Big Relief! ಕೊರೊನಾ ಎರಡನೇ ಅಲೆಯ ನಡುವೆ 'ಆರೋಗ್ಯ ಸಂಜೀವನಿ' ವಿಮೆಯ ಹೆಲ್ತ್ ಕವರ್ 10 ಲಕ್ಷ ರೂ.ಗಳಿಗೆ ಹೆಚ್ಚಳ

Big Relief! ಆರೋಗ್ಯ ಸಂಜೀವನಿ ಪಾಲಸಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ, ದಾಖಲಾಗುವ ಮೊದಲು ಹಾಗೂ ನಂತರದ ಖರ್ಚು, ಆಯುಶ್ ಚಿಕಿತ್ಸೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆಗಳನ್ನು ನೀವು ಮಾಡಿಸಬಹುದು.

Written by - Nitin Tabib | Last Updated : Mar 19, 2021, 04:46 PM IST
  • ಪ್ರಸ್ತುತ ದೇಶ ಕೊರೊನಾ ಮಹಾಮಾರಿಯ ಎರಡನೇ ಅಲೆಯನ್ನು ಎದುರಿಸುತ್ತಿದೆ.
  • ಏತನ್ಮಧ್ಯೆ ಸರ್ಕಾರ ಕೂಡ ದೇಶದ ಆದಷ್ಟು ಹೆಚ್ಚು ನಾಗರಿಕರನ್ನು ಇನ್ಸುರೆನ್ಸ್ ಪರಧಿಗೆ ತರಲು ಯತ್ನಿಸುತ್ತಿದೆ.
  • ಈ ಹಿನ್ನೆಲೆ IRDAI ಆರೋಗ್ಯ ಸಂಜೀವನಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.
Big Relief! ಕೊರೊನಾ ಎರಡನೇ ಅಲೆಯ ನಡುವೆ 'ಆರೋಗ್ಯ ಸಂಜೀವನಿ' ವಿಮೆಯ ಹೆಲ್ತ್ ಕವರ್ 10 ಲಕ್ಷ ರೂ.ಗಳಿಗೆ ಹೆಚ್ಚಳ title=

Arogya Sanjeevani Policy:ಪ್ರಸ್ತುತ ದೇಶ ಕೊರೊನಾ ಮಹಾಮಾರಿಯ ಎರಡನೇ ಅಲೆಯನ್ನು ಎದುರಿಸುತ್ತಿದೆ. ಏತನ್ಮಧ್ಯೆ ಸರ್ಕಾರ ಕೂಡ ದೇಶದ ಆದಷ್ಟು ಹೆಚ್ಚು ನಾಗರಿಕರನ್ನು ಇನ್ಸುರೆನ್ಸ್ ಪರಧಿಗೆ ತರಲು ಯತ್ನಿಸುತ್ತಿದೆ. ಈ ಹಿನ್ನೆಲೆ ವಿಮಾ ನಿಯಂತ್ರಕ IRDAI ಸ್ಟ್ಯಾಂಡರ್ಡ್ ಆರೋಗ್ಯ ವಿಮಾ ಪಾಲಸಿ (Standard Health Insurance Policy) 'ಆರೋಗ್ಯ ಸಂಜೀವನಿ ಪಾಲಸಿ'ಯ ಕನಿಷ್ಠ ಮಿತಿಯನ್ನು 50,000 ರೂ.ಗಳಿಗೆ ಹಾಗೂ ಗರಿಷ್ಟ ಮಿತಿಯನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. 

ಕೆಳೆದ ವರ್ಷ ಜುಲೈ ತಿಂಗಳಿನಲ್ಲಿ ಭಾರತೀಯ ವಿಮಾ ನಿಯಂತ್ರಕ ವಿಕಾಸ ಪ್ರಾಧಿಕಾರ ಸ್ಟ್ಯಾಂಡರ್ಡ್ ವಿಮಾ ಪಾಲಸಿ ಯಾಗಿರುವ ಆರೋಗ್ಯ ಸಂಜೀವನಿ ಕುರಿತು ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಇದರಲ್ಲಿ ಪ್ರಾಧಿಕಾರ ವಿಮಾ ಕಂಪನಿಗಳಿಗೆ ಕನಿಷ್ಠ ಅಂದರೆ 1 ಲಕ್ಷ ರೂ. ಹಾಗೂ ಗರಿಷ್ಟ ಅಂದರೆ 5 ಲಕ್ಷ ರೂ. ನೀಡುವುದನ್ನು ಕಡ್ಡಾಯಗೊಳಿಸಿತ್ತು.

ಆರೋಗ್ಯ ಸಂಜೀವನಿ ಪಾಲಸಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ, ದಾಖಲಾಗುವ ಮೊದಲು ಹಾಗೂ ನಂತರದ ಖರ್ಚು, ಆಯುಶ್ ಚಿಕಿತ್ಸೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆಗಳನ್ನು ನೀವು ಮಾಡಿಸಬಹುದು.

ಇದನ್ನೂ ಓದಿ-Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ

IRDAI ಸುತ್ತೋಲೆ
ಸಾಮಾನ್ಯ ಹಾಗೂ ಆರೋಗ್ಯ ವಿಮಾ ನೀಡುವ ಕಂಪನಿಗಳಿಗೆ ಸುತ್ತೋಲೆ ಹೊರಡಿಸಿರುವ IRDAI, 'ಆರೋಗ್ಯ ಸಂಜೀವನಿ ಪಾಲಸಿ' ಅಡಿ ಲಭ್ಯವಿರುವ ಕವರೇಜ್ ಅನ್ನು ಪರಿಷ್ಕರಿಸಿ ಬರುವ ಮೇ 1 ರಿಂದ ಪಾಲಸಿಧಾರಕರಿಗೆ ಕನಿಷ್ಠ ಅಂದರೆ ರೂ.50000 ಹಾಗೂ ಗರಿಷ್ಟ 10 ಲಕ್ಷ ರೂ. ಮೊತ್ತ ನೀಡುವುದನ್ನು ಅನಿವಾರ್ಯಗೊಳಿಸಿರುವುದಾಗಿ ಹೇಳಿದೆ. 

ಇದನ್ನೂ ಓದಿ- Health Insurance : ಪಾಲಿಸಿ ಬಗ್ಗೆ ಪಾಲಿಸಿದಾರನಿಗೆ ಅಪ್ ಡೇಟ್ ಮಾಡುವುದು ವಿಮಾ ಕಂಪನಿಯ ಜವಾಬ್ದಾರಿ

ಇದೆ ವೇಳೆ ಈ ಪರಿಷ್ಕೃತ ಮಾರ್ಗಸೂಚಿಗಳು ಎರಡು ನಿರ್ದಿಷ್ಟ ಸರ್ಕಾರಿ ಸಾಮಾನ್ಯ ವಿಮಾ ಕಂಪನಿಗಳಾಗಿರುವ ECGC ಹಾಗೂ AICಗಳಿಗೆ ಅನ್ವಯಿಸುವುದಿಲ್ಲ ಎಂದು IRDAI ಹೇಳಿದೆ. ಏಕೆಂದರೆ ಅಗ್ರಿಕಲ್ಚರಲ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯಾಗಿದ್ದರೆ ECGC ರಫ್ತುದಾರರಿಗೆ ಖಾತರಿ ನೀಡುವ ರಫ್ತು ಸಾಲ ಖಾತರಿ ಕಂಪನಿಯಾಗಿದೆ.

ಇದನ್ನೂ ಓದಿ- Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News