Diabetes Control Tips : ಮಧುಮೇಹವು ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಪ್ರಸ್ತುತ ದಿನಗಳಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗುವುದು ಸಾಮಾನ್ಯವಾಗಿದೆ, ಪ್ರಸ್ತುತ ದಿನಗಳಲ್ಲಿ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಜನ ಈ ಸಕ್ಕರೆಯನ್ನು ನಿಯಂತ್ರಿಸಲು ಅನೇಕ ವಿಧಾನಗಳನ್ನು ಅನುಸರಿಸಿದರು ಅದು ಸಾಧ್ಯವಾಗುತ್ತಿಲ್ಲ, ಅದಕ್ಕೆ ಇಂದು ನಾವು ನಿಮಗೆ ನಿಂಬೆ ಹಣ್ಣಿನಿಂದ ಸಕ್ಕರೆ ಪ್ರಮಾಣ ನಿಯಂತ್ರಿಸುವ ಬಗ್ಗೆ ಮಾಹಿತಿ ತಂದಿದ್ದೇವೆ. ಇದ್ರಲ್ಲಿ ಮಧುಮೇಹ ನಿಯಂತ್ರಣದ ಅನೇಕ ಅಂಶಗಳಿವೆ, ಇದು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ. ನಿಂಬೆಯಿಂದ ಮಧುಮೇಹವನ್ನು ಹೇಗೆ ನಿಯಂತ್ರಿಸುವುದು ಇಲ್ಲಿದೆ ನೋಡಿ...
ನಿಂಬೆ ಹಣ್ಣಿನಲ್ಲಿರುವ ಗುಣಲಕ್ಷಣಗಳು
ವಿಟಮಿನ್-ಎ, ವಿಟಮಿನ್ ಸಿ, ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ಪ್ರೋಟೀನ್ನಂತಹ ಪೋಷಕಾಂಶಗಳು ನಿಂಬೆ ಹಣ್ಣಿನಲ್ಲಿ ಕಂಡುಬರುತ್ತವೆ. ನಿಂಬೆ ಹಣ್ಣಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳು ಸಮೃದ್ಧವಾಗಿದೆ. ನಿಂಬೆ ಹಣ್ಣು ಗ್ಲೈಸೆಮಿಕ್ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಈ ಕಾರಣದಿಂದಾಗಿ ಇದನ್ನು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Health Care: ಕಾಫಿ ಪ್ರಿಯರೇ ಎಚ್ಚರ! ಅತಿಯಾಗಿ ಸೇವಿಸದ್ರೆ ಬುದ್ಧಿಮಾಂದ್ಯತೆ, ಪಾರ್ಶ್ವವಾಯು
ಸಕ್ಕರೆ ಮಟ್ಟವನ್ನು ಹೇಗೆ ಕಡಿಮೆ ಮಾಡುತ್ತದೆ?
ಗ್ಲೈಸೆಮಿಕ್ ಇಂಡೆಕ್ಸ್(Glycemic Index) ಹೆಚ್ಚಿದಷ್ಟೂ ಸಕ್ಕರೆಯ ಮಟ್ಟ ಹೆಚ್ಚುತ್ತದೆ. ಆದ್ದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸಬೇಕು. ನಿಂಬೆ ಹಣ್ಣು ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಾಗುತ್ತದೆ ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮಧುಮೇಹವನ್ನು ನಿಯಂತ್ರಿಸುತ್ತದೆ.
ನಿಂಬೆ ಹಣ್ಣು ಸೇವಿಸುವುದು ಹೇಗೆ?
- ಊಟಕ್ಕೆ ಒಂದು ಗಂಟೆ ಮೊದಲು ಒಂದು ಲೋಟ ನಿಂಬೆ ನೀರು ಕುಡಿಯುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.
- ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಿದರೆ, ಅದರ ಮೇಲೆ ನಿಂಬೆ ತಿನ್ನುವುದರಿಂದ ಮಧುಮೇಹ ಹೆಚ್ಚಾಗುವುದಿಲ್ಲ.
- ನೀವು ಸಲಾಡ್ನಲ್ಲಿ ನಿಂಬೆ ಹಣ್ಣು ಸೇವಿಸಿ ಮತ್ತು ಆಹಾರ ಜೊತೆ ಕೂಡ ಸೇವಿಸಬಹುದು.
- ಆಹಾರದ ಜೊತೆಗೆ ಸೇವಿಸಿದರೆ ನಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ : Cooking Tips: ಅಲ್ಯುಮಿನಿಯಂ ಅಷ್ಟೇ ಅಲ್ಲ, ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಕೂಡ ಕೆಲವೊಮ್ಮೆ ಅಪಾಯಕಾರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.