High Uric Acid Control Tips: ಯೂರಿಕ್ ಆಸಿಡ್ ಪ್ರಸ್ತುತ ಯುಗದ ಸಾಮಾನ್ಯ ಸಮಸ್ಯೆಯಾಗಿದೆ, ಇದಕ್ಕೆ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿ ಕಾರಣವೆಂದು ಹೇಳಬಹುದು. ಯೂರಿಕ್ ಆಮ್ಲವು ಒಂದು ರೀತಿಯ ದೇಹದ ತ್ಯಾಜ್ಯವಾಗಿದ್ದು, ಇದು ಕೀಲು ನೋವು, ನಡಿಗೆಯಲ್ಲಿನ ತೊಂದರೆಗಳು ಮತ್ತು ಪಾದಗಳಲ್ಲಿ ಊತ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಈ ಸಮಸ್ಯೆಯನ್ನು ನಿವಾರಿಸಬಹುದು.


COMMERCIAL BREAK
SCROLL TO CONTINUE READING

ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಕಬ್ಬಿಣದಂತಹ ಅನೇಕ ಪೋಷಕಾಂಶಗಳು ಸೋರೆಕಾಯಿಯಲ್ಲಿ ಕಂಡುಬರುತ್ತವೆ. ಈ ತರಕಾರಿಯ ರಸವನ್ನು ಕುಡಿದರೆ ಯೂರಿಕ್ ಆಸಿಡ್ ನಿಯಂತ್ರಣದಲ್ಲಿರುತ್ತದೆ. ಇದಕ್ಕಾಗಿ, ತಾಜಾ ಸೋರೆಕಾಯಿಯನ್ನು ತೆಗೆದುಕೊಳ್ಳಿ. ಅದರ ಸಿಪ್ಪೆ ತೆಗೆದು ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸರ್ ಗೆ ಹಾಕಿ. ಈ ಜ್ಯೂಸ್‌ನ್ನು ಪ್ರತಿದಿನ ಬೆಳಿಗ್ಗೆ ಕಪ್ಪು ಉಪ್ಪನ್ನು ಬೆರೆಸಿದ ಕುಡಿಯುತ್ತಿದ್ದರೆ, ನೀವು ಕೀಲು ನೋವು ಮತ್ತು ಮೂಳೆಗಳ ಊತದಿಂದ ಪರಿಹಾರವನ್ನು ಪಡೆಯುತ್ತೀರಿ.


ಇದನ್ನೂ ಓದಿ: Diabetes ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಈ ತರಕಾರಿ ಸೂಪ್ ಗಳು


ಸೋರೆಕಾಯಿ ರಸದ ಇತರ ಪ್ರಯೋಜನಗಳು 


ಮಧುಮೇಹ ನಿಯಂತ್ರಿಸಲು ಸಹಾಯಕ: ಮಧುಮೇಹ ರೋಗಿಗಳು ಯೂರಿಕ್ ಆಮ್ಲವನ್ನು ನಿಯಮಿತವಾಗಿ ಸೇವಿಸಬೇಕು ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಕಡಿಮೆ ಕೊಲೆಸ್ಟ್ರಾಲ್ : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾದಾಗ ಅಧಿಕ ರಕ್ತದೊತ್ತಡ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯ ಅಪಾಯವು ಉದ್ಭವಿಸಬಹುದು. ಇದನ್ನು ತಪ್ಪಿಸಲು ಸೋರೆಕಾಯಿ ರಸವನ್ನು ನಿಯಮಿತವಾಗಿ ಕುಡಿಯಿರಿ.


ಇದನ್ನೂ ಓದಿ: ಹಾಗಲಕಾಯಿ ಜ್ಯೂಸ್‌ ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ..?


ತೂಕ ಕಡಿಮೆ ಆಗುತ್ತದೆ: ಪ್ರಸ್ತುತ ಯುಗದಲ್ಲಿ ತೂಕ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿದೆ, ಅಂತಹ ಪರಿಸ್ಥಿತಿಯಲ್ಲಿ, ಸೋರೆಕಾಯಿ ಜ್ಯೂಸ್ ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ತರಕಾರಿಯಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.