Strawberries for Healthy Heart : ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಹಲವು. ದೈನಂದಿನ ಆಹಾರ ಪದ್ಧತಿ ಮತ್ತು ಅವ್ಯವಸ್ಥೆಯ ಜೀವನಶೈಲಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಬಾಯಿ ರುಚಿಯನ್ನು ಆಧರಿಸಿ ಎಣ್ಣೆಯುಕ್ತ ಮತ್ತು ಅತಿಯಾದ ಮಸಾಲೆ ಭರಿತ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಲಾಗುತ್ತದೆ. ಇದರೊಂದಿಗೆ ಜಂಕ್ ಮತ್ತು ಫಾಸ್ಟ್ ಫುಡ್‌ಗಳ ಮೊರೆ ಹೋಗುವುದು ಕೂಡಾ ಹೆಚ್ಚಾಗುತ್ತಿದೆ. ಈ ಆಹಾರಗಳು ಬಾಯಿ ರುಚಿ ನೀಡಬಹುದು ಆದರೆ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಈ ಕಾರಣದಿಂದಾಗಿ, ನಮ್ಮ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಕ್ರಮೇಣ ಹೆಚ್ಚಿಸುತ್ತದೆ. ಹೀಗಾದಾಗ ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ ಅಪಾಯಕ್ಕೆ ಕಾರಣವಾಗಬಹುದು. ಆದರೆ ಈ ಒಂದು ಹಣ್ಣನ್ನು ತಿನ್ನುವ ಮೂಲಕ ಹೃದಯಾಘಾತ ಮತ್ತು ಹೃದ್ರೋಗದ ಅಪಾಯವನ್ನು ತೆಗೆದು ಹಾಕಬಹುದು.
ಹೃದಯದ ಆರೋಗ್ಯಕ್ಕಾಗಿ ಸ್ಟ್ರಾಬೆರಿ ತಿನ್ನಿ :
ಸ್ಟ್ರಾಬೆರಿ ತಿನ್ನಲು ಎಷ್ಟು ರುಚಿಕರವೋ, ಹೃದಯದ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. ಈ ಕೆಂಪು ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ ಈ ಹಣ್ಣನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದು ಒಂದು ಪ್ರಮುಖ ಕಾಯಿಲೆಯಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಅದೆಷ್ಟೋ ಪ್ರಕರಣಗಳನ್ನು ನಾವು ನೋಡುತ್ತೇವೆ. ಈ ಹಿನ್ನೆಲೆಯಲ್ಲಿ ಹೃದಯದ ದೀರ್ಘಾಯುಷ್ಯಕ್ಕಾಗಿ ಪ್ರತಿದಿನ ಸ್ಟ್ರಾಬೆರಿಗಳನ್ನು ತಿನ್ನಬೇಕು.
ಇದನ್ನೂ ಓದಿ : Monsoon Tips: ಮಳೆಗಾಲದ ಋತುವಿನಲ್ಲಿ ಕಾಮಾಲೆ ರೋಗ ನಿಯಂತ್ರಣಕ್ಕೆ ಇಂದಿನಿಂದಲೇ ಅನುಸರಿಸಿ ಈ ಆಹಾರ ಕ್ರಮ!
ಹೃದಯದ ಆರೋಗ್ಯಕ್ಕೆ ಸ್ಟ್ರಾಬೆರಿ ಏಕೆ ಮುಖ್ಯ? :
ಸ್ಟ್ರಾಬೆರಿಗಳನ್ನು ಪಾಲಿಫಿನಾಲ್‌ನ ಸಮೃದ್ಧ ಮೂಲವೆಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಸ್ಟ್ರಾಬೆರಿಯಲ್ಲಿ ಕಂಡು ಬರುವ ಪಾಲಿಫಿನಾಲ್ ಹೃದಯಾಘಾತದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
ಒಂದು ದಿನದಲ್ಲಿ ಎಷ್ಟು ಸ್ಟ್ರಾಬೆರಿಗಳನ್ನು ತಿನ್ನಬೇಕು? :
ಆರೋಗ್ಯವಂತ ವಯಸ್ಕನು ದಿನಕ್ಕೆ 2 ರಿಂದ 3 ಕಪ್ ಕತ್ತರಿಸಿದ ಸ್ಟ್ರಾಬೆರಿಗಳನ್ನು ತಿನ್ನಬೇಕು ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಈ ಕಾರಣದಿಂದಾಗಿ ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : Health Tips: ಮಧುಮೇಹ ನಿಯಂತ್ರಣದ ಜೊತೆಗೆ ಹೃದ್ರೋಗದಿಂದ ಕೂಡ ರಕ್ಷಿಸುತ್ತದೆ ಈ ತರಕಾರಿ!
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ :
ಹೃದಯಾಘಾತವನ್ನು ತಪ್ಪಿಸಬೇಕಾದರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬೇಕು. ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ ಎನ್ನುವುದು ಪ್ರಪಂಚದಾದ್ಯಂತ ನಡೆದ ಸಂಶೋಧನೆಗಳಿಂದ ಸಾಬೀತಾಗಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.