Signs That Indicates Your Body Needs Detox: ದೇಹದ ಬಾಹ್ಯ ಸ್ವಚ್ಚತೆಯಷ್ಟೇ ದೇಹದ ಆಂತರಿಕ ಶುಚಿತ್ವವೂ ಮುಖ್ಯ. ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಪದಾರ್ಥಗಳು ಹಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯದಿಂದ ಕೂಡಿದ ಜೀವನವನ್ನು ಕಳೆಯಲು, ದೇಹದಲ್ಲಿ ಸಂಗ್ರಹವಾದ ವಿಷಕಾರಿ ಪದಾರ್ಥಗಳನ್ನು ಆಗಾಗ ಹೊರಹಾಕುವುದು ತುಂಬಾ ಅವಶ್ಯಕ. ಜಂಕ್ ಫುಡ್ ಸೇವನೆ, ಸಾಕಷ್ಟು ನೀರು ಕುಡಿಯದಿರುವುದು, ವ್ಯಾಯಾಮ ಮಾಡದಿರುವುದು, ಸರಿಯಾದ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳದಿರುವಂತಹ ಅನೇಕ ಕೆಟ್ಟ ಅಭ್ಯಾಸಗಳು ದೇಹದಲ್ಲಿ ವಿಷಕಾರಿ ಪದಾರ್ಥಗಳ ಸಂಗ್ರಹ ಉಂಟುಮಾಡುತ್ತವೆ. ಈಗ ದೇಹವನ್ನು ಏಕೆ ಡಿಟಾಕ್ಸ್ ಮಾಡಬೇಕು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು ಅಥವಾ ಯಾವ ಸಮಯದಲ್ಲಿ ನಾವು ನಮ್ಮ ದೇಹವನ್ನು ಡಿಟಾಕ್ಸ್ ಮಾಡುವುದು ಉತ್ತಮ? ನಮ್ಮ ದೇಹದಲ್ಲಿ ವಿಷಕಾರಿ ಪದಾರ್ಥಗಳು ಅಧಿಕವಾದಾಗ, ನಮ್ಮ ದೇಹವು ನಮಗೆ ಹಲವು ಸಂಕೇತವನ್ನು ನೀಡುತ್ತದೆ. ಹೀಗಿರುವಾಗ ನಾವು ನಮ್ಮ ದೇಹವನ್ನು ಯಾವಾಗ ಡಿಟಾಕ್ಸ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಬಾಯಿ ಮತ್ತು ದೇಹದ ವಾಸನೆ
ನಮ್ಮ ಬಾಯಿಯಿಂದ ಮತ್ತು ದೇಹದ ಬೆವರಿನಿಂದ ದುರ್ವಾಸನೆ ಬರುತ್ತಿದ್ದರೆ, ನಮ್ಮ ದೇಹದಲ್ಲಿ ಕೊಳೆ ಇರುವುದನ್ನು ಸೂಚಿಸುವ ಒಂದು ಮಹತ್ವದ ಸುಳಿವಾಗಿದೆ. ನಮ್ಮ ದೇಹದಲ್ಲಿ ಬಹಳಷ್ಟು ವಿಷಕಾರಿ ವಸ್ತುಗಳು ಸಂಗ್ರಹವಾದಾಗ, ನಮ್ಮ ದೇಹವು ಹೆಚ್ಚು ಬೆವರುತ್ತದೆ. ಇದರ ಜೊತೆಗೆ ನಿಮ್ಮ ಉಸಿರು ಕೂಡ ಸ್ವಚ್ಛವಾಗಿರುವುದಿಲ್ಲ. ನೀವು ಸಹ ಈ ಸಮಸ್ಯೆಯನ್ನು ಆಗಾಗ್ಗೆ ಎದುರಿಸುತ್ತಿದ್ದರೆ, ನಿಮ್ಮ ದೇಹಕ್ಕೆ ಡಿಟಾಕ್ಸ್ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ನಿಮಗೆ ಹೊಟ್ಟೆನೋವು ಇದ್ದರೆ
ಗ್ಯಾಸ್, ಅಜೀರ್ಣ, ಹೊಟ್ಟೆನೋವು ಮತ್ತು ಮಲಬದ್ಧತೆ ಮುಂತಾದ ಸಮಸ್ಯೆಗಳಿಂದ ಜನರು ತೊಂದರೆಗೊಳಗಾಗುತ್ತಾರೆ. ಆದರೆ ಇವು ನಿಮಗೆ ಡಿಟಾಕ್ಸ್ ಅವಶ್ಯಕತೆ ಇದೆ ಎಂಬುದರ ಸಂಕೇತವಾಗಿರಬಹುದು. ಏಕೆಂದರೆ ಕರುಳಿನಲ್ಲಿ ಸಂಗ್ರಹವಾಗಿರುವ ಕೊಳೆ ಮತ್ತು ವಿಷಕಾರಿ ಪದಾರ್ಥಗಳು ನಿಮ್ಮ ಜೀರ್ಣಕ್ರಿಯೆಯನ್ನು ಹಾಳುಮಾಡುತ್ತವೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನಿಮಗೆ ಹೊಟ್ಟೆನೋವು ಇದ್ದರೆ ಅಥವಾ ಕೆಲವೊಮ್ಮೆ ಅಜೀರ್ಣ ಸಮಸ್ಯೆ ಎದುರಾದರೆ, ನಂತರ ನೀವು ನಿಮ್ಮ ದೇಹವನ್ನು ನಿರ್ವಿಷಗೊಳಿಸಬೇಕಾಗುತ್ತದೆ.


