Boiling Food Health Benefits: ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಕಾರಿಗಳು ಲಭ್ಯವಿದೆ. ಎಲ್ಲಾ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ಕಂಡುಬರುತ್ತವೆ. ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಕೆಲವು ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ವೈದ್ಯರೂ ಸಹ ಬೇಯಿಸಿದ ಆಹಾರವನ್ನು ಸೇವಿಸುವಂತೆ ಶಿಫಾರಸ್ಸು ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಬೇಯಿಸಿದ ಆಹಾರ ಸೇವನೆಯ ಪ್ರಯೋಜನಗಳೇನು?
>> ಬೇಯಿಸಿದ ಆಹಾರ (Boiled Food) ಸುಲಭವಾಗಿ ಜೀರ್ಣವಾಗುತ್ತದೆ. 
>> ಇದು ಹೊಟ್ಟೆಯನ್ನು ಸರಿಯಾಗಿ ಇಡುತ್ತದೆ. 
>> ಇದರೊಂದಿಗೆ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ 
>> ಬೇಯಿಸಿದ ಆಹಾರ ಸೇವನೆಯು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ 
>> ಬೇಯಿಸಿದ ಆಹಾರವು ಆಮ್ಲೀಯತೆಯನ್ನು ತಡೆಯುತ್ತದೆ ಮತ್ತು ಮೂತ್ರಪಿಂಡವನ್ನು ಆರೋಗ್ಯವಾಗಿರಿಸುತ್ತದೆ. 


ಇದನ್ನೂ ಓದಿ- How To Make Coriander Tea: ನಿತ್ಯ ಎದ್ದ ಕೂಡಲೇ ಕುಡಿಯಿರಿ ಒಂದು ಕಪ್ ಕೊತ್ತಂಬರಿ ಚಹಾ


ಹಾಗಿದ್ದರೆ ಯಾವ ತರಕಾರಿಗಳನ್ನು ಬೇಯಿಸಿ (Boiled Vegetables) ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ...


ಜೋಳ/ಕಾರ್ನ್- ಕಾರ್ನ್ ವಿಟಮಿನ್ ಬಿ ಅನ್ನು ಹೊಂದಿರುತ್ತದೆ. ಇದರಲ್ಲಿ ತಾಮ್ರ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವು ಕೂಡ ಇದೆ. ಅದನ್ನು ಬೇಯಿಸಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.


ಗಡ್ಡೆ ಕೋಸು- ವಿಟಮಿನ್ ಸಿ, ವಿಟಮಿನ್ ಕೆ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಅಂಶಗಳು ಕೋಸುಗಡ್ಡೆಯಲ್ಲಿ ಕಂಡುಬರುತ್ತವೆ. ಇದರ ಹೊರತಾಗಿ ಅದರಲ್ಲಿ ಪ್ರೋಟೀನ್ ಕೂಡ ಇದೆ. ನೀವು ಕೋಸುಗಡ್ಡೆ ಸೂಪ್ ರೀತಿಯೂ ಕುಡಿಯಬಹುದು.


ಇದನ್ನೂ ಓದಿ-  Boost Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿ ಪಾಲಿಸಿ ಈ ಸರಳ ನಿಯಮಗಳು!


ಸೀಗಡಿಗಳು - ಇದು ಅತ್ಯುತ್ತಮ ಸಮುದ್ರಾಹಾರ. ನೀವು ಅದನ್ನು ಕುದಿಸಿ ಅಥವಾ ಅದರ ಸೂಪ್ ತಯಾರಿಸುವ ಮೂಲಕ ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.


ಮೊಟ್ಟೆ- ಬೇಯಿಸಿದ ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಪ್ರಮಾಣ ಕಂಡುಬರುತ್ತದೆ. ಈ ಕಾರಣದಿಂದಾಗಿ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.