ ಹೊಂದಿರುತ್ತವೆ. ದೇಹದಲ್ಲಿ ಯೂರಿಕ್ ಆಸಿಡ್ ಗಮನಾರ್ಹವಾಗಿ ಹೆಚ್ಚಾದರೆ ಪಲಾವ್ ಎಲೆಗಳನ್ನು ಬಳಸುವುದು ಆರೋಗ್ಯಕರ ಆಯ್ಕೆ.
ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಚಹಾ ಪುಡಿ ಮತ್ತು 1 ರಿಂದ 2 ಪಲಾವ್ ಎಲೆ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಕುಡಿಯಿರಿ.
ಪಲಾವ್ ಎಲೆಯ ಕಷಾಯ ಮಾಡಿ ಕುಡಿಯಬಹುದು. ಇದಕ್ಕಾಗಿ 1 ಕಪ್ ನೀರಿನಲ್ಲಿ 2 ಪಲಾವ್ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ. ಈ ಕಷಾಯವನ್ನು ಬಿಸಿ ಇರುವಾಗಲೇ ಕುಡಿಯಬೇಕು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.