Soft Drinks Side Effects: ಇತ್ತೀಚಿನ ದಿನಗಳಲ್ಲಿ ನೀವು ಹಲವಾರು ಸಂಶೋಧನೆಗಳನ್ನು ನೀವು ಗಮನಿಸಿರುತ್ತೀರಿ. ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಮಾರುಕಟ್ಟೆಯಲ್ಲಿ ಹೇರಳವಾಗಿ ಮಾರಟಮಾಡಲಾಗುತ್ತೆ. ಅಷ್ಟೇ ಅಲ್ಲ, ಕೂಲ್ ಡ್ರಿಂಕ್ಸ್ ಸೇವಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದ್ರೆ ಇವತ್ತು ತಂಪುಪಾನೀಯಕ್ಕಿಂತ ಅದರಲ್ಲಿರುವ ಸಿಹಿಯ ಅಪಾಯದ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

ಕೋಕಾಕೋಲಾ ಸೇವನೆಯಿಂದ ಕ್ಯಾನ್ಸರ್ ಬರುವ ಅಪಾಯವಿದೆ. ಇದನ್ನು ಕ್ಯಾನ್ಸರ್ ಕುರಿತಾದ ಸಂಶೋಧನೆಗಾಗಿ WHO ಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ದೃಢಪಡಿಸಿದೆ. ಕೋಕಾ-ಕೋಲಾ ಸೇರಿದಂತೆ ಇತರ ತಂಪು ಪಾನೀಯಗಳು, ಜ್ಯೂಸ್ ಮತ್ತು ಆಹಾರ ಪದಾರ್ಥಗಳಿಗೆ ಮಾಧುರ್ಯವನ್ನು ತರಲು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ ಎಂದು ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ. ಇದು ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. 


ಇದನ್ನೂ ಓದಿ- Skin cancer: ದೇಹದ ಮೇಲಿನ ಮಚ್ಚೆ ನೀಡುತ್ತೆ ಚರ್ಮದ ಕ್ಯಾನ್ಸರ್‌ನ ಸೂಚನೆ


ಹಾಗಾದರೆ ಆಸ್ಪರ್ಟೇಮ್‌ನ ಆರೋಗ್ಯದ ಅಪಾಯಗಳೇನು ?
1. ಆಸ್ಪರ್ಟೇಮ್ ಒಂದು ಕೃತಕ ಸಿಹಿಕಾರಕವಾಗಿದೆ. ಇದು ಒಂದು ರೀತಿಯ ಸಕ್ಕರೆ ಬದಲಿಯಾಗಿದೆ. ಇದನ್ನು ರಾಸಾಯನಿಕಗಳನ್ನು ಬೆರೆಸಿ ತಯಾರಿಸಲಾಗುತ್ತದೆ.


2. ವಾಸ್ತವವಾಗಿ ಇದು ಕಾರ್ಸಿನೋಜೆನಿಕ್ ಅಂಶವನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಪ್ರಚೋದಿಸಲು ಕೆಲಸ ಮಾಡುತ್ತದೆ.


3. ಆಸ್ಪರ್ಟೇಮ್ ಇರುವಂತಹ ಯಾವುದನ್ನಾದರೂ ನೀವು ನಿಯಮಿತವಾಗಿ ಸೇವಿಸುತ್ತಿದ್ದರೆ, ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗೆ ನೀವೇ ಆಹ್ವಾನ ನೀಡುತ್ತಿದ್ದೀರಿ ಎಂದರ್ಥ.


4. ಕೃತಕ ಸಿಹಿಕಾರಕ ಆಸ್ಪರ್ಟೇಮ್ ಕ್ಯಾಲೋರಿಯನ್ನು ಲೆಕ್ಕಹಾಕಲು ಆಗುವುದಿಲ್ಲ.  ಸಾಮಾನ್ಯ ಸಕ್ಕರೆಗಿಂತ ಅಂದಾಜು 200 ಪಟ್ಟು ಹೆಚ್ಚು ಟೇಸ್ಟ್ ಹೊಂದಿರುವುದರಿಂದ ಆರೋಗ್ಯಕ್ಕೆ ಇದರ ಬಳಕೆ ಅಪಾಯಕಾರಿ.


5. ಸುಮಾರು 95% ನಷ್ಟು ಆಸ್ಪರ್ಟೇಮ್ ಅನ್ನು ತಂಪು ಪಾನೀಯಗಳಲ್ಲಿ  ಬಳಸಲಾಗುತ್ತದೆ.


ಕ್ಯಾನ್ಸರ್ ಮಾತ್ರವಲ್ಲದೆ, ಕೃತಕ ಸಿಹಿಕಾರಕದಿಂದ ಅನೇಕ ರೋಗಗಳ ಅಪಾಯವಿದೆ: 
ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ:

ಹೌದು, ದಿನಕ್ಕೆ ಎರಡು ಬಾರಿ ಹೆಚ್ಚು ಕೃತಕ ಸಿಹಿಕಾರಕಗಳನ್ನು ಬಳಸುವ ಜನರು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಸಾಮಾನ್ಯಕ್ಕಿಂತ ಹೆಚ್ಚು ಹೊಂದಿರುತ್ತಾರೆ.


ಇದನ್ನೂ ಓದಿ- Superfoods For Children: ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು 5 ಸೂಪರ್‌ಫುಡ್‌ಗಳಿವು


ಮಧುಮೇಹದ ಅಪಾಯ: 
ಕೃತಕ ಸಿಹಿಕಾರಕವನ್ನು ನಿರಂತರವಾಗಿ ಬಳಸುವುದರಿಂದ ಮಧುಮೇಹದ ಚಯಾಪಚಯವು ತೊಂದರೆಗೊಳಗಾಗುತ್ತದೆ. ಇದರಿಂದ ಅವರು ಮಧುಮೇಹಕ್ಕೆ ಒಳಗಾಗುವ ಅಪಾಯ ಇರುತ್ತದೆ


ತೂಕ ಹೆಚ್ಚಳ: 
ಕೃತಕ ಸಿಹಿಯನ್ನು ಬಳಸುವುದರಿಂದ ತೂಕ ಹೆಚ್ಚಾಗುವುದರ ಜೊತೆಗೆ  ಹಸಿವನ್ನು ಹೆಚ್ಚಿಸುತ್ತದೆ.


ನೈಸರ್ಗಿಕ ಸಿಹಿಕಾರಕವನ್ನು ಬಳಸಿ: 
ಪ್ರಕೃತಿ ಅಂದರೆ ನೈಸರ್ಗಿಕವಾಗಿ ಸಿಗುವ ಸಕ್ಕರೆ ಪದಾರ್ಥಗಳನ್ನು ತಿನ್ನಿ. ಹಣ್ಣುಗಳು ಮತ್ತು ನೈಸರ್ಗಿಕ ಪಾನೀಯಗಳನ್ನು ತಿನ್ನಿರಿ ಮತ್ತು ಕುಡಿಯಿರಿ. ಇದರಿಂದ ಯಾವುದೇ ಆರೋಗ್ಯದ ದುಷ್ಪರಿಣಾಮಗಳು ಆಗುವುದಿಲ್ಲ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.