Diabetes Control Tip: ಈ ಎಲೆಗಳನ್ನು ಸೇವಿಸುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗೆ ನೋಡಿದರೆ ಸಕ್ಕರೆ ಖಾಯಿಲೆ ಎಂದರೆ ಸಾಯುವವರೆಗೂ ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆ ಎನ್ನಲಾಗುತ್ತದೆ. ಆದರೆ ಅದನ್ನು ನೀವು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ಹೊಂದಿರುವ ರೋಗಿಗಳು ಯಾವಾಗಲೂ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಅವರು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಇದರಿಂದ ಅವರು ತಮ್ಮ ವಾರದ ಆಹಾರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಸಕ್ಕರೆ ರೋಗಿಗಳಿಗೆ ಸಿಹಿ ಪದಾರ್ಥಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸಲು ಸಲಹೆ ನೀಡಲಾಗಿದ್ದರೂ, ಅನೇಕ ಜನರು ಅದನ್ನು ಅನುಸರಿಸುವುದಿಲ್ಲ. ಹೀಗಾಗಿ ನಾವು ಈ ಗಿಡಮೂಲಿಕೆಗಳ ಸಹಾಯವನ್ನು ಪಡೆದುಕೊಳ್ಳಬಹುದು ಮತ್ತು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Vegetable Viagra: ಬೀಟ್ ರೂಟ್ ಅನ್ನು ತರಕಾರಿಗಳ ವಯಾಗ್ರಾ ಅಂತಾ ಏಕೆ ಕರೆಯುತ್ತಾರೆ ಗೊತ್ತಾ? ಇಲ್ಲಿದೆ ಅದರ ಹಿಂದಿನ ವಿಜ್ಞಾನ!


ಮಧುನಾಶಿನಿ ಎಲೆಗಳ ಲಾಭಗಳು
ಗುಡ್ಮಾರ್ ಎಲೆಗಳು ಅಥವಾ ಮಧುನಾಶಿನಿ ಗಿಡದ ಎಲೆಗಳು ಒಂದು ಆಯುರ್ವೇದ ಔಷಧ ಎಂದು ಕರೆಯಲಾಗುತ್ತದೆ. ಇದು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಅನೇಕ ಜನರು ಇದನ್ನು ಸೇವಿಸುತ್ತಾರೆ. ಮಧುನಾಶಿನಿ ಎಲೆಗಳನ್ನು ಹೇಗೆ ಗುರುತಿಸಬೇಕು ಎಂದರೆ ನೀವು ಈ ಎಲೆಗಳನ್ನು ಕಿತ್ತಿದಾಗ, ಒಂದು ಗಂಟೆಯ ನಂತರ, ಈ ಎಲೆಯ ರುಚಿ ಹೊರಟು ಹೋಗುತ್ತದೆ. ಅದೇ ಅದರ ನಿಜವಾದ ಗುರುತು. ಮಧುನಾಶಿನಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವ ಬಯಕೆಗೆ ಇದು ಕಡಿವಾಣ ಹಾಕುತ್ತದೆ. ಮಧುನಾಶಿನಿ ಎಲೆಗಳ ಸೇವನೆ ಅಸ್ತಮಾ, ಕಣ್ಣಿನ ಸಮಸ್ಯೆಗಳು, ಮಲಬದ್ಧತೆ, ಡಿಸ್ಪೆಪ್ಸಿಯಾ, ಹೈಪರ್ಕೊಲೆಸ್ಟರಾಲೀಮಿಯಾ ಇತ್ಯಾದಿ ಸಮಸ್ಯೆಗಳಿಗೂ ಕೂಡ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-Relationship Tips: ಶಾರೀರಿಕ ಸಂಬಂಧದ ವೇಳೆ ಯುವಕರು ಯುವತಿಯರಲ್ಲಿ ನೋಡೋದು ಇದನ್ನೇ!


ಮಧುನಾಶಿನಿ ಎಲೆಗಳನ್ನು ಹೇಗೆ ಸೇವಿಸಬೇಕು?
ಎಲ್ಲಾ ಔಷಧ ಪದಾರ್ಥಗಳ ಸೇವನೆ ಹೇಗೆ ಭಿನ್ನವಾಗಿರುತ್ತದೆಯೋ, ಅದೇ ರೀತಿ ಈ ಎಲೆಗಳಿಗೂ ಕೂಡ ತನ್ನದೇ ಆದ ಮಹತ್ವವಿದೆ. ರಾತ್ರಿಯ ಊಟದ ಬಳಿಕ ಅಥವಾ ಮಧ್ಯಾಹ್ನದ ಊಟದ ಕೆಲ ಗಂಟೆಗಳ ಬಳಿಕ ಮಧುನಾಶಿನಿ ಎಲೆಗಳ ಒಂದು ಚಮಚೆ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು. ಇದರಲ್ಲಿ ಕಾರ್ಬೋಹೈಡ್ರೆಟ್ಸ್ ಪ್ರಮಾಣ ಅಧಿಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ವೈದ್ಯರ ಸೂಕ್ತ ಸಲಹೆಯ ಬಳಿಕ ಇದನ್ನು ನೀವು ಸೇವಿಸಬಹುದು.,


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