ದೇಹದಲ್ಲಿನ ಹಾರ್ಮೋನುಗಳ ಸಮತೋಲನ ತಪ್ಪಿದಾಗ
ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ದೇಹದಲ್ಲಿ ವಿಷಕಾರಿ ಪದಾರ್ಥಗಳು ಹೆಚ್ಚಾದಾಗ, ಅದು ಅವರ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಹಿಳೆಯರು ಮೂಡ್ ಸ್ವಿಂಗ್, ಕಿರಿಕಿರಿ, ಕೆಲಸದಲ್ಲಿ ನಿರಾಸಕ್ತಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು, ಬಲವಾದ ಚಯಾಪಚಯವನ್ನು ಹೊಂದಿರುವುದು ತುಂಬಾ ಮುಖ್ಯ. ಆದ್ದರಿಂದ, ದೇಹದಲ್ಲಿನ ಹಾರ್ಮೋನುಗಳ ಸಮತೋಲನಕ್ಕಾಗಿ, ದೇಹವನ್ನು ಡಿಟಾಕ್ಸ್ ಮಾಡುವುದು ಅವಶ್ಯಕ.


ಇದನ್ನೂ ಓದಿ-Cooking Tips: ಅಲ್ಯುಮಿನಿಯಂ ಅಷ್ಟೇ ಅಲ್ಲ, ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಕೂಡ ಕೆಲವೊಮ್ಮೆ ಅಪಾಯಕಾರಿ!


ಮುಖದ ಮೇಲೆ ಮೊಡವೆ ಮತ್ತು ಕಲೆಗಳು
ಹೆಚ್ಚಿನ ಚರ್ಮದ ಸಮಸ್ಯೆಗಳು ದೇಹದಲ್ಲಿನ ಕೊಳೆಯಿಂದ ಉಂಟಾಗುತ್ತವೆ. ದೇಹದಲ್ಲಿನ ವಿಷಕಾರಿ ಪದಾರ್ಥಗಳು ನಿಮ್ಮ ರಕ್ತವನ್ನೂ ಅಶುದ್ಧಗೊಳಿಸುತ್ತದೆ. ಚರ್ಮದ ದದ್ದುಗಳು, ಮೊಡವೆಗಳು ಮತ್ತು ಕಲೆಗಳಂತಹ ಸಮಸ್ಯೆಗಳು ಇದರ ಸಂಕೇತಗಳಾಗಿವೆ. ಇದರ ಹೊರತಾಗಿ, ಹಾರ್ಮೋನುಗಳ ಅಸಮತೋಲನದಿಂದ, ಹಲವಾರು ಚರ್ಮದ ಸಮಸ್ಯೆಗಳು ಉಂಟಾಗುತ್ತವೆ , ಆದ್ದರಿಂದ ನೀವು ಚರ್ಮದ ಸಮಸ್ಯೆಗಳನ್ನು ಎದುರಿಸಿದರೆ, ನಿಮ್ಮ ಶರೀರವನ್ನು ನಿರ್ವಿಷಗೊಳಿಸುವ ಅವಶ್ಯಕತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ.


ಇದನ್ನೂ ಓದಿ-Lemon in Diabetes : ಹೆಚ್ಚುತ್ತಿರುವ ಮಧುಮೇಹದ ನಿಯಂತ್ರಣಕ್ಕೆ 'ನಿಂಬೆ ಹಣ್ಣು'

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.