ನವದೆಹಲಿ: Cashless Treatment For Corona - ದೇಶಾದ್ಯಂತ ಕೊರೊನಾ (Coronavirus) ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿವೆ. ಪ್ರತಿದಿನ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚಿನ ಸಂಖ್ಯೆಯ (Coronavirus Cases In India) ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರ ವರದಿ ಸಕಾರಾತ್ಮಕ ಹೊರಬಂದಿದೆ.  ಇಂತಹ ಪರಿಸ್ಥಿತಿಯಲ್ಲಿ, ಇದೀಗ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಕರೋನಾ ರೋಗಿಗಳಿಗೆ ಪರಿಹಾರ ನೀಡಲು ದೊಡ್ಡ ಘೋಷಣೆಯೊಂದನ್ನು ಮಾಡಿದೆ. ಇತರೆ ಕಾಯಿಲೆಗಳಂತೆ ಇದೇಗ ಕೊರೊನಾ (Covid-19) ರೋಗಿಗಳು ಕೂಡ ಕ್ಯಾಶ್ ಲೆಸ್ ಚಿಕಿತ್ಸೆ ಪಡೆದುಕೊಳ್ಳಬಹುದು.  ನೆಟ್‌ವರ್ಕ್ ಆಸ್ಪತ್ರೆಯಲ್ಲಿ ತಮ್ಮ ತಮ್ಮ ಗ್ರಾಹಕರಿಗೆ ಕೊರೊನಾದ ನಗದುರಹಿತ ಚಿಕಿತ್ಸೆಯನ್ನು ಒದಗಿಸುವಂತೆ ಐಆರ್‌ಡಿಎಐ ವಿಮಾ ಕಂಪನಿಗಳಿಗೆ ಆದೇಶ ನೀಡಿದೆ.  ಇದಕ್ಕಾಗಿ IRDAI ಸಹ ಮಾರ್ಗಸೂಚಿಗಳನ್ನು ಕೂಡ ಹೊರಡಿಸಿದೆ. ಪ್ರಾಧಿಕಾರದ ಈ ನಿರ್ಧಾರವನ್ನು ಸರ್ಕಾರ ಕೂಡ ಸ್ವಾಗತಿಸಿದೆ.


COMMERCIAL BREAK
SCROLL TO CONTINUE READING

ಕೊರೊನಾ ರೋಗಿಗಳಿಗೆ ಇದರಿಂದ ಹೇಗೆ ಲಾಭ ಸಿಗಲಿದೆ?
IRDAI ನೀಡಿರುವ ಈ ನಿರ್ದೇಶನಗಳಿಂದ ಆರೋಗ್ಯ ವಿಮೆ (Health Insurance) ಪಡೆದ ಮತ್ತು ಕರೋನಾ ಚಿಕಿತ್ಸೆಯನ್ನು ನಗದುರಹಿತವಾಗಿ ಪಡೆಯಲು ಬಯಸುವವರಿಗೆ ಈ ಮಾರ್ಗಸೂಚಿಗಳು ದೊಡ್ಡ ಪರಿಹಾರವನ್ನು ಒದಗಿಸಲಿದೆ. ಅಂದರೆ, ಆಸ್ಪತ್ರೆಯೊಂದು ರೋಗಿಗೆ ಎಲ್ಲಾ ಕಾಯಿಲೆಗಳಿಗೆ ಹಣವಿಲ್ಲದ ಚಿಕಿತ್ಸಾ ಸೌಲಭ್ಯವನ್ನು ಒದಗಿಸುತ್ತಿದ್ದರೆ, ಇದೀಗ ಆ ಆಸ್ಪತ್ರೆ ಕೊರೊನಾ ರೋಗಿಗಳಿಗೂ ಕೂಡ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಒದಗಿಸಬೇಕಾಗಲಿದೆ.


ಇದನ್ನೂ ಓದಿ-Big Relief! ಕೊರೊನಾ ಎರಡನೇ ಅಲೆಯ ನಡುವೆ 'ಆರೋಗ್ಯ ಸಂಜೀವನಿ' ವಿಮೆಯ ಹೆಲ್ತ್ ಕವರ್ 10 ಲಕ್ಷ ರೂ.ಗಳಿಗೆ ಹೆಚ್ಚಳ


ವಿಮಾ ಕಂಪೆನಿಗಳು ನಗದು ರಹಿತ ಸೌಲಭ್ಯವನ್ನು (Cashless Treatment) ಒದಗಿಸುತ್ತಿಲ್ಲ ಎಂಬ ದೂರುಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 22 ರಂದು IRDAI ಅಧ್ಯಕ್ಷ ಎಸ್.ಸಿ. ಖುಂಟಿಯಾ ಅವರಿಗೆ ಸೂಚಿಸಿದ್ದರು. ಅಂದರೆ, ಯಾವುದೇ ವಿಮಾ ಕಂಪನಿಯ ಬಗ್ಗೆ ಗ್ರಾಹಕರು ದೂರು ನೀಡಿದರೆ ಇನ್ಮುಂದೆ ತಕ್ಷಣ ಕ್ರಮ ಜರುಗಿಸಲಾಗುವುದು.


ಇದನ್ನೂ ಓದಿ- 'ವಿಮಾ ಕಂಪನಿಗಳು ಆರೋಗ್ಯ ವಿಮೆಯ ಪ್ರಿಮಿಯಂ ಹೆಚ್ಚಿಸುವಂತಿಲ್ಲ'


ಬಿಲ್ ಪಡೆಯುವಾಗ ಈ ಅಂಶಗಳನ್ನು ಗಮನದಲ್ಲಿಡಿ
ಇನ್ಸೂರೆನ್ಸ್ ಪಾಲಸಿ ಪಡೆಯುವಾಗ ಅವುಗಳಲ್ಲಿ ಯಾವ ಯಾವ ರೋಗಗಳನ್ನು ಕವರ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಇದಕ್ಕಾಗಿ ಹೆಲ್ತ್ ಇನ್ಸೂರೆನ್ಸ್ ಯೋಜನೆಯ ಲಿಸ್ಟ್ ಪರಿಶೀಲಿಸಿ. ಇದಲ್ಲದೆ, ಇನ್ಸುರೆನ್ಸ್ ಕಂಪನಿಗಳ ಕ್ಲೇಮ್ ಸೆಟಲ್ಮೆಂಟ್ ರೇಶಿಯೋ ಕೂಡ ಚೆಕ್ ಮಾಡಿ. ಇದರಲ್ಲಿ ನಿಮಗೆ ಕಂಪನಿ ಇದುವರೆಗೆ ಎಷ್ಟು ಜನರ ಚಿಕಿತ್ಸೆಯ ವೆಚ್ಚವನ್ನು ಭಾರಿಸಿದೆ ಎಂಬುದು ತಿಳಿಯಲಿದೆ ಮತ್ತು ಅಗತ್ಯವಿರುವಾಗ ಅದರ ಲಾಭ ಸಿಗಲಿದೆ.


ಇದನ್ನೂ ಓದಿ- Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.